HomeLatest NewsSHOCKING: ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಅರಣ್ಯಾಧಿಕಾರಿ ಕೊಂದ ಪತ್ನಿ, ಪುತ್ರ

SHOCKING: ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಅರಣ್ಯಾಧಿಕಾರಿ ಕೊಂದ ಪತ್ನಿ, ಪುತ್ರ

ಭುವನೇಶ್ವರ: ಭುವನೇಶ್ವರದಿಂದ ಸುಮಾರು 85 ಕಿ.ಮೀ ದೂರದಲ್ಲಿರುವ ನಯಾಗಢ ಪಟ್ಟಣದ ಬಾರಾಮಸಿ ಲೇನ್‌ನಲ್ಲಿರುವ ಅವರ ಮನೆಯಲ್ಲಿ ಅರಣ್ಯಾಧಿಕಾರಿಯೊಬ್ಬರನ್ನು ಅವರ ಪತ್ನಿ ಮತ್ತು ಮಗ ಸುಟ್ಟು ಕೊಂದಿರುವ ಭೀಕರ ಘಟನೆ ನಡೆದಿದೆ.

ಮೃತನನ್ನು ಶಿಶಿರ್ ಸಾಹು ಎಂದು ಗುರುತಿಸಲಾಗಿದೆ. ಅವರು ಸರಂಕುಲ್ ಪಂಚರಿಡಾ ವ್ಯಾಪ್ತಿಯಲ್ಲಿ ಅರಣ್ಯಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು. ಶುಕ್ರವಾರ ರಾತ್ರಿ ಸಾಹು ಅವರ ಮನೆಯಿಂದ ಅರ್ಧ ಸುಟ್ಟ ಶವ ಪತ್ತೆಯಾಗಿದೆ ಎಂದು ನಯಾಗಢ ಎಸ್‌ಡಿಪಿಒ ಜ್ಯೋತಿ ರಂಜನ್ ಸಮಂತ್ರೇ ಮಾಹಿತಿ ನೀಡಿದ್ದಾರೆ. ಮರುದಿನವೇ ಅವರ ಪತ್ನಿ ನಮಿತಾ ಮತ್ತು ಮಗ ಅಭಿಷೇಕ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಪೊಲೀಸರ ಪ್ರಕಾರ, ಘಟನೆಯ ಸಮಯದಲ್ಲಿ ನಮಿತಾಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅಭಿಷೇಕ್ ಸಂಪೂರ್ಣವಾಗಿ ಸುರಕ್ಷಿತವಾಗಿದ್ದರು. ಶಿಶಿರ್ ಸಾಹು ಆಗಾಗ್ಗೆ ಮನೆಯಿಂದ ದೂರವಿದ್ದು ಕುಟುಂಬದೊಂದಿಗೆ ಸ್ವಲ್ಪ ಸಮಯ ಕಳೆಯುತ್ತಿದ್ದರಿಂದ ಕೌಟುಂಬಿಕ ಕಲಹವೇ ಈ ಅಪರಾಧಕ್ಕೆ ಕಾರಣವಾಗಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಿಚಾರಣೆಯ ಸಮಯದಲ್ಲಿ, ನಮಿತಾ ಮತ್ತು ಅಭಿಷೇಕ್ ಇಬ್ಬರೂ ಸೇರಿ ಸಾಹು ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾಗಿ ಹೇಳಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ತಲುಪಿ ಬೆಂಕಿಯನ್ನು ನಿಯಂತ್ರಿಸಿದ್ದಾರೆ. ಮನೆಯೊಳಗೆ ಸಿಲುಕಿದ್ದ ಸಾಹು ಅವರ ಅರ್ಧ ಸುಟ್ಟ ಶವವನ್ನು ಹೊರತೆಗೆದಿದ್ದಾರೆ. ವಿಚಾರಣೆಯ ಸಮಯದಲ್ಲಿ, ತಾಯಿ ಮತ್ತು ಮಗ ತಮ್ಮ ಕೃತ್ಯವನ್ನು ಒಪ್ಪಿಕೊಂಡಿದ್ದಾರೆ.

ನಯಾಗಢ ಜಿಲ್ಲೆಯ ಮಣಾಪುರ ಮೂಲದ ಸಿಸಿರ್ ಸಾಹು ಅವರನ್ನು ಸರಂಕುಲ್ ವ್ಯಾಪ್ತಿಯ ಪಂಚರಿದಾ ಅರಣ್ಯ ಪ್ರದೇಶದಲ್ಲಿ ನಿಯೋಜಿಸಲಾಗಿತ್ತು. ಅವರು ಬಾರಾಮಸಿ ಲೇನ್‌ನಲ್ಲಿ ಹೊಸ ಮನೆ ನಿರ್ಮಿಸಿದ್ದರು, ಅಲ್ಲಿ ಅವರ ಪತ್ನಿ ನಮಿತಾ ಸಾಹು(45) ಮತ್ತು ಮಗ ಅಭಿಷೇಕ್ ರಾಣಾಸಿಂಗ್(26) ವಾಸಿಸುತ್ತಿದ್ದರು. ಆದರೂ ದಂಪತಿಗಳ ನಡುವಿನ ವೈವಾಹಿಕ ಕಲಹದಿಂದಾಗಿ ಅವರು ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಶಿಶಿರ್ ಅವರ ಮನೆಗೆ ವಿರಳವಾಗಿ ಭೇಟಿ ನೀಡುತ್ತಿದ್ದರು. ಅವರು ತಮ್ಮ ಕಾರ್ ನಲ್ಲಿ ಅಥವಾ ಡ್ರಾಯಿಂಗ್ ರೂಮಿನಲ್ಲಿ ರಾತ್ರಿ ಕಳೆಯುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular