ಬೆಂಗಳೂರು: ಆರ್ಮಿ ಗ್ರೂಪ್ ಸಿ ಹುದ್ದೆ ಪರೀಕ್ಷೆಯ ವೇಳೆ ಕಳ್ಳಾಟ ಆರೋಪ ಹಿನ್ನೆಲೆಯಲ್ಲಿ 18 ಪರೀಕ್ಷಾರ್ಥಿಗಳನ್ನು ಕರೆತಂದು ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಬೆಂಗಳೂರಿನ ಹಲಸೂರು ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಲಾಗಿದೆ. ನಿನ್ನೆ ಹಲಸೂರು ಠಾಣಾ ವ್ಯಾಪ್ತಿಯಲ್ಲಿ ಪರೀಕ್ಷೆ ನಡೆದಿತ್ತು. ಪರೀಕ್ಷೆಯಲ್ಲಿ ಮೊಬೈಲ್, ಎಲೆಕ್ಟ್ರಿಕ್ ಡಿವೈಸ್ ಬಳಸಿ ನಕಲು ಮಾಡಲಾಗಿತ್ತು. ಮೂರು ಮೊಬೈಲ್ ಮತ್ತು ಎಲೆಕ್ಟ್ರಿಕ್ ಡಿವೈಸ್ ಗಳನ್ನು ಜಪ್ತಿ ಮಾಡಲಾಗಿತ್ತು. ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರೀಕ್ಷಾರ್ಥಿಗಳ ವಿಚಾರಣೆ ನಡೆಸಲಾಗಿದೆ.

