HomeKarnatakaBREAKING: ರಜೆ ಹಿನ್ನಲೆ ಪಿಕ್ನಿಕ್ ಗೆ ತೆರಳಿದ್ದ ತಂದೆ, ಮಗ ನೀರು ಪಾಲು

BREAKING: ರಜೆ ಹಿನ್ನಲೆ ಪಿಕ್ನಿಕ್ ಗೆ ತೆರಳಿದ್ದ ತಂದೆ, ಮಗ ನೀರು ಪಾಲು

ದಾವಣಗೆರೆ: ಪ್ರವಾಸಕ್ಕೆ ತೆರಳಿಂದ ತಂದೆ, ಮಗ ಜಲಾಶಯದ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ದೇವರಬೆಳಕೆರೆ ಜಲಾಶಯದಲ್ಲಿ ನಡೆದಿದೆ.

ಮಿಟ್ಲಕಟ್ಟೆ ಗ್ರಾಮದ ತಂದೆ ಚಂದ್ರು(42), ಪುತ್ರ ಶೌರ್ಯ(9) ಮೃತಪಟ್ಟವರು. ರಜೆ ಹಿನ್ನೆಲೆಯಲ್ಲಿ ಜಲಾಶಯ ನೋಡಲು ಇಬ್ಬರು ಮಕ್ಕಳ ಜೊತೆ ದಂಪತಿ ತೆರಳಿದ್ದರು. ಜಲಾಶಯದ ನೀರಿನಲ್ಲಿ ಇಬ್ಬರು ಪುತ್ರರು ಈಜುವಾಗ ನೀರಿನ ಸುಳಿಗೆ ಸಿಲುಕಿದ್ದಾರೆ. ಈ ವೇಳೆ ತಂದೆ ಓರ್ವ ಪುತ್ರನನ್ನು ರಕ್ಷಿಸಿದ್ದು, ಮತ್ತೊಬ್ಬ ಪುತ್ರನನ್ನು ರಕ್ಷಿಸಲು ಹೋಗಿ ನೀರಲ್ಲಿ ಮುಳುಗಿದ್ದಾರೆ. ಸ್ಥಳೀಯರು ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದು, ತೀವ್ರ ಅಸ್ವಸ್ಥರಾಗಿ ಚಂದ್ರು ಸಾವನ್ನಪ್ಪಿದ್ದಾರೆ. ಶೌರ್ಯನಿಗಾಗಿ ಜಲಾಶಯದಲ್ಲಿ ಹುಡುಕಾಟ ನಡೆದಿದೆ. ಹರಿಹರ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ ಎನ್ನಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular