HomeKarnatakaಬ್ರಿಟಿಷರ ಕಾಲದಲ್ಲಿ ಗುತ್ತಿಗೆ ನೀಡಲಾಗಿದ್ದ ಅರಣ್ಯ ಭೂಮಿ ವಾಪಸ್ : ರಾಜ್ಯ ಸರ್ಕಾರದಿಂದ...

ಬ್ರಿಟಿಷರ ಕಾಲದಲ್ಲಿ ಗುತ್ತಿಗೆ ನೀಡಲಾಗಿದ್ದ ಅರಣ್ಯ ಭೂಮಿ ವಾಪಸ್ : ರಾಜ್ಯ ಸರ್ಕಾರದಿಂದ ಮಹತ್ವದ ಕ್ರಮ

ಬೆಂಗಳೂರು : ಬ್ರಿಟಿಷರ ಕಾಲದಲ್ಲಿ ಅರಣ್ಯ ಭೂಮಿಯನ್ನು ಕಾಫಿ, ರಬ್ಬರ್‌ ಬೆಳೆಯಲು ಗುತ್ತಿಗೆ ಕೊಡಲಾಗಿತ್ತು. ಹೀಗೆ ಗುತ್ತಿಗೆ ನೀಡಲಾದ ಭೂಮಿಯನ್ನು ವಾಪಸ್‌ ಪಡೆಯಲಾಗುತ್ತದೆ ಎಂದು ಅರಣ್ಯ ಸಚಿವ ಈಶ್ವರ್‌ ಖಂಡ್ರೆ ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಸಚಿವರು, ಬ್ರಿಟಿಷರ ಕಾಲದಲ್ಲಿ ಅರಣ್ಯ ಭೂಮಿಯನ್ನು ದೊಡ್ಡ ಪ್ರಮಾಣದಲ್ಲಿ ಕಾಫಿ, ರಬ್ಬರ್‌ ಬೆಳೆಯಲು ಗುತ್ತಿಗೆ ಕೊಡಲಾಗಿತ್ತು. ಹೀಗೆ ಗುತ್ತಿಗೆ ನೀಡಲಾದ ಜಮೀನಿನಲ್ಲಿ ಶೇ.95ರಷ್ಟು ಭೂಮಿ ಈ ಮೂರು ಜಿಲ್ಲೆಗಳಲ್ಲಿಯೇ ಇದೆ. ಸಾಕಷ್ಟು  ದೊಡ್ಡ ಕಂಪೆನಿಗಳು ಗುತ್ತಿಗೆ ಪಡೆದಿವೆ ಎಂದು ಹೇಳಿದರು.

ಇದನ್ನು ವಶಕ್ಕೆ ಪಡೆಯಲು ಹಿಂದೊಮ್ಮೆ ನೋಟಿಸ್‌ ನೀಡಿದ್ದೆವು. ಆಗ ಕಂಪೆನಿಗಳು 999 ವರ್ಷಕ್ಕೆ ಈ ಜಮೀನು ಪಡೆದಿದ್ದಾಗಿ ವಾದಿಸಿದ್ದವು. ಆದರೆ, ನ್ಯಾಯಾಲಯ ಆ ಅವಧಿಯನ್ನು 99 ವರ್ಷಕ್ಕೆ ಇಳಿಸಿತು. ಈಗ ಆ ಅವಧಿಯೂ ಮುಗಿದಿದ್ದು, ಜಮೀನು ವಶಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular