HomeLive Newsನಾಳೆ ಭಾರತ ಹಾಗೂ ಶ್ರೀಲಂಕಾ ನಡುವಣ ಅಂತಿಮ ಟಿ 20 ಹಣಾಹಣಿ; ಕ್ಲೀನ್ ಸ್ವೀಪ್ ಮಾಡುವ...

ನಾಳೆ ಭಾರತ ಹಾಗೂ ಶ್ರೀಲಂಕಾ ನಡುವಣ ಅಂತಿಮ ಟಿ 20 ಹಣಾಹಣಿ; ಕ್ಲೀನ್ ಸ್ವೀಪ್ ಮಾಡುವ ನಿರೀಕ್ಷೆಯಲ್ಲಿ ಭಾರತ ತಂಡ

ನಿನ್ನೆ  ಭಾರತ ಹಾಗೂ ಶ್ರೀಲಂಕಾ ನಡುವೆ ನಡೆದ ಎರಡನೇ ಟಿ ಟ್ವೆಂಟಿ ಪಂದ್ಯದಲ್ಲಿ ಮಳೆಯ ಆತಂಕದ ನಡುವೆಯೂ ಭಾರತ ತಂಡ ಜಯಭೇರಿ ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡ 161 ರನ್ಗಳ ದಾಖಲಿಸಿತ್ತು. ಮಳೆ ಬಂದ ಕಾರಣ ಭಾರತ ತಂಡಕ್ಕೆ 8 ಓವರ್ ಗಳಲ್ಲಿ 78 ರನ್ ಗಳಿಸಬೇಕೆಂಬ  ಗುರಿ ನೀಡಲಾಯಿತು, ಭಾರತ ತಂಡ 6. 3 ಓವರ್ ಗಳಲ್ಲೇ ಈ ಪಂದ್ಯದಲ್ಲಿ ಜಯಭೇರಿ ಆಗುವ ಮೂಲಕ ಸರಣಿ ತನ್ನದಾಗಿಸಿಕೊಂಡಿದೆ.

ನಾಳೆ ಪಲ್ಲೆಕೆಲೆಯಲ್ಲಿ ಭಾರತ ಹಾಗೂ ಶ್ರೀಲಂಕಾ ನಡುವಣ ಅಂತಿಮ ಟಿ 20 ಪಂದ್ಯ ನಡೆಯುತ್ತಿದ್ದು,  ಯುವ ಭಾರತ ತಂಡ ಕ್ಲೀನ್ ಸ್ವೀಪ್ ಮಾಡುವ ನಿರೀಕ್ಷೆಯಲ್ಲಿದೆ. ಶ್ರೀಲಂಕಾ ತಂಡಕ್ಕೆ ತನ್ನ ತವರಿನಲ್ಲೇ ಮುಖಭಂಗವಾಗಿದ್ದು,  ಅಂತಿಮ ಟಿ20 ಪಂದ್ಯದಲ್ಲಿ ಯಾವ ರೀತಿ ಪ್ರದರ್ಶನ ತೋರಲಿದೆ ಕಾದು ನೋಡಬೇಕಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular