HomeLatest News5 ವರ್ಷದ ಬಳಿಕ ಮೊದಲ ಬಾರಿಗೆ ಹೆಸರು, ಲಿಂಗ, ಜನ್ಮ ದಿನಾಂಕ ಬದಲಾವಣೆ ಸೇರಿ ‘ಆಧಾರ್’...

5 ವರ್ಷದ ಬಳಿಕ ಮೊದಲ ಬಾರಿಗೆ ಹೆಸರು, ಲಿಂಗ, ಜನ್ಮ ದಿನಾಂಕ ಬದಲಾವಣೆ ಸೇರಿ ‘ಆಧಾರ್’ ಸೇವೆಗಳ ಶುಲ್ಕ ಹೆಚ್ಚಳ

ನವದೆಹಲಿ: ಬೆರಳಚ್ಚು ನವೀಕರಣ, ಹೆಸರು ಬದಲಾವಣೆ ಮೊದಲಾದ ಆಧಾರ್ ಕಾರ್ಡ್ ಗೆ ಸಂಬಂಧಿಸಿದ ಕೆಲವು ಸೇವೆಗಳ ಶುಲ್ಕದಲ್ಲಿ ಹೆಚ್ಚಳ ಮಾಡಲಾಗಿದೆ.

ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ(ಯುಐಡಿಎಐ) ಈ ಬಗ್ಗೆ ಮಾಹಿತಿ ನೀಡಿದ್ದು, ಅಕ್ಟೋಬರ್ 1ರಿಂದಲೇ ಹೊಸ ದರಗಳು ಜಾರಿಗೆ ಬಂದಿವೆ. ಆಧಾರ್ ಕಾರ್ಡ್ ನಲ್ಲಿ ಹೆಸರು, ವಿಳಾಸ, ಲಿಂಗ, ಜನ್ಮ ದಿನಾಂಕದಂತಹ ವಿವರಗಳನ್ನು ಬದಲಾವಣೆ ಮಾಡಲು ಶುಲ್ಕವನ್ನು 50 ರೂ.ನಿಂದ 75 ರೂ.ಗೆ ಏರಿಕೆ ಮಾಡಲಾಗಿದೆ.

ಬೆರಳಚ್ಚು, ಫೋಟೋದಂತಹ ಬಯೋಮೆಟ್ರಿಕ್ ವಿವರ ಬದಲಾಯಿಸುವ ಶುಲ್ಕವನ್ನು 100 ರೂ.ನಿಂದ 125 ರೂ.ಗೆ ಏರಿಕೆ ಮಾಡಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

5ರಿಂದ 7 ವರ್ಷದ ಮಕ್ಕಳು ಮತ್ತು 15ರಿಂದ 17 ವರ್ಷದವರೆಗೆ ಬಯೋಮೆಟ್ರಿಕ್ ನವೀಕರಣಕ್ಕೆ ಶುಲ್ಕ ಕೈಬಿಡಲಾಗಿದೆ. ಈ ಹಿಂದೆ ಇದಕ್ಕೆ ರೂ.50 ಶುಲ್ಕವಿತ್ತು.

ಹೊಸ ಆಧಾರ್ ಕಾರ್ಡ್ ಪಡೆಯುವುದು ಉಚಿತವಾಗಿರುತ್ತದೆ. ಆಧಾರ್ ಕೇಂದ್ರಗಳಿಗೆ ಭೇಟಿ ನೀಡಲು ಆಗದವರಿಗೆ ಮನೆಯಲ್ಲೇ ನವೀಕರಣ ಮಾಡಿಕೊಳ್ಳಲು ಮೊಬೈಲ್ ಆ್ಯಪ್ ನೀಡಲಾಗಿದೆ. ಈ ಸೇವೆಯ ಶುಲ್ಕ 700 ರೂಪಾಯಿ ಆಗಿದೆ. ಇದಕ್ಕಾಗಿ ಇ- ಮೇಲ್ ಮೂಲಕ ಯುಐಡಿಎಐ ಸಂಪರ್ಕಿಸಿ ಅಪಾಯಿಂಟ್ಮೆಂಟ್ ಪಡೆಯಬೇಕಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular