HomeKarnatakaಸ್ನೇಹಿತನ ಮೊದಲ ರಾತ್ರಿಗೆ ಶುಭ ಕೋರಿ ಹಾಕಿದ್ದ ಬ್ಯಾನರ್ ತೆರವು

ಸ್ನೇಹಿತನ ಮೊದಲ ರಾತ್ರಿಗೆ ಶುಭ ಕೋರಿ ಹಾಕಿದ್ದ ಬ್ಯಾನರ್ ತೆರವು

ಮಂಗಳೂರು: ಸ್ನೇಹಿತನ ಮದುವೆಯಾದ ಸಂಭ್ರಮದಲ್ಲಿ ಮೊದಲ ರಾತ್ರಿಗೆ ಶುಭ ಕೋರಿ ಆತನ ಗೆಳೆಯರು ಫ್ಲೆಕ್ಸ್  ಬ್ಯಾನರ್ ಹಾಕಿದ್ದಾರೆ. ಮೊದಲ ರಾತ್ರಿಯ ಸಂಭ್ರಮ, ಗೆದ್ದು ಬಾ ಗೆಳೆಯ ಎಂದೆಲ್ಲ ಬರೆದ ಬ್ಯಾನರನ್ನು ಸಾರ್ವಜನಿಕವಾಗಿ ಅಳವಡಿಸಲಾಗಿದ್ದು, ಆಕ್ಷೇಪಣೆ ಹಿನ್ನೆಲೆಯಲ್ಲಿ ಇದನ್ನು ತೆರವುಗೊಳಿಸಲಾಗಿದೆ.

ಮಂಗಳೂರಿನ ಉರ್ವ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮದುಮಗನ ಮೊದಲ ರಾತ್ರಿಗೆ ಶುಭಕೋರುವ ನೆಪದಲ್ಲಿ ಗೆಳೆಯರು ಅನಧಿಕೃತ ಬ್ಯಾನರ್ ಅನ್ನು ಸಾರ್ವಜನಿಕವಾಗಿ ಅಳವಡಿಸಿದ್ದು, ಅದರಲ್ಲಿ ಮದುಮಗನ ಫೋಟೋ ಹಾಕಿ ಮೊದಲ ರಾತ್ರಿಯ ಸಂಭ್ರಮ, ಗೆದ್ದು ಬಾ ಗೆಳೆಯ ಎಂದೆಲ್ಲ ಬರೆಯಲಾಗಿದೆ. ಜಾಲತಾಣಗಳಲ್ಲಿ ಇದು ವೈರಲ್ ಆಗಿದ್ದು, ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಪಾಲಿಕೆ ಸಿಬ್ಬಂದಿ ತೆರವುಗೊಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular