HomeLatest NewsBIG NEWS: ವಿಮಾನ ಟಿಕೆಟ್ ಬುಕ್ಕಿಂಗ್ ಗೆ ದುಪ್ಪಟ್ಟು ಶುಲ್ಕ: ತನಿಖೆಗೆ ಕೇಂದ್ರ ಸಚಿವ ಪ್ರಲ್ಹಾದ್...

BIG NEWS: ವಿಮಾನ ಟಿಕೆಟ್ ಬುಕ್ಕಿಂಗ್ ಗೆ ದುಪ್ಪಟ್ಟು ಶುಲ್ಕ: ತನಿಖೆಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆದೇಶ

ನವದೆಹಲಿ: ವಿಮಾನ ಪ್ರಯಾಣಿಕರಿಗೆ ಆನ್ ಲೈನ್ ಟಿಕೆಟ್ ಬುಕ್ಕಿಂಗ್ ವೇದಿಕೆಗಳು ದುಪ್ಪಟ್ಟು ಶುಲ್ಕ ವಿಧಿಸುತ್ತಿದ್ದು, ತಕ್ಷಣವೇ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ CCPA ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ.

ಆನ್‌ಲೈನ್ ಟಿಕೆಟ್ ಬುಕಿಂಗ್ ವೇದಿಕೆಗಳು ಗ್ರಾಹಕರಿಗೆ ವಿಮಾನಯಾನ ಸಂಸ್ಥೆಗಳು ಈ ವಿಧಿಸುವುದಕ್ಕಿಂತ ದುಪ್ಪಟ್ಟು ಶುಲ್ಕ ಸುಲಿಗೆ ಮಾಡುತ್ತಿರುವುದನ್ನು ಗ್ರಾಹಕರೊಬ್ಬರು ಬಯಲಿಗೆಳೆದಿದ್ದು, ಇದನ್ನು ಗಮನಿಸಿದ ಸಚಿವರು ತನಿಖೆ ನಡೆಸಿ ವಂಚನೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ ಹಾಗೂ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರದ (CCPA) ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಆನ್ ಲೈನ್ ಟಿಕೆಟ್ ಬುಕ್ಕಿಂಗ್ ವೇದಿಕೆಗಳು ವಿಮಾನ ಪ್ರಯಾಣಿಕರಿಗೆ ಟಿಕೆಟ್ ಬುಕಿಂಗ್ ಅಥವಾ ರದ್ದುಪಡಿಸುವಾಗ ವಿಮಾನಯಾನ ಸಂಸ್ಥೆಗಳು ವಿಧಿಸುತ್ತಿದ್ದ ಶುಲ್ಕಕ್ಕಿಂತ 15 ಪಟ್ಟು ಹೆಚ್ಚಿನ ಶುಲ್ಕ ಹೇರುತ್ತಿದ್ದುದುದು ಕಂಡುಬಂದಿದೆ. ಹೀಗಾಗಿ ತಕ್ಷಣವೇ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ CCPA ಗೆ ಆದೇಶಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಟಿಕೆಟ್ ಬುಕಿಂಗ್ ಮತ್ತು ರದ್ದತಿ ವೇಳೆ ಮಿತಿ ಮೀರಿ ಅತಿಯಾದ ಶುಲ್ಕ ವಿಧಿಸುತ್ತಿವೆಯೇ? ಎಂಬುದನ್ನು ತನಿಖೆ ನಡೆಸಿ ಮತ್ತು ವ್ಯಾಪಕವಾಗಿ ಅಂತಹ ಪದ್ಧತಿಗಳು ಕಂಡುಬಂದರೆ ಗ್ರಾಹಕ ಸಂರಕ್ಷಣಾ ಕಾಯ್ದೆ 2019ರ ಅಡಿಯಲ್ಲಿ ಅಗತ್ಯ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ತಿಳಿಸಿದ್ದಾರೆ.

ತೆಜಿಂದರ್ ಪಾಲ್ ಸಿಂಗ್ ಬಗ್ಗಾ ಎಂಬುವರು ಆಗೋಡಾ ಆನ್ ಲೈನ್ ವೇದಿಕೆ ಮೂಲಕ ಮುಂಬೈಗೆ ಟಿಕೆಟ್ ಬುಕ್ ಮಾಡುವಾಗ ಆಕಸ್ಮಿಕವಾಗಿ ಮುಂಬೈ ಬದಲು “ನವಿ ಮುಂಬೈ” ಆಯ್ಕೆ ಮಾಡಿದ್ದರು. ಇದನ್ನು ರದ್ದು ಪಡಿಸಲು ಆಗೋಡಾ ಬರೋಬ್ಬರಿ ₹4,764 ರದ್ದತಿ ಶುಲ್ಕ ಮತ್ತು ಕೇವಲ ₹1,571 ಮರುಪಾವತಿ ತೋರಿಸಿದೆ. ಹೀಗಾಗಿ ಈ ಗ್ರಾಹಕರು ಬಳಿಕ ಅಕಾಸಾ ಏರ್‌ನಲ್ಲಿ ನೇರವಾಗಿ ರದ್ದತಿ ಶುಲ್ಕದ ಪರಿಶೀಲನೆ ನಡೆಸಿದ್ದಾರೆ. ಆಗ ಕೇವಲ ₹299 ರದ್ದತಿ ಶುಲ್ಕ ವಿಧಿಸಿ ₹6,076 ಮರುಪಾವತಿ ತೋರಿಸಿದೆ. ಆದರೆ ಅಗೋಡಾ 15 ಪಟ್ಟು ಹೆಚ್ಚಿನ ಅಂದರೆ ₹4,764 ರದ್ದತಿ ಶುಲ್ಕ ಸುಲಿಗೆ ಮಾಡಿರುವುದು ಬಯಲಾಗಿದೆ.

ಹೀಗಾಗಿ ತೆಜಿಂದರ್ ಪಾಲ್ ಸಿಂಗ್ ಬಗ್ಗಾ, ವಿಮಾನಯಾನ ಸಂಸ್ಥೆ ಕೇವಲ ₹299 ಕಡಿತಗೊಳಿಸುತ್ತಿದ್ದರೆ, ಅಗೋಡಾ ಏಕೆ ₹4,764 ವಿಧಿಸುತ್ತಿದೆ? ಯಾವುದಕ್ಕೆ ಈ ಹೆಚ್ಚುವರಿ ಶುಲ್ಕ? ಇದು ಸಂಪೂರ್ಣ ಅಕ್ರಮವೆಂದು ಗ್ರಾಹಕ ಇಲಾಖೆ ಗಮನ ಸೆಳೆದಿದ್ದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular