HomeKarnatakaSHOCKING NEWS: ಮೀನುಗಾರಿಕೆ ವೇಳೆ ದುರಂತ; ಬಲೆಯಲ್ಲಿ ಸಿಲುಕಿ ಮೀನುಗಾರ ದುರ್ಮರಣ

SHOCKING NEWS: ಮೀನುಗಾರಿಕೆ ವೇಳೆ ದುರಂತ; ಬಲೆಯಲ್ಲಿ ಸಿಲುಕಿ ಮೀನುಗಾರ ದುರ್ಮರಣ

ಉಡುಪಿ: ಮೀನುಗಾರಿಕೆಗೆ ತೆರಳಿದ್ದ ಮೀನುಗಾರನೊಬ್ಬ ಬಲೆಯಲ್ಲಿ ಸಿಲುಕಿ ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಪೊಲಿಪು ಸಮುದ್ರ ಕಿನಾರೆಯಲ್ಲಿ ನಡೆದಿದೆ.

29 ವರ್ಷದ ಕಿಶೋರ್ ಮೃತ ದುರ್ದೈವಿ. ಎಂದಿನಂತೆ ಇಂದು ಕೂಡ ಕಿಶೋರ್ ಮೀನುಗಾರಿಕೆಗೆ ತೆರಳಿದ್ದರು. ಈ ವೇಳೆ ಮೀನಿಗೆ ಬೀಸಿದ್ದ ಬಲೆಯಲ್ಲಿ ಸಿಲುಕಿ ಕಿಶೋರ್ ಸಾವನ್ನಪ್ಪಿದ್ದಾರೆ.

ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular