HomeEntertainmentರಜನಿ ಪುತ್ರಿ ಐಶ್ವರ್ಯಾ ಬಳಿಕ ಈಗ ಗಾಯಕ ಜೇಸುದಾಸ್ ಪುತ್ರನ ಮನೆಯಲ್ಲೂ ಚಿನ್ನಾಭರಣ ಕಳವು

ರಜನಿ ಪುತ್ರಿ ಐಶ್ವರ್ಯಾ ಬಳಿಕ ಈಗ ಗಾಯಕ ಜೇಸುದಾಸ್ ಪುತ್ರನ ಮನೆಯಲ್ಲೂ ಚಿನ್ನಾಭರಣ ಕಳವು

ಗಾಯಕ ಕೆ. ಜೇಸುದಾಸ್ ಅವರ ಪುತ್ರ ಹಿನ್ನೆಲೆ ಗಾಯಕ ವಿಜಯ್ ಯೇಸುದಾಸ್ ಅವರ ಮನೆಯಿಂದ 60 ಸವರನ್ ಚಿನ್ನ ನಾಪತ್ತೆಯಾಗಿದೆ.

ರಜನಿಕಾಂತ್ ಪುತ್ರಿ ಐಶ್ವರ್ಯಾ ರಜನಿಕಾಂತ್ ಅವರ ಮನೆಯಿಂದ ಚಿನ್ನಾಭರಣ ನಾಪತ್ತೆಯಾಗಿದ್ದು ದೊಡ್ಡ ಸುದ್ದಿಯಾದ ಬೆನ್ನಲ್ಲೇ ಪೊಲೀಸರು ಆರೋಪಿಯನ್ನ ಪತ್ತೆ ಹಚ್ಚಿದ್ರು. ಇದೀಗ ಗಾಯಕ ವಿಜಯ್ ಯೇಸುದಾಸ್ ಅವರು ಚೆನ್ನೈನಲ್ಲಿರುವ ತಮ್ಮ ನಿವಾಸದಿಂದ 60 ಸವರನ್ ಚಿನ್ನವನ್ನು ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ.

ವರದಿಗಳ ಪ್ರಕಾರ, ಚೆನ್ನೈನ ಅಭಿರಾಮಪುರಂನಲ್ಲಿ ವಾಸಿಸುತ್ತಿರುವ ಯೇಸುದಾಸ್ ಮತ್ತು ಅವರ ಪತ್ನಿ ತಮ್ಮ ಮನೆಯಿಂದ 60 ಸವರನ್ ಚಿನ್ನ ನಾಪತ್ತೆಯಾಗಿದೆ ಎಂದು ದೂರು ದಾಖಲಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಭಿರಾಮಪುರಂ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಅವರ ನಿವಾಸದಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಹಾಗೂ ಮಾಜಿ ಉದ್ಯೋಗಿಗಳನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular