HomeIndiaಹೆದ್ದಾರಿಯಲ್ಲಿ ಕೊಳಕು ಟಾಯ್ಲೆಟ್ ಕಂಡ್ರೆ ಸುಮ್ಮನಿರಬೇಡಿ! ಫೋಟೋ ಕಳುಹಿಸಿದ್ರೆ FASTag ಖಾತೆಗೆ ₹1,000 ರಿವಾರ್ಡ್

ಹೆದ್ದಾರಿಯಲ್ಲಿ ಕೊಳಕು ಟಾಯ್ಲೆಟ್ ಕಂಡ್ರೆ ಸುಮ್ಮನಿರಬೇಡಿ! ಫೋಟೋ ಕಳುಹಿಸಿದ್ರೆ FASTag ಖಾತೆಗೆ ₹1,000 ರಿವಾರ್ಡ್

ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣಿಸುವವರಿಗೆ ಕೇಂದ್ರ ಸರ್ಕಾರದಿಂದ ಗುಡ್‌ನ್ಯೂಸ್‌ ಸಿಕ್ಕಿದೆ. ಉಚಿತವಾಗಿ FASTag ಖಾತೆಗೆ ₹1,000 ರೀಚಾರ್ಜ್ ಪಡೆಯುವ ಅವಕಾಶವನ್ನು ನೀಡಲಾಗಿದೆ. ಕೇವಲ ಒಂದು ಫೋಟೋ ಕಳುಹಿಸುವ ಮೂಲಕ ಈ ಬಹುಮಾನ ಪಡೆಯಬಹುದು. ಈಗಾಗಲೇ ಹಲವರು ಈ ಪ್ರಯೋಜನ ಪಡೆದುಕೊಂಡಿದ್ದಾರೆ. ಹಾಗಾದರೆ ಇದನ್ನು ಪಡೆಯುವುದು ಹೇಗೆ ಎಂಬುದನ್ನು ನೋಡೋಣ.

ಪ್ರಯಾಣಿಕರಿಗೆ ನ್ಯಾಷನಲ್ ಹೈವೇಸ್ ಅಥಾರಿಟಿ ಆಫ್ ಇಂಡಿಯಾ (NHAI) ಸಿಹಿಸುದ್ದಿ ನೀಡಿದೆ. ₹1,000 ಮೌಲ್ಯದ FASTag ರೀಚಾರ್ಜ್ ಅನ್ನು ಉಚಿತವಾಗಿ ಪಡೆಯುವ ಅವಕಾಶ ಕಲ್ಪಿಸಿದೆ. ಇದಕ್ಕಾಗಿ NHAI ವಿಶೇಷ ಅಭಿಯಾನವನ್ನು ಘೋಷಿಸಿದೆ. ಈ ಚಾಲೆಂಜ್‌ನಲ್ಲಿ ಭಾಗವಹಿಸುವ ಮೂಲಕ ಉಚಿತವಾಗಿ ₹1,000 FASTag ರೀಚಾರ್ಜ್ ಪಡೆಯಬಹುದು. ಇದಕ್ಕಾಗಿ ದೊಡ್ಡ ಕೆಲಸವನ್ನೇನೂ ಮಾಡಬೇಕಿಲ್ಲ. ಕೇವಲ ಒಂದು ಸಣ್ಣ ಕೆಲಸ ಮಾಡಿದರೆ ಸಾಕು, ಈ ರಿವಾರ್ಡ್ ನಿಮ್ಮದಾಗಲಿದೆ.

NHAI ಈ ಹಿಂದೆ ‘ಕ್ಲೀನ್ ಟಾಯ್ಲೆಟ್ ಪಿಕ್ಚರ್ ಚಾಲೆಂಜ್’ ಎಂಬ ವಿಶೇಷ ಅಭಿಯಾನವನ್ನು ಆರಂಭಿಸಿತ್ತು. ಇದೀಗ ಈ ಅಭಿಯಾನವನ್ನು ಮುಂದಿನ ವರ್ಷದ ಜೂನ್ 30ರವರೆಗೆ ವಿಸ್ತರಿಸಲು NHAI ನಿರ್ಧರಿಸಿದೆ. ಈವರೆಗೆ ಈ ಅಭಿಯಾನದ ಮೂಲಕ 429 ಪ್ರಯಾಣಿಕರು ಉಚಿತವಾಗಿ ₹1,000 FASTag ರೀಚಾರ್ಜ್ ಪಡೆದಿದ್ದಾರೆ. ಹಾಗಾದರೆ ಈ ರಿವಾರ್ಡ್ ಪಡೆಯುವುದು ಹೇಗೆ? ನಿಯಮಗಳೇನು? ಇಲ್ಲಿದೆ ಮಾಹಿತಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೆದ್ದಾರಿಯಲ್ಲಿ ಈ ಒಂದು ಕೆಲಸ ಮಾಡಿದರೆ ಸಾಕು!

ನೀವು ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣಿಸುವಾಗ ಟೋಲ್ ಪ್ಲಾಜಾಗಳ ಬಳಿ ಇರುವ ಶೌಚಾಲಯಗಳು ಕೊಳಕಾಗಿರುವುದನ್ನು ಗಮನಿಸಿದ್ದೀರಾ? ಶೌಚಾಲಯ ಸ್ವಚ್ಛವಾಗಿಲ್ಲದಿರುವುದು ಅಥವಾ ಕಸದಿಂದ ತುಂಬಿರುವುದು ಕಂಡುಬಂದರೆ, ಅದರ ಫೋಟೋ ತೆಗೆದು ದೂರು ಸಲ್ಲಿಸಿದರೆ ಸಾಕು. ನಿಮಗೆ ₹1,000 FASTag ರೀಚಾರ್ಜ್ ನೀಡಲಾಗುತ್ತದೆ.

ಅಧಿಕಾರಿಗಳು ನೀವು ಕಳುಹಿಸಿದ ಫೋಟೋವನ್ನು ಪರಿಶೀಲಿಸಿ ದೃಢಪಡಿಸಿದ ಬಳಿಕ ರಿವಾರ್ಡ್ ಮೊತ್ತವನ್ನು FASTag ಖಾತೆಗೆ ಜಮೆ ಮಾಡಲಾಗುತ್ತದೆ.

ಒಂದು ವಾಹನದ ನೋಂದಣಿ ಸಂಖ್ಯೆಗೆ ಈ ಅಭಿಯಾನದಡಿ ಒಮ್ಮೆ ಮಾತ್ರ ₹1,000 ರೀಚಾರ್ಜ್ ಪಡೆಯಲು ಅವಕಾಶವಿದೆ. ಒಮ್ಮೆ ರಿವಾರ್ಡ್ ಪಡೆದ ಬಳಿಕ ಅದೇ ವಾಹನದ ಮೂಲಕ ಮತ್ತೊಮ್ಮೆ ಪಡೆಯಲು ಸಾಧ್ಯವಿಲ್ಲ. ಈ ರೀಚಾರ್ಜ್ ಅನ್ನು ಬೇರೆಯವರಿಗೆ ವರ್ಗಾಯಿಸಲು ಅಥವಾ ನಗದಾಗಿ ಪರಿವರ್ತಿಸಲು ಸಾಧ್ಯವಿಲ್ಲ.

ಒಂದೇ ಶೌಚಾಲಯಕ್ಕೆ ಸಂಬಂಧಿಸಿದಂತೆ ಹಲವು ದೂರುಗಳು ಬಂದರೆ, ಮೊದಲಿಗೆ ದೂರು ಸಲ್ಲಿಸಿದ ವ್ಯಕ್ತಿಗೆ ರಿವಾರ್ಡ್ ನೀಡಲಾಗುತ್ತದೆ.

ಆ್ಯಪ್ ಮೂಲಕ ದೂರು ಸಲ್ಲಿಸುವುದು ಹೇಗೆ?

  • ಕೇಂದ್ರ ಸರ್ಕಾರದ ‘ರಾಜ್‌ಮಾರ್ಗ್ ಯಾತ್ರಾ’ (Rajmarg Yatra) ಆ್ಯಪ್ ಅನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬೇಕು.

  • ನಿಮ್ಮ ಮೊಬೈಲ್ ಸಂಖ್ಯೆಯೊಂದಿಗೆ ಆ್ಯಪ್‌ಗೆ ಲಾಗಿನ್ ಆಗಬೇಕು.

  • ಟೋಲ್ ಪ್ಲಾಜಾಗಳ ಬಳಿ ಸ್ವಚ್ಛವಾಗಿಲ್ಲದ ಶೌಚಾಲಯ ಕಂಡುಬಂದರೆ, ಜಿಯೋ-ಟ್ಯಾಗ್ ಮತ್ತು ಟೈಮ್‌ಸ್ಟ್ಯಾಂಪ್ ಹೊಂದಿರುವ ಫೋಟೋಗಳನ್ನು ಅಪ್‌ಲೋಡ್ ಮಾಡಬೇಕು.

  • ದೂರು ಸಲ್ಲಿಸುವಾಗ ನಿಮ್ಮ ಹೆಸರು, ಟೋಲ್ ಪ್ಲಾಜಾದ ಸ್ಥಳ, ವಾಹನ ನೋಂದಣಿ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆ ಸೇರಿದಂತೆ ಅಗತ್ಯ ಮಾಹಿತಿಯನ್ನು ನೀಡಬೇಕು.

  • ನೀವು ಸಲ್ಲಿಸಿದ ಫೋಟೋಗಳನ್ನು ಮೊದಲು ಕೃತಕ ಬುದ್ಧಿಮತ್ತೆ (AI) ಸಹಾಯದಿಂದ ಸ್ಕ್ರೀನಿಂಗ್ ಮಾಡಲಾಗುತ್ತದೆ.

  • ನಂತರ ಸಿಬ್ಬಂದಿ ಫೋಟೋವನ್ನು ಹಸ್ತಚಾಲಿತವಾಗಿ ಪರಿಶೀಲಿಸುತ್ತಾರೆ.

  • ದೂರು ಮತ್ತು ಫೋಟೋವನ್ನು ದೃಢಪಡಿಸಿದ ಬಳಿಕ, ನಿಮ್ಮ ವಾಹನದ ನೋಂದಣಿ ಸಂಖ್ಯೆಗೆ ಲಿಂಕ್ ಆಗಿರುವ FASTag ಖಾತೆಗೆ ₹1,000 ಜಮೆ ಮಾಡಲಾಗುತ್ತದೆ.

ಈ ಶೌಚಾಲಯಗಳ ಫೋಟೋಗಳಿಗೆ ಮಾತ್ರ ರಿವಾರ್ಡ್!

ಈ ಅಭಿಯಾನವು NHAI ನೇರವಾಗಿ ನಿರ್ವಹಿಸುತ್ತಿರುವ ಶೌಚಾಲಯಗಳಿಗೆ ಮಾತ್ರ ಅನ್ವಯಿಸುತ್ತದೆ. NHAI ವ್ಯಾಪ್ತಿಯಲ್ಲಿರುವ ಶೌಚಾಲಯಗಳ ಸ್ವಚ್ಛತೆಗೆ ಸಂಬಂಧಿಸಿದ ದೂರುಗಳಿಗೆ ಮಾತ್ರ ಈ ರಿವಾರ್ಡ್ ಯೋಜನೆ ಅನ್ವಯವಾಗಲಿದೆ.

ಸಾರ್ವಜನಿಕ ಸ್ಥಳಗಳು, ಪೆಟ್ರೋಲ್ ಬಂಕ್‌ಗಳು, ಧಾಬಾಗಳು ಸೇರಿದಂತೆ ಇತರ ಸ್ಥಳಗಳಲ್ಲಿರುವ ಶೌಚಾಲಯಗಳಿಗೆ ಈ ಯೋಜನೆ ಅನ್ವಯಿಸುವುದಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular