HomeIndiaBIG NEWS: ಟೈಮ್ಸ್ ಟವರ್ ನಲ್ಲಿ ಭೀಕರ ಅಗ್ನಿ ಅವಘಡ: ಹೊತ್ತಿ ಉರಿದ ಕಟ್ಟಡದ 7...

BIG NEWS: ಟೈಮ್ಸ್ ಟವರ್ ನಲ್ಲಿ ಭೀಕರ ಅಗ್ನಿ ಅವಘಡ: ಹೊತ್ತಿ ಉರಿದ ಕಟ್ಟಡದ 7 ಅಂತಸ್ತುಗಳು

ಮುಂಬೈ: ಮುಂಬೈನ ಟೈಮ್ಸ್ ಟವರ್ ನಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದೆ. 7 ಅಂತಸ್ತಿನ ಕಟ್ಟಡ ನೋಡ ನೋಡುತ್ತಿದ್ದಂತೆ ಹೊತ್ತಿ ಉರಿದಿದೆ.

ಮುಂಬೈ ನಗರದಲ್ಲಿರುವ ಟೈಮ್ಸ್ ಟವರ್ ನ ಕಮಲಾ ಮಿಲ್ ಕಾಂಪೌಂಡ್ ನ ಲೋವರ್ ಪರೇಲ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯ ಕೆನ್ನಾಲಿಗೆ ಕಟ್ಟಡದ ಏಳು ಅಂತಸ್ತಿನವರೆಗೂ ವ್ಯಾಪಿಸಿದೆ.

ಭಾರಿ ಅಗ್ನಿ ಅವಘಡ ಸಂಭವಿಸಿದೆಯದರೂ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಮುಂಬೈ ಮಹಾನಗರ ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಟೈಮ್ಸ್ ಟವರ್ ಕಟ್ಟಡ 14 ಅಂತಸ್ತುಗಳನ್ನು ಹೊಂದಿದ್ದಿ, 7 ಅಂತಸ್ತಿನವರೆಗೂ ಬೆಂಕಿ ವ್ಯಾಪಿಸಿದ್ದು, ಹೊತ್ತಿ ಉರಿದಿದೆ. ಘಟನಾ ಸ್ಥಳಕ್ಕೆ 9 ಅಗ್ನಿಶಮಕ ವಾಹನ ದೌಡಾಯಿಸಿದ್ದು, ಬೆಂಕಿ ನಿಯಂತ್ರಣಕ್ಕೆ ತಂದಿದ್ದಾರೆ.

 

For Latest News Updates, Join Our Whatsapp Community🚩
RELATED ARTICLES

Most Popular