HomeKarnatakaಪಡಿತರ ಚೀಟಿದಾರರಿಗೆ ಮುಖ್ಯ ಮಾಹಿತಿ: ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ ಇ-ಕೆವೈಸಿಗೆ ಆ. 31 ಅಂತಿಮ ಗಡುವು:...

ಪಡಿತರ ಚೀಟಿದಾರರಿಗೆ ಮುಖ್ಯ ಮಾಹಿತಿ: ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ ಇ-ಕೆವೈಸಿಗೆ ಆ. 31 ಅಂತಿಮ ಗಡುವು: ಸದಸ್ಯರ ಹೆಸರು ಡಿಲಿಟ್, ರೇಷನ್ ಸ್ಥಗಿತ ಸಾಧ್ಯತೆ

ಪಡಿತರ ಚೀಟಿದಾರರ ಇ-ಕೆವೈಸಿ ಸಂಗ್ರಹಣೆ ಮಾಡಿಸಲು ಆಗಸ್ಟ್ 31 ಅಂತಿಮ ಗಡುವು ನಿಗದಿಪಡಿಸಿದೆ. ಇ-ಕೆವೈಸಿ ಸಂಗ್ರಹಣೆಯಾಗಿಲ್ಲದ ಪಡಿತರ ಚೀಟಿದಾರರು ತಪ್ಪದೇ ಇ-ಕೆವೈಸಿ ಮಾಡಿಸಿಕೊಳ್ಳಬೇಕು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ತಿಳಿಸಿದೆ.

ಪಡಿತರ ಚೀಟಿದಾರರ ಇ.ಕೆ.ವೈ.ಸಿ ಸಂಗ್ರಹಣೆಯನ್ನು 2017ರಿಂದ ನ್ಯಾಯಬೆಲೆ ಅಂಗಡಿಗಳ ಮೂಲಕ ಸಂಗ್ರಹಣೆ ಮಾಡಲಾಗುತ್ತಿದೆ. ಪಡಿತರ ಚೀಟಿಯಲ್ಲಿನ ಸದಸ್ಯರ ಇ-ಕೆ.ವೈ.ಸಿ ಸಂಗ್ರಹಣೆಯಾಗದೇ ಇದ್ದಲ್ಲಿ ಮುಂಬರುವ ದಿನಗಳಲ್ಲಿ ಅಂತಹ ಪಡಿತರ ಚೀಟಿಗಳು, ಸದಸ್ಯರುಗಳ ಹೆಸರುಗಳು ಪಡಿತರ ಚೀಟಿಗಳಿಂದ ಬಿಟ್ಟು ಹೋಗುವ ಮತ್ತು ಆಹಾರಧಾನ್ಯ ಹಂಚಿಕೆ ಸ್ಥಗಿತಗೊಳ್ಳುವ ಸಂಭವವಿರುತ್ತದೆ.

ಆದ್ದರಿಂದ ಇ-ಕೆ.ವೈ.ಸಿ ಸಂಗ್ರಹಣೆಯಾಗಿಲ್ಲದ್ದ ಪಡಿತರ ಚೀಟಿದಾರರು, ಸದಸ್ಯರು ಇದೇ ಆಗಸ್ಟ್ 31ರೊಳಗೆ ತಾವು ರಾಜ್ಯದ, ಜಿಲ್ಲೆಯ, ತಾಲ್ಲೂಕಿನ, ಹಳ್ಳಿಯ, ತಾವು ಇರುವ ಸ್ಥಳದಲ್ಲಿಯೇ ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ ತಮ್ಮ ಜೀವಮಾಪನ ನೀಡಿ ಇ-ಕೆ.ವೈ.ಸಿ ಸಂಗ್ರಹಿಸಿಕೊಳ್ಳಲು ಪಡಿತರ ಚೀಟಿದಾರರಿಗೆ ಅಂತಿಮ ಗಡುವು ನೀಡಿದ್ದು, ತಪ್ಪದೇ ಇ.ಕೆ.ವೈ.ಸಿ ಮಾಡಿಸಬೇಕಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಚಿತ್ರದುರ್ಗ ಜಿಲ್ಲೆಯ ಇ-ಕೆ.ವೈ.ಸಿ ಸಂಗ್ರಹಣೆಯ ಪ್ರಗತಿಯನ್ನು ಪರಾಮರ್ಶೆ ಮಾಡಲಾಗಿ, ಇದುವರೆಗೂ ಜಿಲ್ಲೆಯಲ್ಲಿ ಅಂತ್ಯೋದಯ ಪಡಿತರ ಚೀಟಿ ಸದಸ್ಯರ ಶೇ.96.34 ಮತ್ತು ಆದ್ಯತಾ ಪಡಿತರ ಚೀಟಿ ಸದಸ್ಯರ ಶೇ.97.18 ಸೇರಿದಂತೆ ಒಟ್ಟು ಶೇ.97.07ರಷ್ಟು ಇ-ಕೆ.ವೈ.ಸಿ ಸಂಗ್ರಹಣೆ ಮಾಡಲಾಗಿದೆ ಎಂದು ಚಿತ್ರದುರ್ಗ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular