HomeKarnatakaಪರಶುರಾಮ ವಿಗ್ರಹ ನಿರ್ಮಾಣದಲ್ಲಿ ವಂಚನೆ: ಕೇರಳದಲ್ಲಿ ಶಿಲ್ಪಿ ಕೃಷ್ಣನಾಯಕ್ ಅರೆಸ್ಟ್

ಪರಶುರಾಮ ವಿಗ್ರಹ ನಿರ್ಮಾಣದಲ್ಲಿ ವಂಚನೆ: ಕೇರಳದಲ್ಲಿ ಶಿಲ್ಪಿ ಕೃಷ್ಣನಾಯಕ್ ಅರೆಸ್ಟ್

ಕಾರ್ಕಳ: ಕಾರ್ಕಳದ ಬೈಲೂರಿನ ಉಮಿಕಲ್ಲ್ ಬೆಟ್ಟದ ಪರಶುರಾಮ ಥೀಂ ಪಾರ್ಕ್ ನಲ್ಲಿ ಪರಶುರಾಮ ವಿಗ್ರಹ ನಿರ್ಮಾಣದಲ್ಲಿ ವಂಚಿಸಿದ್ದ ಪ್ರಕರಣದ ಆರೋಪಿ ಶಿಲ್ಪಿ ಕೃಷ್ಣನಾಯಕ್ ಅವರನ್ನು ಕೇರಳದ ಕ್ಯಾಲಿಕಟ್ ನಲ್ಲಿ ಭಾನುವಾರ ಪೊಲೀಸರು ಬಂಧಿಸಿದ್ದಾರೆ.

ಕೃಷ್ಣ ಆರ್ಟ್ ವರ್ಲ್ಡ್ ಎಂಬ ಸಂಸ್ಥೆಯ ಮೂಲಕ ಪರಶುರಾಮನ ಕಂಚಿನ ವಿಗ್ರಹ ನಿರ್ಮಿಸಲು ಉಡುಪಿ ನಿರ್ಮಿತಿ ಕೇಂದ್ರದಿಂದ 1.25 ಕೋಟಿ ರೂಪಾಯಿಯನ್ನು ಕೃಷ್ಣನಾಯಕ್ ಪಡೆದುಕೊಂಡಿದ್ದರು. ನಂತರ ಕಂಚಿನ ಬದಲು ನಕಲಿ ವಿಗ್ರಹ ಸಿದ್ಧಪಡಿಸಿ ವಂಚನೆ ಮಾಡಿದ್ದಾರೆಂದು ಕಾರ್ಕಳ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣ ರದ್ದು ಮಾಡುವಂತೆ ಕೋರಿ ಕೃಷ್ಣ ನಾಯಕ್ ಹೈಕೋರ್ಟ್ ನಲ್ಲಿ ಸಲ್ಲಿಸಿದ್ದ ಅರ್ಜಿ ಕಳೆದ ಅಕ್ಟೋಬರ್ 21 ರಂದು ವಜಗೊಂಡಿತ್ತು. ನಂತರ ನಿರೀಕ್ಷಣಾ ಜಾಮೀನು ಕೋರಿ ಉಡುಪಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಕೃಷ್ಣನಾಯಕ್ ಸಲ್ಲಿಸಿದ ಅರ್ಜಿಯೂ ತಿರಸ್ಕೃತಗೊಂಡ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular