HomeKarnatakaರೈತರೇ ಗಮನಿಸಿ : ಸೋಲಾರ್ ಪಂಪ್ ಸೆಟ್ ಸೇರಿ ವಿವಿಧ ಯಂತ್ರೋಪಕರಣ ಖರೀದಿ ಸಹಾಯಧನಕ್ಕೆ ಅರ್ಜಿ...

ರೈತರೇ ಗಮನಿಸಿ : ಸೋಲಾರ್ ಪಂಪ್ ಸೆಟ್ ಸೇರಿ ವಿವಿಧ ಯಂತ್ರೋಪಕರಣ ಖರೀದಿ ಸಹಾಯಧನಕ್ಕೆ ಅರ್ಜಿ ಆಹ್ವಾನ

2023-24 ನೇ ಸಾಲಿನ ಸಮಗ್ರ ತೋಟಗಾರಿಕೆ ಅಭಿವೃದ್ದಿ ಯೋಜನೆಯಡಿ, ವಿನೂತನ ತಂತ್ರಜ್ಞಾನ ಮತ್ತು ಯಂತ್ರೋಪಕರಣಗಳ ಸಹಾಯಧನ ಕಾರ್ಯಕ್ರಮದಡಿ ಸೋಲಾರ್ ಪಂಪ್‍ಸೆಟ್ ಹಾಗೂ ವಿವಿಧ ಯಂತ್ರೋಪಕರಣ ಖರೀದಿಸಲು ಅರ್ಹ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.

 ಸಾಮಾನ್ಯ ವರ್ಗದ ರೈತರು ಶೇ.40 ರಷ್ಟು ಹಾಗೂ ಪ.ಜಾತಿ ಮತ್ತು ಪ.ಪಂಗಡ, ಫಲಾನುಭವಿಗಳು ಶೇ. 50 ರಷ್ಟು ಸಹಾಯಧನ ಪಡೆಯಬಹುದು ಮತ್ತು 3 ಹೆಚ್.ಪಿ. ಸೋಲಾರ್ ಪಂಪ್‍ಸೆಟ್‍ಗಳಿಗೆ ರೂ.1.00 ಲಕ್ಷ, 5 ಹೆಚ್.ಪಿ. ಹಾಗೂ ಹೆಚ್ಚಿನ ಸಾಮಥ್ರ್ಯದ ಸೋಲಾರ್ ಪಂಪ್‍ಸೆಟ್‍ಗಳಿಗೆ ರೂ. 1.50 ಲಕ್ಷ ಸಹಾಯಧನ ಪಡೆಯಲು, ಹೊಸ ಪ್ರದೇಶ ವಿಸ್ತರಣೆ (ದಾಳಿಂಬೆ, ಡ್ರಾಗನ್ ಪ್ರೂಟ್ ಮತ್ತು ನುಗ್ಗೆ ಬೆಳೆಗಳಿಗೆ ಶೇ.40 ರಂತೆ 0.10 ಹೆ. ನಿಂದ ಗರಿಷ್ಟ 2.00 ಹೆ. ವರೆಗೆ ಸಹಾಯಧನ ನೀಡಲಾಗುವುದು), ಅಡಿಕೆ ಬೆಳೆಯಲ್ಲಿ ಕಾಳುಮೆಣಸು ಪ್ರದೇಶ ವಿಸ್ತರಣೆಗೆ 0.20 ಹೆ ನಿಂದ 4.00 ಹೆ.ವರೆಗೆ ಸಹಾಯಧನ ನೀಡಲಾಗುವುದು. ಅಡಿಕೆ ಬೆಳೆಯಲ್ಲಿ ಕಾಳುಮೆಣಸು ಪ್ರದೇಶ ವಿಸ್ತರಣೆಗೆ 0.20 ಹೆ ನಿಂದ 4.00 ಹೆ.ವರೆಗೆ ಸಹಾಯಧನ ನೀಡಲಾಗುವುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

SMAM ತೋಟಗಾರಿಕೆಯಲ್ಲಿ ಯಾಂತ್ರೀಕರಣ ಯೋಜನೆಯಡಿ ಸಾಮಾನ್ಯ ವರ್ಗದ ರೈತರು ಶೇ.40 ರಷ್ಟು ಹಾಗೂ ಪ.ಜಾತಿ ಮತ್ತು ಪ.ಪಂಗಡ, ಸಣ್ಣ ಮತ್ತು ಅತೀ ಸಣ್ಣ, ಮಹಿಳಾ ಫಲಾನುಭವಿಗಳು ಶೇ. 50 ರಷ್ಟು ಸಹಾಯಧನ ಪಡೆಯಬಹುದು. (ಗರಿಷ್ಟ ರೂ.1.25 ಲಕ್ಷಗಳು/ಗರಿಷ್ಟ 5 ಸಂಖ್ಯೆಯ ಯಂತ್ರೋಪಕರಣಗಳನ್ನು ಖರೀದಿಸಲು) ಆಸಕ್ತ ರೈತ ಫಲಾನುಭವಿಗಳು ಪಹಣಿ, ಬೆಳೆದೃಢೀಕರಣ, ಚೆಕ್‍ಬಂದಿ, ಆಧಾರ್ ಪ್ರತಿ, ಬ್ಯಾಂಕ್ ಪಾಸ್‍ಬುಕ್ ಪ್ರತಿ, ಜಾತಿ ಪ್ರಮಾಣ ಪತ್ರ, ಇನ್ನು ಮುಂತಾದ ದಾಖಲೆಗಳನ್ನು ಆಯಾ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಛೇರಿಗೆ ಸಲ್ಲಿಸಬೇಕು. ಗುರಿಗೆ ಅನುಗುಣವಾಗಿ ಮಾರ್ಗಸೂಚಿಯನುಸಾರ ಫಲಾನುಭವಿಗಳನ್ನು ಜೇಷ್ಟತಾ ಆಧಾರದ ಮೇರೆಗೆ ಸಹಾಯಧನಕ್ಕೆ ಪರಿಗಣಿಸಲಾಗುವುದು.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular