HomeLatest Newsನಿವೇಶನ ಹೆಸರಲ್ಲಿ ವಂಚನೆ: ಕಿರುತೆರೆ ಕಲಾವಿದರ ಸಂಘದ ವಿರುದ್ಧ ಭಾವನಾ ಬೆಳಗೆರೆ ಸೇರಿ ಹಲವರ ದೂರು

ನಿವೇಶನ ಹೆಸರಲ್ಲಿ ವಂಚನೆ: ಕಿರುತೆರೆ ಕಲಾವಿದರ ಸಂಘದ ವಿರುದ್ಧ ಭಾವನಾ ಬೆಳಗೆರೆ ಸೇರಿ ಹಲವರ ದೂರು

ಬೆಂಗಳೂರು: ನಿವೇಶನ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ವಂಚಿಸಿರುವುದಾಗಿ ಆರೋಪಿಸಿ ರಿಯಲ್ ಎಸ್ಟೇಟ್ ಸಂಸ್ಥೆ ಮತ್ತು ಕಿರುತೆರೆ ಕಲಾವಿದರ ಸಂಘದ ವಿರುದ್ಧ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಗೆ ‘ಬಿಗ್ ಬಾಸ್’ ಸ್ಪರ್ಧಿಯಾಗಿದ್ದ ಭಾವನಾ ಬೆಳೆಗೆರೆ ಸೇರಿ ಹಲವಾರು ದೂರು ನೀಡಿದ್ದು, ಎಫ್ಐಆರ್ ದಾಖಲಾಗಿದೆ.

ಎ.ಎಸ್.ಬಿ. ಡೆವಲಪರ್ಸ್ ಅಂಡ್ ಪ್ರಮೋಟರ್ಸ್ ಮಾಲೀಕ ಭಗೀರಥ, ಕಿರುತೆರೆ ಕಲಾವಿದರ ಸಂಘದ ಪದಾಧಿಕಾರಿಗಳಾದ ಸಂಜೀವ್ ತಗಡೂರು, ರವೀಂದ್ರ, ಉಮಾಕಾಂತ್, ಗುರುಪ್ರಸಾದ್ ವಿರುದ್ಧ ಆರೋಪ ಕೇಳಿ ಬಂದಿದೆ.

ಕಿರುತೆರೆ ಕಲಾವಿದರು ಸೇರಿ ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಸಂಘ ರಚಿಸಿಕೊಂಡಿದ್ದರು. ನಂತರ ಸಂಘದ ಸದಸ್ಯರಿಗೆ ಕಡಿಮೆ ಬೆಲೆಗೆ ನಿವೇಶನ ಕೊಡಿಸುವುದಾಗಿ ಸಂಘ ಹೇಳಿದ್ದು, ಆಗ ಎ.ಎಸ್.ಬಿ. ಡೆವಲಪರ್ಸ್ ಜೊತೆ ಒಡಂಬಡಿಕೆ ಮಾಡಿಕೊಂಡಿದ್ದರು. ಇದಕ್ಕೆ ರಚಿಸಿದ ಸಮಿತಿಯಲ್ಲಿ ಸಂಜೀವ್ ತಗಡೂರು, ರವೀಂದ್ರ, ಉಮಾಕಾಂತ್, ಗುರುಪ್ರಸಾದ್ ಸದಸ್ಯರಾಗಿದ್ದರು. ನಂತರ ನಿವೇಶನ ಸಂಬಂಧ 139 ಜನರಿಂದ ಹಣ ಸಂಗ್ರಹಿಸಿದ್ದರು. ಈಗ ಹಣ ಪಡೆದು ವಂಚಿಸಿದ್ದಾರೆ ಎಂದು ಆರೋಪಿಸಿ ದೂರು ನೀಡಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular