ಮೊಡವೆ ಸಮಸ್ಯೆ ನಿವಾರಿಸಲು ಈ ʼಉಪಾಯʼ ಅನುಸರಿಸಿ

ಹದಿಹರೆಯದಲ್ಲಿ ಸಾಮಾನ್ಯವಾಗಿ ಎಲ್ಲರನ್ನು ಕಾಡುವ ಸಮಸ್ಯೆ ಮೊಡವೆ. ಮಾಲಿನ್ಯ, ಕೊಳಕು, ಸತ್ತ ಜೀವಕೋಶಗಳಿಂದಾಗಿ ಮೊಡವೆ ಕಾಣಿಸಿಕೊಳ್ಳುತ್ತದೆ. ಮೊಡವೆ ಸಮಸ್ಯೆ ಹೆಚ್ಚಿದ್ದಾಗ ಗೊತ್ತಿಲ್ಲದೆ ಕೆಲವು ಬಾರಿ ಮೊಡವೆಯನ್ನು ಚಿವುಟಿ ಬಿಡ್ತೇವೆ. ಇದು ಇನ್ನೊಂದು ಸಮಸ್ಯೆಗೆ ಕಾರಣವಾಗುತ್ತದೆ.

ಅಪ್ಪಿತಪ್ಪಿ ಮೊಡವೆಯನ್ನು ಒಡೆದು ಬಿಟ್ಟಿದ್ದರೆ ಚಿಂತೆ ಬೇಡ. ತಕ್ಷಣ ಕೆಲವೊಂದು ಉಪಾಯಗಳನ್ನು ಮಾಡಿದ್ರೆ ಕಲೆಯಾಗದಂತೆ ತಡೆಯಬಹುದು. ಮೊಡವೆ ಒಡೆದ ತಕ್ಷಣ ಟಿಶ್ಯು ಅಥವಾ ಬಟ್ಟೆಯನ್ನು ಮೊಡವೆ ಮೇಲಿಟ್ಟು ಚೆನ್ನಾಗಿ ಒತ್ತಿ. ಇದ್ರಿಂದ ಮೊಡವೆಯಲ್ಲಿರುವ ಕೊಳಕು ಹೊರಗೆ ಬರುತ್ತದೆ. ಹೀಗೆ ಮಾಡುವುದರಿಂದ ಮೊಡವೆ ಕೊಳಕು ಮುಖದ ಬೇರೆ ಜಾಗಕ್ಕೆ ಹರಡುವುದಿಲ್ಲ.

ಒಂದು ಸಣ್ಣ ಐಸ್ ತೆಗೆದುಕೊಂಡು ಬಟ್ಟೆಯಲ್ಲಿಟ್ಟು ಮೊಡವೆ ಜಾಗಕ್ಕೆ ಪ್ರೆಸ್ ಮಾಡಿ. ಕೆಲ ಸೆಕೆಂಡುಗಳ ಕಾಲ ಮೊಡವೆ ಮೇಲಿಟ್ಟು ಮತ್ತೆ ತೆಗೆಯಿರಿ. ಮತ್ತೆ ಮೊಡವೆ ಮೇಲಿಡಿ. ಹೀಗೆ 6-7 ಬಾರಿ ಮಾಡಿ.

ಬೇವಿನಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣವಿರುವುದರಿಂದ ಅದು ಸೋಂಕು ಹರಡದಂತೆ ತಡೆಯುತ್ತದೆ. ಹಾಗಾಗಿ ಮೊಡವೆ ಒಡೆದಾಗ ಕೆಲ ಬೇವಿನ ಎಲೆಯನ್ನು ತೆಗೆದುಕೊಂಡು ಪೇಸ್ಟ್ ತಯಾರಿಸಿ ಅದನ್ನು ಮೊಡವೆ ಮೇಲಿಟ್ಟುಕೊಳ್ಳಿ.

ನಿಮ್ಮ ಚರ್ಮ ಸೂಕ್ಷ್ಮವಾಗಿದ್ದರೆ ಅರಿಶಿನ ಒಳ್ಳೆಯದು. ಸ್ವಲ್ಪ ಅರಿಶಿನದ ಪೇಸ್ಟ್ ತೆಗೆದುಕೊಂಡು ಮೊಡವೆ ಜಾಗಕ್ಕಿಡಿ. ಅರಿಶಿನ ಒಣಗಿದ ನಂತ್ರ ತೆಗೆಯಿರಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read