ಆಗಸದಲ್ಲಿ ಹಾರುತ್ತಿದ್ದ ಸರಕು ಸಾಗಾಟದ ವಿಮಾನವೊಂದರ ಬಾಗಿಲೊಂದು ದಿಢೀರ್ ತೆರೆದುಕೊಂಡ ಘಟನೆಯ ವಿಡಿಯೋ ವೈರಲ್ ಆಗಿದೆ.
ಜೂನ್ 12ರಂದು ಬ್ರೆಜ಼ಿಲ್‌ನ ಸಾವೋ ಲೂಯಿಸ್‌ನಿಂದ ಸಲ್ವಡಾರ್‌ಗೆ ಈ ವಿಮಾನ ಸಾಗುತ್ತಿತ್ತು. ಟ್ವಿಟರ್‌ನಲ್ಲಿ ಶೇರ್ ಮಾಡಲಾದ ಈ ವಿಡಿಯೋ ವೈಮಾನಿಕ ಕ್ಷೇತ್ರದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ.
ಭಾರೀ ಜೋರಾದ ಗಾಳಿಯು ವಿಮಾನದೊಳಗೆ ಬರುತ್ತಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದ್ದು, ವಿಮಾನದ ಹೊರಗಿನ ಮೋಡಗಳನ್ನೂ ಕಾಣಬಹುದಾಗಿದೆ.
“ಬ್ರೆಜ಼ಿಲಿಯನ್ ಗಾಯಕ ಟಿಯರ‍್ರಿ ಹಾಗೂ ಆತನ ಬ್ಯಾಂಡ್ ಸದಸ್ಯರನ್ನು ಹೊತ್ತು ಸಾಗುತ್ತಿದ್ದ ಎನ್‌ಎಚ್‌ಆರ್ ಟ್ಯಾಕ್ಸಿ ಏರೋ ಸಂಸ್ಥೆಯ ಎಂಬ್ರೇಯರ್-110ನಲ್ಲಿ ಈ ಘಟನೆ ಜರುಗಿದೆ,” ಎಂದು ಸುದ್ದಿ ಸಂಸ್ಥೆಯೊಂದು ತಿಳಿಸಿದೆ.
ಘಟನೆಯಲ್ಲಿ ಯಾವುದೇ ಪ್ರಾಣಾಪಾಯವಾಗಿಲ್ಲ. ವಿಮಾನವು ಸುರಕ್ಷಿತವಾಗಿ ಸಾವೋ ಲೂಯಿಸ್ ನಿಲ್ದಾಣದಲ್ಲಿ ಲ್ಯಾಂಡ್ ಆಗಿದೆ.
The aircraft of Brazilian singer and songwriter Tierry safely lands at São Luís Airport after the cargo door opens in flight. pic.twitter.com/VIx79ABtdX
— Breaking Aviation News & Videos (@aviationbrk) June 14, 2023
The Embraer-110 operated by NHR Táxi Aéreo was transporting Tierry and his band members after a show in São Luís, Maranhão, when the incident occurred.
— Breaking Aviation News & Videos (@aviationbrk) June 14, 2023
Rather scary!
— Daryl Webb (@DarylWe42500813) June 14, 2023

