HomeIndiaಕೋರ್ಟ್ ಕಲಾಪದ ವೇಳೆ ಅರ್ಜಿದಾರನ ಶಾಕಿಂಗ್ ವರ್ತನೆ: ಹೈಕೋರ್ಟ್ ಅಸಮಾಧಾನ, 200 ಕೋಟಿ ಪರಿಹಾರದ ಅರ್ಜಿ...

ಕೋರ್ಟ್ ಕಲಾಪದ ವೇಳೆ ಅರ್ಜಿದಾರನ ಶಾಕಿಂಗ್ ವರ್ತನೆ: ಹೈಕೋರ್ಟ್ ಅಸಮಾಧಾನ, 200 ಕೋಟಿ ಪರಿಹಾರದ ಅರ್ಜಿ ವಜಾ

ಜಬಲ್ಪುರ: ನ್ಯಾಯಾಲಯದ ಆವರಣದಲ್ಲಿ ಭಾವನಾತ್ಮಕ ಪ್ರದರ್ಶನ ನೀಡಲು ಅಥವಾ ನಾಟಕವಾಡಲು ಅವಕಾಶವಿಲ್ಲ ಎಂದು ಗುಡುಗಿರುವ ಮಧ್ಯಪ್ರದೇಶದ ಹೈಕೋರ್ಟ್, ನ್ಯಾಯಾಧೀಶರ ಎದುರು ಸತ್ತ ಭ್ರೂಣವನ್ನಿಟ್ಟು ಪರಿಹಾರ ಕೇಳಿದ ವ್ಯಕ್ತಿಯ ಅರ್ಜಿಯನ್ನು ವಜಾಗೊಳಿಸಿದೆ. ಅಲ್ಲದೆ, ಆತನ ಈ ಕೃತ್ಯವನ್ನು ‘ಅತ್ಯಂತ ಆಕ್ಷೇಪಾರ್ಹ ಮತ್ತು ಅನುಚಿತ’ ಎಂದು ನ್ಯಾಯಾಲಯ ಹೇಳಿದೆ.


ಏನಿದು ಘಟನೆ?

ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ಕಂಪನಿಯಲ್ಲಿ ತಾನು 200 ಕೋಟಿ ರೂ.ಗಳ ಹಗರಣವನ್ನು ಬಯಲಿಗೆಳೆದಿದ್ದೇನೆ, ಈ ಕಾರಣಕ್ಕಾಗಿ ತನ್ನ ಕುಟುಂಬದ ಮೇಲೆ ಕಾರು ದಾಳಿ ನಡೆಸಲಾಗಿದೆ ಎಂದು ಅರ್ಜಿದಾರ ಆರೋಪಿಸಿದ್ದಾನೆ. ಈ ಅಪಘಾತದಲ್ಲಿ ತನ್ನ ಪತ್ನಿಯ ಗರ್ಭಪಾತವಾಗಿದೆ ಎಂದು ಹೇಳಿದ ಆತ, ನ್ಯಾಯದೀಶರ ಎದುರು ಭ್ರೂಣವನ್ನು ಇಟ್ಟು 200 ಕೋಟಿ ರೂ.ಗಳ ಪರಿಹಾರ ಮತ್ತು ಮಗಳ ಚಿಕಿತ್ಸೆಗಾಗಿ 82 ಲಕ್ಷ ರೂ. ನೀಡುವಂತೆ ಕೋರಿದ್ದ.

ಹೈಕೋರ್ಟ್ ನೀಡಿದ ಎಚ್ಚರಿಕೆಗಳೇನು?

ನ್ಯಾಯಮೂರ್ತಿ ಹಿಮಾಂಶು ಜೋಶಿ ಅವರ ಪೀಠವು ಈ ಅರ್ಜಿಯನ್ನು ಆಧಾರರಹಿತ ಮತ್ತು ಕಟ್ಟುಕಥೆ ಎಂದು ಅಭಿಪ್ರಾಯಪಟ್ಟಿದೆ. ನ್ಯಾಯಾಲಯ ನೀಡಿದ ಪ್ರಮುಖ ಆದೇಶಗಳು ಇಲ್ಲಿವೆ:

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ
  • ನಾಟಕೀಯ ನಡವಳಿಕೆ ಸಲ್ಲದು: “ನ್ಯಾಯಾಲಯವು ಕಾನೂನು ಮತ್ತು ಪುರಾವೆಗಳ ಆಧಾರದ ಮೇಲೆ ನಡೆಯುತ್ತದೆ ಹೊರತು ಭಾವನಾತ್ಮಕ ಪ್ರದರ್ಶನಗಳ ಮೇಲಲ್ಲ. ಕೋರ್ಟ್ ರೂಮ್ ಅನ್ನು ನಾಟಕೀಯ ವೇದಿಕೆಯನ್ನಾಗಿ ಪರಿವರ್ತಿಸಲು ಸಾಧ್ಯವಿಲ್ಲ” ಎಂದು ನ್ಯಾಯಾಧೀಶರು ತಿಳಿಸಿದರು.
  • ಬಯೋಮೆಡಿಕಲ್ ತ್ಯಾಜ್ಯ ನಿಯಮದ ಉಲ್ಲಂಘನೆ: ಭ್ರೂಣವು ಮಾನವ ಅಂಗರಚನಾ ವಸ್ತುವಾಗಿದ್ದು, ಅದನ್ನು ‘ಬಯೋಮೆಡಿಕಲ್ ವೇಸ್ಟ್ ಮ್ಯಾನೇಜ್‌ಮೆಂಟ್ ನಿಯಮಗಳು 2016’ ರ ಪ್ರಕಾರ ವಿಲೇವಾರಿ ಮಾಡಬೇಕು. ಅದನ್ನು ಸಾರ್ವಜನಿಕವಾಗಿ ಪ್ರದರ್ಶಿಸುವುದು ಮಾನವ ಶವಕ್ಕೆ ನೀಡುವ ಅಗೌರವ ಎಂದು ಕೋರ್ಟ್ ಹೇಳಿದೆ.
  • ಆಧಾರರಹಿತ ದೂರು: ಕಂಪನಿಯ ಮೇಲೆ ಮಾಡಿರುವ 200 ಕೋಟಿ ಭ್ರೂಷ್ಟಾಚಾರದ ಆರೋಪಕ್ಕೆ ಯಾವುದೇ ದಾಖಲೆಗಳನ್ನು ಅರ್ಜಿದಾರ ಒದಗಿಸಿಲ್ಲ. ಅಲ್ಲದೆ ಪೊಲೀಸರಿಗೆ ನೀಡಿದ ದೂರಿನ ಪ್ರತಿಯೂ ಇಲ್ಲದ ಕಾರಣ ಇದನ್ನು ‘ಬೋಗಸ್’ ಅರ್ಜಿ ಎಂದು ಕರೆಯಲಾಯಿತು.

ಅರ್ಜಿದಾರನಿಗೆ ಕೊನೆಯ ಎಚ್ಚರಿಕೆ

ಹಿಂದೆ ಇದೇ ವ್ಯಕ್ತಿ ತನಗೆ ‘ದಯಾಮರಣ’ ಬೇಕು ಎಂದು ಅರ್ಜಿ ಸಲ್ಲಿಸಿದ್ದ, ಈಗ ನಿಲುವನ್ನು ಬದಲಿಸಿ ಪರಿಹಾರ ಕೇಳುತ್ತಿದ್ದಾನೆ ಎಂದು ನ್ಯಾಯಾಲಯ ಗಮನಿಸಿದೆ. ಭವಿಷ್ಯದಲ್ಲಿ ಇಂತಹ ಕೃತ್ಯಗಳನ್ನು ಪುನರಾವರ್ತಿಸಿದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಅರ್ಜಿದಾರನಿಗೆ ಕೋರ್ಟ್ ಕಠಿಣ ಎಚ್ಚರಿಕೆ ನೀಡಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular