HomeAstroʼಸಾಲʼ ಕೊಡುವ-ತೆಗೆದುಕೊಳ್ಳುವ ಮೊದಲು ತಿಳಿದಿರಲಿ ಈ ವಿಷಯ....!

ʼಸಾಲʼ ಕೊಡುವ-ತೆಗೆದುಕೊಳ್ಳುವ ಮೊದಲು ತಿಳಿದಿರಲಿ ಈ ವಿಷಯ….!

ಮೈಮೇಲೆ ಸಾಲದ ಹೊರೆಯಿದ್ದರೆ ನೆಮ್ಮದಿಯಿಂದ ಬದುಕುವುದು ಕಷ್ಟ. ಬ್ಯಾಂಕ್ ನಿಂದ ಸಾಲ ಪಡೆದಿರಲಿ ಇಲ್ಲವೆ ಪರಿಚಯಸ್ಥರಿಂದ ಸಾಲ ಪಡೆದಿರಲಿ, ಸಾಲದ ಹೊರೆ ಮೈಮೇಲಿದ್ದರೆ ನಿದ್ರೆ ಬರುವುದಿಲ್ಲ. ಕೆಲವೊಮ್ಮೆ ಎಷ್ಟು ಪ್ರಯತ್ನಪಟ್ಟರೂ ಸಾಲ ತೀರಿಸಲು ಸಾಧ್ಯವಾಗುವುದಿಲ್ಲ. ಇದಕ್ಕೆ ಅನೇಕ ಕಾರಣವಿದೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಂಗಳವಾರ ಯಾವುದೇ ಕಾರಣಕ್ಕೂ ಸಾಲ ತೆಗೆದುಕೊಳ್ಳಬಾರದು. ಹಾಗೆ ಬುಧವಾರ ಸಾಲ ನೀಡಬಾರದು. ಈ ದಿನದಂದು ನೀಡಿದ ಹಣವನ್ನು ಮರಳಿ ಪಡೆಯುವುದು ತುಂಬಾ ಕಷ್ಟ. ಮಂಗಳವಾರ ಎಂದಿಗೂ ಸಾಲ ತೆಗೆದುಕೊಳ್ಳಬೇಡಿ. ಈ ದಿನದಂದು ಸಾಲ ತೆಗೆದುಕೊಂಡರೆ ಅದನ್ನು ವಾಪಸ್ ನೀಡುವುದು ಕಷ್ಟ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹಸ್ತಾ ನಕ್ಷತ್ರದ ಭಾನುವಾರ ಎಂದೂ ಸಾಲ ಪಡೆಯಬಾರದು. ಈ ಸಾಲವನ್ನು ಅನೇಕ ವರ್ಷಗಳ ಕಾಲ ಮರುಪಾವತಿಸುವುದು ಕಷ್ಟ.

ಭರಣಿ, ಕೃತಿಕಾ, ಶತಭಿಷಾ, ಅದ್ರಾ, ಆಶ್ಲೇಶ, ಮಾಘ, ಉತ್ತರಾ, ಪೂರ್ವಾ, ಹಸ್ತಾ ಸಮಯದಲ್ಲಿ ಸಾಲ ನೀಡಿದ್ದರೆ ಈ ಹಣವನ್ನು ಮರಳಿ ಪಡೆಯುವುದು ಕಷ್ಟ.

ನೀವು ಸಾಲ ತೆಗೆದುಕೊಂಡಿದ್ದು, ಅದನ್ನು ವಾಪಸ್ ಮಾಡಲು ಕಷ್ಟವಾಗಿದ್ದರೆ ಮಂಗಳವಾರ ಶ್ರದ್ಧಾ, ಭಕ್ತಿಯಿಂದ ತೃಣಮೋಚಕ ಮಂಗಳ ಸ್ತೋತ್ರವನ್ನು ಜಪಿಸಿ. ಇದ್ರಿಂದ ಸಾಕಷ್ಟು ಪ್ರಯೋಜನ ಸಿಗಲಿದೆ.

For Latest News Updates, Join Our Whatsapp Community🚩
RELATED ARTICLES

Most Popular