HomeKarnataka60 ದಿನದಲ್ಲೇ ಹಣ ಡಬಲ್ ಆಗುತ್ತೆ ಎಂದು ನಂಬಿದ 106 ಗ್ರಾಹಕರಿಗೆ ಪಂಗನಾಮ…! 4.79 ಕೋಟಿ...

60 ದಿನದಲ್ಲೇ ಹಣ ಡಬಲ್ ಆಗುತ್ತೆ ಎಂದು ನಂಬಿದ 106 ಗ್ರಾಹಕರಿಗೆ ಪಂಗನಾಮ…! 4.79 ಕೋಟಿ ರೂ. ವಂಚನೆ

ದಾವಣಗೆರೆ: ಹಣ ದ್ವಿಗುಣವಾಗುತ್ತೆ ಎಂದು ನಂಬಿದ 106 ಗ್ರಾಹಕರು ಮೋಸ ಹೋದ ಘಟನೆ ನಡೆದಿದೆ. ಆಂಧ್ರ ಮೂಲದ ಕ್ರೌಡ್ ಕ್ಲಬ್ ಇಂಟರ್ ನ್ಯಾಷನಲ್ ಪ್ರೈವೇಟ್ ಲಿಮಿಟೆಡ್ ಹೆಸರಿನಲ್ಲಿ ರೂ.4.79 ಕೋಟಿ ವಂಚನೆ ಮಾಡಲಾಗಿದ್ದು, ದೂರು ದಾಖಲಾಗಿದೆ.

ಆಂಧ್ರಪ್ರದೇಶದ ಕರ್ನೂಲ್ ಸ್ಕಂದ ಶಾಪಿಂಗ್ ಮಾಲ್, ಓಲ್ಡ್ ಟಾಕೀಸ್ ವಿಳಾಸದ ಕ್ರೌಡ್ ಕ್ಲಬ್ ಇಂಟರ್ ನ್ಯಾಷನಲ್ ಪ್ರೈವೇಟ್ ಲಿಮಿಟೆಡ್ ಕೋಡೆ ರಮಣಯ್ಯ ತಂದೆ ಕೋಡೆ ಶ್ರೀನಿವಾಸಲು ಇವರು ಈ ಪ್ರೈವೇಟ್ ಲಿಮಿಟೆಡ್‍ನಲ್ಲಿ ಠೇವಣಿ ಇಟ್ಟಲ್ಲಿ 60 ದಿನಗಳಲ್ಲಿ ಹಣ ದ್ವಿಗುಣವಾಗಲಿದೆ ಎಂದು ನಂಬಿಸಿ 106 ಗ್ರಾಹಕರಿಂದ 4,79,99,000 ರೂ..ಗಳನ್ನು ಹೂಡಿಕೆ ಮಾಡಿಸಿಕೊಂಡು ಮೋಸ ಮಾಡಲಾಗಿದೆ ಎಂದು ಹೊಳಲ್ಕೆರೆ ತಾಲ್ಲೂಕು ಚಿಕ್ಕಜಾಜೂರು ಗ್ರಾಮದ ರಮೇಶಪ್ಪ ಇವರು ನೀಡಿದ ದೂರು ಮೇರೆಗೆ ಪ್ರಕರಣ ದಾಖಲಿಸಿ ದಾವಣಗೆರೆ ಸಿಐಡಿ, ಸಿಐಯು ಘಟಕದಿಂದ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಉಪಾಧೀಕ್ಷಕ ಮಾಲತೇಶ್ ಎನ್. ಕೂನಬೇವು ತಿಳಿಸಿದ್ದಾರೆ.

ರಮೇಶಪ್ಪನಿಗೆ ಪರಿಚಯಸ್ಥರಾದ ಟಿ.ವಿ.ಶೇಷಯ್ಯ ಮತ್ತು ಎಂ.ಏಳುಕೊಂಡಲು ಇವರು ಕ್ರೌಡ್ ಕ್ಲಬ್ ಇಂಟರ್ ನ್ಯಾಷನಲ್ ಪ್ರೈವೇಟ್ ಲಿಮಿಟೆಡ್ ನಲ್ಲಿ ಹಣ ಠೇವಣಿ ಇಟ್ಟಲ್ಲಿ 60 ದಿನಗಳಲ್ಲಿ ಹಣ ದ್ವಿಗುಣವಾಗಲಿದೆ ಎಂದು ತಿಳಿಸಿ ಕಂಪನಿಯ ಬ್ಯಾಂಕ್ ಖಾತೆ 114563300000374 ಗೆ ಹಣ ವರ್ಗಾವಣೆ ಮಾಡಿಸಿಕೊಂಡಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

60 ದಿನಗಳ ನಚಿತರ ರಮೇಶಪ್ಪ 1,96,000 ರೂ.ಗಳನ್ನು ವಾಪಸ್ ಪಡೆದಿದ್ದರು. ಅವರು ಇಟ್ಟ ಠೇವಣಿಗೆ ಬಾಂಡ್ ಪೇಪರ್ ಮೇಲೆ ಅಗ್ರಿಮೆಂಟ್ ಸಹ ನೀಡಿರುತ್ತಾರೆ. ಇದನ್ನು ನಂಬಿ ಅವರು ಸೇರಿದಂತೆ ಸ್ನೇಹಿತರಿಗೆ ಮತ್ತು ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಪರಿಚಯಸ್ಥರಿಗೆ ತಿಳಿಸಿ ಒಟ್ಟು 106 ಜನರಿಂದ 4,79,99,000 ರೂ. ಹೂಡಿಕೆ ಮಾಡಿಸಲಾಗಿತ್ತು. ಈ ಮೊತ್ತಕ್ಕೆ 60 ದಿನಗಳ ನಂತರ ಯಾವುದೇ ಹಣ ವಾಪಸ್ ನೀಡಿರುವುದಿಲ್ಲ. ಇದರಿಂದ ಇಷ್ಟು ಗ್ರಾಹಕರು ಕಂಪನಿಯನ್ನು ನಂಬಿ ಮೋಸ ಹೋಗಿರುತ್ತಾರೆ ಎಂದು ದೂರು ನೀಡಿದ್ದಾರೆ.

ಪ್ರಕರಣವು ಪ್ರಸ್ತುತ ದಾವಣಗೆರೆ ಸಿಐಡಿ, ಸಿಐಯು ಘಟಕದಲ್ಲಿ ತನಿಖೆ ನಡೆಯುತ್ತಿದ್ದು, ಕ್ರೌಡ್ ಕ್ಲಬ್ ಇಂಟರ್ ನ್ಯಾಷನಲ್ ಪ್ರೈವೇಟ್ ಲಿಮಿಟೆಡ್ ಹೆಸರುಗಳಲ್ಲಿ ಸ್ಥಿರ ಮತ್ತು ಚರ ಆಸ್ತಿಗಳನ್ನು ಮಾಡಿರುವುದಾಗಿ ತಿಳಿದು ಬಂದಿದ್ದು, ಈ ಸಂಸ್ಥೆಯ ಹೆಸರಿನಲ್ಲಿ ಆಸ್ತಿ ಇದ್ದಲ್ಲಿ ಮಾಹಿತಿ ನೀಡಲು ಮತ್ತು ಕಂಪನಿಯಿಂದ ಮೋಸ ಹೋಗಿದ್ದಲ್ಲಿ 9480800192 ಗೆ ಮಾಹಿತಿ ನೀಡಲು ತಿಳಿಸಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular