HomeCrimeವಿದೇಶಿ ಮಹಿಳೆಗೆ ಆಸ್ಪತ್ರೆಯಲ್ಲೇ ಲೈಂಗಿಕ ಕಿರುಕುಳ; ಮೇಲ್ ನರ್ಸ್ ಅರೆಸ್ಟ್

ವಿದೇಶಿ ಮಹಿಳೆಗೆ ಆಸ್ಪತ್ರೆಯಲ್ಲೇ ಲೈಂಗಿಕ ಕಿರುಕುಳ; ಮೇಲ್ ನರ್ಸ್ ಅರೆಸ್ಟ್

ಗುರ್ಗಾಂವ್‌ ನ ಖ್ಯಾತ ಖಾಸಗಿ ಆಸ್ಪತ್ರೆಯಾದ ಆರ್ಟೆಮಿಸ್ ನಲ್ಲಿ ವಿದೇಶಿ ಮಹಿಳೆ ಮೇಲೆ ಆಸ್ಪತ್ರೆ ಸಿಬ್ಬಂದಿ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ಬೆಳಕಿಗೆ ಬಂದಿದೆ. 50 ವರ್ಷದ ವಿದೇಶಿ ಮಹಿಳೆಗೆ ನರ್ಸಿಂಗ್ ಅಟೆಂಡೆಂಟ್ ಲೈಂಗಿಕ ಕಿರುಕುಳ ನೀಡಿದ್ದಾನೆ. 25 ವರ್ಷದ ಆರೋಪಿ ರಾಜಸ್ಥಾನದ ತಿಜಾರಾ ಮೂಲದ ಠಾಕೂರ್ ಸಿಂಗ್ ಎಂದು ಗುರುತಿಸಲಾಗಿದೆ. ಆತನನ್ನು ಬಂಧಿಸಿ ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ.

ಮಹಿಳೆ ತನ್ನ ಮಗಳ ಜೊತೆ ಘಟನೆ ನಡೆಯುವ ಒಂದು ದಿನ ಮೊದಲು ಆಸ್ಪತ್ರೆಗೆ ಬಂದಿದ್ದಳು. ಆಕೆಗೆ ಶಸ್ತ್ರಚಿಕಿತ್ಸೆ ನಡೆದಿತ್ತು. ಡೈಪರ್‌ ಬದಲಿಸುವ ವೇಳೆ ಠಾಕೂರ್‌ ಸಿಂಗ್‌, ಅನುಚಿತವಾಗಿ ವರ್ತಿಸಿದ್ದ. ಇದು ಉದ್ದೇಶಪೂರ್ವಕವಾಗಿ ಮಾಡಿದ್ದಲ್ಲ ಎಂದು ಮಹಿಳೆ ಭಾವಿಸಿದ್ದಳು. ಆದ್ರೆ ಅದೇ ಕೆಲಸವನ್ನು ಆತ ಮೂರ್ನಾಲ್ಕು ಬಾರಿ ಮಾಡಿದಾಗ, ಮಹಿಳೆ ಮಗಳಿಗೆ ವಿಷ್ಯ ತಿಳಿಸಿದ್ದಳು. ಕುಟುಂಬಸ್ಥರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆರ್ಟೆಮಿಸ್ ಆಸ್ಪತ್ರೆ, ರೋಗಿಯ ಸುರಕ್ಷತೆ ನಮಗೆ ಮುಖ್ಯ. ತನಿಖೆ ಪೂರ್ಣಗೊಳ್ಳುವವರೆಗೂ ಆರೋಪಿಯನ್ನು ಅಮಾನತು ಮಾಡುವುದಾಗಿ ಹೇಳಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular