60ರ ಅಣ್ಣನಿಗೆ ಭಾವಪೂರ್ಣ ಹಾಡಿನೊಂದಿಗೆ ಹುಟ್ಟುಹಬ್ಬದ ಶುಭ ಕೋರಿದ ಸಹೋದರಿಯರು

ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ತಮ್ಮ 60 ವರ್ಷ ವಯಸ್ಸಿನ ಸಹೋದರನ ಹುಟ್ಟುಹಬ್ಬದ ಪ್ರಯುಕ್ತ ನಾಲ್ವರು ಸಹೋದರಿಯರು ವಿಶೇಷವಾದ ಹಾಡೊಂದನ್ನು ಹಾಡಿದ್ದಾರೆ.

ಸಹೋದರ ಟೆಡ್‌ಗೆಂದು ಈ ಹಾಡು ರಚಿಸಿಕೊಂಡು ಬಂದ ಸಹೋದರಿಯರು ನೆಟ್ಟಿಗರ ಮನಸ್ಸು ಕರಗಿಸಿದ್ದಾರೆ. ಮ್ಯಾಜಿಕಲಿ ನ್ಯೂಸ್ ಹೆಸರಿನ ಇನ್ಸ್ಟಾಗ್ರಾಂ ಹ್ಯಾಂಡಲ್‌ನಲ್ಲಿ ಈ ವಿಡಿಯೋ ಶೇರ್‌ ಮಾಡಲಾಗಿದ್ದು, ಅದಾಗಲೇ ಒಂದು ಲಕ್ಷಕ್ಕೂ ಹೆಚ್ಚಿನ ವೀಕ್ಷಣೆಗಳನ್ನು ಕಂಡಿದೆ.

ಕುರ್ಚಿಯ ಮೇಲೆ ಕುಳಿತ ಟೆಡ್ ತನ್ನ ಸಹೋದರಿಯರ ಹಾಡನ್ನು ಕೇಳುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

“ಟೆಡ್‌ ಸದಾ ಜನರನ್ನು ಪ್ರೀತಿಸುತ್ತಲೇ ಇರುತ್ತಾರೆ. ಹೀಗಾಗಿ ಅವರ 60ನೇ ಹುಟ್ಟುಹಬ್ಬದಂದು ವಿಶೇಷ ಹಾಡೊಂದನ್ನು ಅವರ ಸಹೋದರಿಯರು ಹಾಡಿದ್ದಾರೆ. ಆತ ಈ ಹಾಡಿನ ಪ್ರತಿಯೊಂದು ಕ್ಷಣವನ್ನೂ ಎಂಜಾಯ್ ಮಾಡಿದ್ದಾರೆ,” ಎಂದು ವಿಡಿಯೋಗೆ ಕ್ಯಾಪ್ಷನ್ ಕೊಡಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read