HomeIndiaViral Video: ರಸ್ತೆಯಲ್ಲೇ ಅಪ್ಪ-ಮಗಳ ಭರ್ಜರಿ ಸ್ಟೆಪ್: ಅದ್ಭುತ ಡಾನ್ಸ್ ಗೆ ಫಿದಾ ಆದ...

Viral Video: ರಸ್ತೆಯಲ್ಲೇ ಅಪ್ಪ-ಮಗಳ ಭರ್ಜರಿ ಸ್ಟೆಪ್: ಅದ್ಭುತ ಡಾನ್ಸ್ ಗೆ ಫಿದಾ ಆದ ನೆಟ್ಟಿಗರು

ಅಪ್ಪ-ಮಗಳ ಅವಿನಾಭಾವ ಸಂಬಂಧ, ಬಾಂಧವ್ಯ-ಮಮತೆಯೇ ಹಾಗೇ. ಅಪ್ಪ ಅಂದರೆ ಹೆಣ್ಣು ಮಕ್ಕಳಿಗೆ ಎಲ್ಲಿಲ್ಲದ ಪ್ರೀತಿ-ಗೌರವ. ತಂದೆಗೂ ಹೆಣ್ಣುಮಕ್ಕಳ ಮೇಲೆ ಅಷ್ಟೇ ವಿಶೇಷ ಕಾಳಜಿ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ತಂದೆ ಹಾಗೂ ಪುಟಾಣಿ ಮಗಳೊಬ್ಬಳ ರಸ್ತೆಯಲ್ಲಿನ ಡಾನ್ಸ್ ವಿಡಿಯೋ ನೆಟ್ಟಿಗರ ಹೃದಯ ಗೆದ್ದಿದೆ.

ಶಾಲೆಯಿಂದ ಮಗಳನ್ನು ಮನೆಗೆ ಕರೆತುತ್ತಿದಾಗ ರಸ್ತೆಯಲ್ಲಿ ಅಪ್ಪ ಖುಷಿಯಿಂದ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ. ಅಪ್ಪನ ಕೈ ಹಿಡಿದು ನಡೆಯುತ್ತಿದ್ದ ಪುಟ್ಟ ಮಗಳು ಕೂಡ ಅಪ್ಪನಿಗೆ ಸರಿಸಾಟಿಯಾಗಿ ಭರ್ಜರಿಯಾಗಿ ಸ್ಟೆಪ್ ಹಾಕುತ್ತಾ ಸಾಗಿದ್ದಾಳೆ. ಅಪ್ಪ-ಮಗಳು ಖುಷಿಯಿಂದ ರಸ್ತೆಯಲ್ಲಿ ಕುಣಿದು ಸಂತಸದಿಂದಸಾಗುತ್ತಿರುವುದನ್ನು ಪಕ್ಕದ ರಸ್ತೆಯಲ್ಲಿರುವ ವ್ಯಕ್ತಿಯೋರ್ವರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ. ಅಪ್ಪ-ಮಗಳ ರೋಡ್ ಡಾನ್ಸ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಅಪ್ಪ-ಮಗಳ ಬಾಂಧವ್ಯಕ್ಕೆ ನೆಟ್ಟಿಗರು ಮನಸೋತಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular