HomeKarnatakaಹಬ್ಬದ ಮುಂಗಡ: ಕರ್ನಾಟಕದ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್

ಹಬ್ಬದ ಮುಂಗಡ: ಕರ್ನಾಟಕದ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್

ಕರ್ನಾಟಕ ಸರ್ಕಾರ ರಾಜ್ಯ ಸರ್ಕಾರಿ ನೌಕರರಿಗೆ ಬಂಪರ್ ಕೊಡುಗೆ ನೀಡಿದೆ. ಸರ್ಕಾರಿ ನೌಕರರು ಹಬ್ಬದ ಮುಂಗಡ ಪಡೆಯಲು ಅಧಿಸೂಚಿಸಿರುವ ಹಬ್ಬಗಳೊಂದಿಗೆ ಹೆಚ್ಚುವರಿಯಾಗಿ ಕೆಲವು ಹಬ್ಬಗಳನ್ನು ಸೇರ್ಪಡೆಗೊಳಿಸಿ ಆದೇಶವನ್ನು ಹೊರಡಿಸಿದೆ.

ಈ ಕುರಿತು ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ನಾಗರತ್ನ ವಿ.ಪಾಟೀಲ್, ಸರ್ಕಾರದ ಅಧೀನ ಕಾರ್ಯದರ್ಶಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಸೇವಾ ನಿಯಮಗಳು-2) ಆದೇಶವನ್ನು ಹೊರಡಿಸಿದ್ದಾರೆ.

ಈ ಆದೇಶ ರಾಜ್ಯ ಸರ್ಕಾರಿ ನೌಕರರು ಹಬ್ಬದ ಮುಂಗಡ ಪಡೆಯಲು ಅಧಿಸೂಚಿಸಿರುವ ಹಬ್ಬಗಳೊಂದಿಗೆ ಹೆಚ್ಚುವರಿಯಾಗಿ ಕೆಲವು ಹಬ್ಬಗಳನ್ನು ಸೇರ್ಪಡೆಗೊಳಿಸುವ ಬಗ್ಗೆ ಎಂಬ ವಿಷಯವನ್ನು ಒಳಗೊಂಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ರಸ್ತಾವನೆ: ಸರ್ಕಾರದ ಆದೇಶಗಳ ಅನುಸಾರ ಹಬ್ಬಗಳಿಗಾಗಿ ಮುಂಗಡ ಹಣವನ್ನು ರಾಜ್ಯ ಸರ್ಕಾರಿ ನೌಕರರಿಗೆ ಮಂಜೂರು ಮಾಡಲು ನಿಗದಿಪಡಿಸಿದ ಅರ್ಜಿಯಲ್ಲಿ ಈ ಕೆಳಕಂಡ ಹಬ್ಬಗಳಿಗೆ ಮಾತ್ರ ಹಬ್ಬದ ಮುಂಗಡ ಹಣವನ್ನು ಮಂಜೂರು ಮಾಡಲಾಗುತ್ತಿದೆ.

  • ಸೌರಮಾನ/ ಚಂದ್ರಮಾನ ಯುಗಾದಿ
  • ಮಕರ ಸಂಕ್ರಾಂತಿ
  • ದೀಪಾವಳಿ
  • ಗಣೇಶ ಚತುರ್ಥಿ
  • ರಂಜಾನ್
  • ಬಕ್ರೀದ್
  • ಈದ್-ಎ-ಮಿಲಾದ್
  • ಈಸ್ಟರ್
  • ಗಣತಂತ್ರ ದಿನ
  • ಸ್ವಾತಂತ್ರ್ಯ ದಿನ
  • ದಸರಾ

ಪ್ರಸ್ತುತ ರಾಜ್ಯ ಸರ್ಕಾರಿ ನೌಕರರು ಹಬ್ಬದ ಮುಂಗಡವನ್ನು ಪಡೆಯಲು ಅಧಿಸೂಚಿಸಿರುವ ಹಬ್ಬಗಳೊಂದಿಗೆ ಈ ಕೆಳಕಂಡ ಹಬ್ಬಗಳನ್ನು ಹೆಚ್ಚುವರಿಯಾಗಿ ಸೇರ್ಪಡೆಗೊಳಿಸಲು ಸರ್ಕಾರವು ನಿರ್ಣಯಿಸಿರುತ್ತದೆ.

  • ಮಹಾ ಶಿವರಾತ್ರಿ
  • ಶ್ರೀರಾಮನವಮಿ
  • ವರಮಹಾಲಕ್ಮೀ ವ್ರತ
  • ಮಹಾಲಯ ಅಮಾವಾಸ್ಯೆ
  • ನಾಗರ ಪಂಚಮಿ
  • ಕನ್ನಡ ರಾಜ್ಯೋತ್ಸವ
  • ಹೋಳಿ ಹಬ್ಬ
  • ಬಸವ ಜಯಂತಿ

ಆರ್ಥಿಕ ಇಲಾಖೆಯು ಈ ಪ್ರಸ್ತಾವನೆಗೆ ಅನುಮೋದನೆ ನೀಡಿರುತ್ತದೆ. ಆದ್ದರಿಂದ ಈ ಕುರಿತು ಆದೇಶವನ್ನು ಹೊರಡಿಸಲಾಗಿದೆ.

ಆದೇಶದ ವಿವರ: ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನಲೆಯಲ್ಲಿ ರಾಜ್ಯ ಸರ್ಕಾರಿ ನೌಕರರು ಹಬ್ಬದ ಮುಂಗಡವನ್ನು ಪಡೆಯಲು ಈಗಾಗಲೇ ಅಧಿಸೂಚಿಸಿರುವ ಹಬ್ಬಗಳೊಂದಿಗೆ ಈ ಕೆಳಕಂಡ ಹಬ್ಬಗಳನ್ನು ಹೆಚ್ಚುವರಿಯಾಗಿ ಸೇರ್ಪಡೆಗೊಳಿಸಿ ಆದೇಶಿಸಲಾಗಿದೆ.

  • ಮಹಾಶಿವರಾತ್ರಿ
  • ಶ್ರೀರಾಮನವಮಿ
  • ವರಮಹಾಲಕ್ಮೀ ವ್ರತ
  • ಮಹಾಲಯ ಅಮಾವಾಸ್ಯೆ
  • ನಾಗರ ಪಂಚಮಿ
  • ಕನ್ನಡ ರಾಜ್ಯೋತ್ಸವ
  • ಹೋಳಿ ಹಬ್ಬ
  •  ಬಸವ ಜಯಂತಿ

ಕರ್ನಾಟಕ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ. ಸುಧಾಕರ್ ರಾವ್ ಅಧ್ಯಕ್ಷತೆಯಲ್ಲಿ ಕರ್ನಾಟಕ ಸರ್ಕಾರ ರಚನೆ ಮಾಡಿದ್ದ 7ನೇ ವೇತನ ಆಯೋಗ ತನ್ನ ವರದಿಯಲ್ಲಿ ಹಬ್ಬದ ಮುಂಗಡದ ಕುರಿತು ಪ್ರಸ್ತಾಪವನ್ನು ಮಾಡಿತ್ತು.

ವರದಿಯಲ್ಲಿ ಸರ್ಕಾರವು ಇತ್ತೀಚಿಗೆ ಹಬ್ಬದ ಮುಂಗಡವನ್ನು 10,000 ರೂ.ನಿಂದ 25,000 ರೂ.ಗಳಿಗೆ ಹೆಚ್ಚಿಸಿರುವುದನ್ನು ಆಯೋಗವು ಗಮನಿಸಿದೆ. ಈ ಮುಂಗಡವು ಬಡ್ಡಿ ರಹಿತವಾಗಿದ್ದು, 10 ತಿಂಗಳ ಕಂತುಗಳಲ್ಲಿ ಮರು ಪಾವತಿಸಬೇಕಾಗುತ್ತದೆ.

ಈ ಮುಂಗಡವನ್ನು ಇತ್ತೀಚಿಗಷ್ಟೆ ಪರಿಷ್ಕರಿಸಿರುವ ಅಂಶವನ್ನು ಪರಿಗಣಿಸಿ ಇದರಲ್ಲಿ ಯಾವುದೇ ಬದಲಾವಣೆಯ ಅಗತ್ಯವಿಲ್ಲವೆಂದು ಆಯೋಗವು ಅಭಿಪ್ರಾಯಪಡುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿತ್ತು.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular