HomeKarnatakaಮಹಿಳಾ ಕಾನ್ಸ್ ಟೇಬಲ್ 'CDR' ಪಡೆದು ಮಾನಸಿಕ ಕಿರುಕುಳ : ಆರೋಪಿ ವಿರುದ್ಧ 'FIR' ದಾಖಲು

ಮಹಿಳಾ ಕಾನ್ಸ್ ಟೇಬಲ್ ‘CDR’ ಪಡೆದು ಮಾನಸಿಕ ಕಿರುಕುಳ : ಆರೋಪಿ ವಿರುದ್ಧ ‘FIR’ ದಾಖಲು

ಕಲಬುರಗಿ : ಮಹಿಳಾ ಕಾನ್ಸ್ ಟೇಬಲ್ ‘CDR’ ಪಡೆದು ಮಾನಸಿಕ ಕಿರುಕುಳ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಬುರಗಿಯಲ್ಲಿ ಆರೋಪಿ ಮಹೇಶ್ ಸಂಗಾವಿ ಎಂಬಾತನ ವಿರುದ್ಧ FIR ದಾಖಲಾಗಿದೆ.

ಮಹಿಳಾ ಕಾನ್ಸ್ಟೇಬಲ್ ನೀಡಿದ ದೂರಿನ ಮೇರೆಗೆ ಕಲಬುರಗಿ ನಗರದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.ಆರೋಪಿ ಮಹೇಶ್ ಸಂಗಾವಿ ಎಂಬಾತ ಮಹಿಳಾ ಕಾನ್ಸ್ ಟೇಬಲ್ ರೊಬ್ಬರ ನಂಬರ್ ತೆಗೆದುಕೊಂಡು ಆಗಾಗ ಕಾಲ್ ಮಾಡಿ ಮಾತನಾಡುತ್ತಿದ್ದನು. ಇಬ್ಬರ ನಡುವೆ ಸ್ನೇಹ ಕೂಡ ಬೆಳೆದಿತ್ತು, ನಂತರ ಮಹೇಶ್ ಮದುವೆ ಆಗುವಂತೆ ಒತ್ತಾಯಿಸುತ್ತಿದ್ದನು.

ನಂತರ ಆರ್.ಜಿ. ನಗರ ಠಾಣೆಯಲ್ಲಿ ಎಮ್ ಓಬಿ ( ಅಪರಾಧ ಹಿನ್ನೆಲೆಯುಳ್ಳ ಫೈಲ್ ) ಫೈಲ್ನಲ್ಲಿ ಮಹೇಶ್ ಹೆಸರು ನೋಡಿ ಮಹೇಶ್ನಿಂದ ದೂರವಾಗೋದಕ್ಕೆ ಕಾನ್ಸ್ ಟೇಬಲ್ ಮುಂದಾಗಿದ್ದರು. ಈ ವಿಷಯ ತಿಳಿದ ಮಹೇಶ್ ಕಾನ್ಸ್ ಟೇಬಲ್ ಗೆ ಹಣಕ್ಕೆ ಬೇಡಿಯಿಟ್ಟಿದ್ದನು. ಹಣ ಕೊಡದಿದ್ರೆ ಖಾಸಗಿ ವಿಡಿಯೋ, ಫೋಟೋ ವೈರಲ್ ಮಾಡುವ ಬೆದರಿಕೆ ಹಾಕಿದ್ದನು. ಲೇಡಿ ಕಾನ್ಸ್ಟೇಬಲ್ ಬಳಿ 1.5 ಲಕ್ಷ ಹಣ ವಸೂಲಿ ಮಾಡಿರೋದಾಗಿ ಎಫ್ಐಆರ್ನಲ್ಲಿ ದಾಖಲಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular