HomeHealthಬೇಸಿಗೆ ಬೇಗೆ ತಾಳಿಕೊಳ್ಳಲು ಫಾಲೋ ಮಾಡಿ ಈ ʼಟಿಪ್ಸ್ʼ

ಬೇಸಿಗೆ ಬೇಗೆ ತಾಳಿಕೊಳ್ಳಲು ಫಾಲೋ ಮಾಡಿ ಈ ʼಟಿಪ್ಸ್ʼ

ಬೇಸಿಗೆಯಲ್ಲಿ ಶರೀರದ ಉಷ್ಣಾಂಶ ಏರಿಕೆಯಾಗುವುದು ಸಹಜ. ಇದರಿಂದ ಶರೀರದಲ್ಲಿ ತ್ವಚೆಯ ಮೇಲೆ ಮೊಡವೆ ಹಾಗೂ ಗುಳ್ಳೆಗಳು ಮೂಡುತ್ತವೆ. ನೀವು ಹೆಚ್ಚು ಹೆಚ್ಚು ನೀರನ್ನು ಕುಡಿದಷ್ಟು ನಿಮ್ಮ ಶರೀರವು ಹೆಚ್ಚು ಉಷ್ಣಾಂಶವನ್ನು ಹೊರಗೆ ಹಾಕುತ್ತದೆ. ಬಿಸಿಲು ತಾಪಕ್ಕೆ ಶರೀರ ಆಯಾಸಗೊಳ್ಳುವುದಿಲ್ಲ. ಪ್ರತಿದಿನವೂ ಕನಿಷ್ಠ 8 ಲೋಟ ನೀರನ್ನು ಕುಡಿಯಬೇಕು.

ಬೇಸಿಗೆ ಅವಧಿಯಲ್ಲಿ ತಿನ್ನಲೇಬೇಕಾದ ಹಣ್ಣು ಅಂದರೆ ಕಲ್ಲಂಗಡಿ. ಇದರಲ್ಲಿ ನೀರು, ನಾರಿನಂಶ, ವಿಟಮಿನ್ ಎ ಮತ್ತು ವಿಟಮಿನ್ ಸಿ ಹೇರಳವಾಗಿವೆ. ಕರ್ಬುಜ ಹಣ್ಣಿನಲ್ಲೂ ಹೇರಳವಾದ ನೀರಿನ ಅಂಶವಿದೆ. ಮೆಂತೆಕಾಳನ್ನು ರಾತ್ರಿ ನೆನೆಸಿಟ್ಟು ಬೆಳಗ್ಗೆ ಆ ನೀರನ್ನು ಕುಡಿಯುವುದರಿಂದ ದೇಹ ತಂಪಾಗಿರುತ್ತದೆ.

ಹೆಚ್ಚು ಖಾರವಿರುವ ಆಹಾರ ಪದಾರ್ಥಗಳನ್ನು ಸೇವಿಸಲೇಬೇಡಿ. ಆದಷ್ಟೂ ಸೊಪ್ಪು, ತರಕಾರಿ, ಸೌತೆಕಾಯಿ, ಮೊಸರು ಇವುಗಳನ್ನು ಸೇವಿಸಿ. ಎಳನೀರು, ಬಾರ್ಲಿ ನೀರನ್ನು ಕುಡಿಯಿರಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular