HomeKarnatakaಮತ್ತೊಂದು ಮಹಾ ವಂಚನೆ ಬೆಳಕಿಗೆ: ಯಾವುದೇ ಶ್ಯೂರಿಟಿ ಇಲ್ಲದೇ ಲೋನ್ ಕೊಡಿಸುವುದಾಗಿ 2 ಸಾವಿರಕ್ಕೂ ಅಧಿಕ...

ಮತ್ತೊಂದು ಮಹಾ ವಂಚನೆ ಬೆಳಕಿಗೆ: ಯಾವುದೇ ಶ್ಯೂರಿಟಿ ಇಲ್ಲದೇ ಲೋನ್ ಕೊಡಿಸುವುದಾಗಿ 2 ಸಾವಿರಕ್ಕೂ ಅಧಿಕ ಮಂದಿಗೆ ಟೋಪಿ

ಬೆಂಗಳೂರು: ಬೆಂಗಳೂರಿನಲ್ಲಿ ಲೋನ್ ಕೊಡಿಸುವುದಾಗಿ ಸುಮಾರು 2000ಕ್ಕೂ ಹೆಚ್ಚು ಜನರಿಗೆ ನಾಲ್ವರು ವಂಚನೆ ಮಾಡಿದ್ದಾರೆ.

ಆನಂದ್, ರೇಷ್ಮಾ, ಅಂಜನ್, ಆನಿಯಾ ಎಂಬುವವರ ವಿರುದ್ಧ ದೂರು ದಾಖಲಾಗಿದೆ. ಯಾವುದೇ ಶ್ಯೂರಿಟಿ ಇಲ್ಲದಿದ್ದರೂ ಲೋನ್ ಕೊಡಿಸುವುದಾಗಿ ಹೇಳಿ ಸಾರ್ವಜನಿಕರಿಗೆ ವಂಚಿಸಲಾಗಿದ್ದು, ಹೈ ಗ್ರೌಂಡ್ಸ್ ಠಾಣೆಯ ಪೊಲೀಸರು ರೇಷ್ಮಾ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಶ್ರೀಕರ ಕೋ ಆಪರೇಟಿವ್ ಸೊಸೈಟಿಯಲ್ಲಿ ಒಂದು ಲಕ್ಷದಿಂದ 25 ಲಕ್ಷ ರೂ. ವರೆಗೂ ಲೋನ್ ಕೊಡಿಸುವುದಾಗಿ ಹೇಳಿ ವಂಚಿಸಲಾಗಿದೆ. ಸಾರ್ವಜನಿಕರಿಗೆ ಲೋನ್ ಕೊಡಿಸಲು ಸಾವಿರಾರು ರೂಪಾಯಿ ಪಡೆದುಕೊಂಡಿದ್ದಾರೆ. 15 ದಿನದ ಒಳಗೆ ಲೋನ್ ಮಾಡಿಕೊಡಲಾಗುವುದು ಎಂದು ಹೇಳಿ ಪ್ರೊಸೆಸಿಂಗ್ ಫೀಜ್, ಖಾತೆ ಓಪನ್ ಮಾಡಲು ಬೇಕಿದೆ ಎಂದು ಹೇಳಿ ಹಣ ಪಡೆದುಕೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಲೋನ್ ಗೆ ಅಪ್ಲೈ ಮಾಡಿದ್ದ ಸಾರ್ವಜನಿಕರ ಮೊಬೈಲ್ ನಂಬರ್ ಅನ್ನೇ ಲೋನ್ ಅಕೌಂಟ್ ನಂಬರ್ ಎಂದು ನಾಲ್ವರು ಆರೋಪಿಗಳು ನೀಡಿದ್ದು, 2000ಕ್ಕೂ ಹೆಚ್ಚು ಜನರಿಗೆ ಕೋಟ್ಯಂತರ ಹಣ ವಂಚಿಸಿದ ಆರೋಪ ಕೇಳಿ ಬಂದಿದೆ.

ಹಣ ವಾಪಸ್ ಕೇಳಿದರೆ ಪ್ರಭಾವಿಗಳ ಹೆಸರು ಹೇಳಿ ಧಮ್ಕಿ ಹಾಕುತ್ತಿದ್ದಾರೆ ಎನ್ನಲಾಗಿದ್ದು, ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular