HomeKarnatakaಬ್ಯಾಂಕ್ ಅಧಿಕಾರಿಯಿಂದಲೇ ವಂಚನೆ: ಗ್ರಾಹಕರ ಖಾತೆಯಲ್ಲಿದ್ದ ಹಣ ಪತ್ನಿ, ತಂದೆಯ ಖಾತೆಗೆ ವರ್ಗಾವಣೆ

ಬ್ಯಾಂಕ್ ಅಧಿಕಾರಿಯಿಂದಲೇ ವಂಚನೆ: ಗ್ರಾಹಕರ ಖಾತೆಯಲ್ಲಿದ್ದ ಹಣ ಪತ್ನಿ, ತಂದೆಯ ಖಾತೆಗೆ ವರ್ಗಾವಣೆ

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಯಡೂರುನಲ್ಲಿ ಗ್ರಾಹಕರ ಖಾತೆಯಿಂದ 49 ಲಕ್ಷ ರೂ ಗಳನ್ನು ಸಂಬಂಧಿಕರ ಖಾತೆಗೆ ವರ್ಗಾಯಿಸಿ ವಂಚಿಸಿದ ಕೆನರಾ ಬ್ಯಾಂಕ್ ಅಧಿಕಾರಿ ಸುನಿಲ್ ವಿರುದ್ಧ ಹೊಸನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬ್ಯಾಂಕ್ ಅಧಿಕಾರಿ ಸುನಿಲ್ ವಿವಿಧ ಗ್ರಾಹಕರ ಖಾತೆಗಳಿಂದ 49.87 ಲಕ್ಷ ರೂ.ಗಳನ್ನು ತಮ್ಮ ಹಾಗೂ ಪತ್ನಿ, ತಂದೆಯ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದಾರೆ. ಕೆನರಾ ಬ್ಯಾಂಕ್ ಉಪ ಪ್ರಧಾನ ವ್ಯವಸ್ಥಾಪಕರು ಪೊಲೀಸರಿಗೆ ದೂರು ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಗ್ರಾಹಕ ಗಣೇಶ್ ಜಿ.ಎಸ್. ಸೇರಿದಂತೆ ಇತರೆ 8 ಖಾತೆಗಳಿಂದ ವ್ಯವಸ್ಥಾಪಕರ ಗಮನಕ್ಕೆ ತಾರದೆ 49.87 ಲಕ್ಷ ರೂ.ಗಳನ್ನು ಸ್ವಂತ ಖಾತೆಗೆ, ಪತ್ನಿ, ತಂದೆಯ ಖಾತೆಗೆ ಸುನಿಲ್ ವರ್ಗಾವಣೆ ಮಾಡಿಕೊಂಡಿದ್ದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ದೂರು ನೀಡಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular