HomeEntertainmentಅಭಿಮಾನಿಗಳಿಗೆ ಕಹಿ ಸುದ್ದಿ ನೀಡಿದ ಫರ್ಹಾನಾ ಭಟ್: 'ಫಿಜಿಕಲ್ ಶೋಗಳಿಂದ ಒಂದಷ್ಟು ದಿನ ದೂರ'!

ಅಭಿಮಾನಿಗಳಿಗೆ ಕಹಿ ಸುದ್ದಿ ನೀಡಿದ ಫರ್ಹಾನಾ ಭಟ್: ‘ಫಿಜಿಕಲ್ ಶೋಗಳಿಂದ ಒಂದಷ್ಟು ದಿನ ದೂರ’!

ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋಗಳ ಮೂಲಕ ಸದಾ ಸುದ್ದಿಯಲ್ಲಿರುವ ನಟಿ ಫರ್ಹಾನಾ ಭಟ್, ಮುಂಬರುವ ‘ಎಂಟಿವಿ ರೋಡೀಸ್ 21’ (ರೋಡೀಸ್: ರಿಬರ್ತ್) ಶೋನಲ್ಲಿ ಗ್ಯಾಂಗ್ ಲೀಡರ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ವದಂತಿಗಳಿಗೆ ತೆರೆ ಎಳೆದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ ನೀಡಿರುವ ಅವರು, ಈ ಸೀಸನ್‌ನಲ್ಲಿ ತಾವು ಗ್ಯಾಂಗ್ ಲೀಡರ್ ಆಗಿ ಭಾಗವಹಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

‘ಬಿಗ್ ಬಾಸ್ 19’ ರಲ್ಲಿ ರನ್ನರ್ ಅಪ್ ಆಗಿ ಹೊರಹೊಮ್ಮಿದ ನಂತರ, ಫರ್ಹಾನಾ ಸಾಹಸಮಯ ಶೋ ‘ಖತ್ರೋನ್ ಕೆ ಖಿಲಾಡಿ 15’ ನಲ್ಲಿ ತೀವ್ರ ಸ್ಪರ್ಧೆ ನೀಡಿದ್ದರು. ಈ ಶೋಗಳಲ್ಲಿ ಪಾಲ್ಗೊಂಡ ನಂತರ ಅವರ ಹೆಸರು ‘ರೋಡೀಸ್ 21’ ಗ್ಯಾಂಗ್ ಲೀಡರ್ ಸ್ಥಾನಕ್ಕೆ ಜೋರಾಗಿ ಕೇಳಿಬರುತ್ತಿತ್ತು. ಆದರೆ, ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, “ರೋಡೀಸ್ ಶೋ ಬಗ್ಗೆ ಕೇಳುತ್ತಿದ್ದ ಎಲ್ಲರಿಗೂ ಸಣ್ಣ ಸ್ಪಷ್ಟನೆ. ಈ ಸೀಸನ್‌ನಲ್ಲಿ ನಾನು ಗ್ಯಾಂಗ್ ಲೀಡರ್ ಆಗಿ ಇರುವುದಿಲ್ಲ. ಖತ್ರೋನ್ ಕೆ ಖಿಲಾಡಿಗೆ ನನ್ನೆಲ್ಲಾ ಶಕ್ತಿಯನ್ನು ನೀಡಿದ ನಂತರ, ದೈಹಿಕವಾಗಿ ಶ್ರಮದಾಯಕವಾದ ಹಾಗೂ ಸಾಹಸಮಯ ಶೋಗಳಿಂದ ಸಣ್ಣ ವಿರಾಮ ತೆಗೆದುಕೊಳ್ಳಲು ನಿರ್ಧರಿಸಿದ್ದೇನೆ” ಎಂದು ಬರೆದುಕೊಂಡಿದ್ದಾರೆ.

ಮುಂದುವರಿದು ಮಾತನಾಡಿದ ಅವರು, ಈ ಪ್ರಕ್ರಿಯೆಯು ತಮಗೆ ದೈಹಿಕವಾಗಿ ಮತ್ತು ಭಾವುಕವಾಗಿ ಅಪಾರ ಶಕ್ತಿಯನ್ನು ಬೇಡುತ್ತದೆ. ಪ್ರಸ್ತುತ ತಮಗೆ ವಿಶ್ರಾಂತಿ, ಚೇತರಿಕೆ ಮತ್ತು ಹೊಸ ವಿಷಯಗಳನ್ನು ಅನ್ವೇಷಿಸಲು ಸಮಯದ ಅಗತ್ಯವಿದೆ ಎಂದು ತಿಳಿಸಿದ್ದಾರೆ. ಆದರೆ ಇದು ಸಾಹಸಮಯ ಶೋಗಳಿಗೆ ಶಾಶ್ವತ ವಿದಾಯವಲ್ಲ, ಸೂಕ್ತ ಸಮಯದಲ್ಲಿ ಮತ್ತೆ ಹಿಂತಿರುಗುವುದಾಗಿ ಭರವಸೆ ನೀಡಿದ್ದು, ನೂತನ ಗ್ಯಾಂಗ್ ಲೀಡರ್‌ಗಳಿಗೆ ಹಾಗೂ ರೋಡೀಸ್ ತಂಡಕ್ಕೆ ಶುಭ ಹಾರೈಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇನ್ನು ಸೆಪ್ಟೆಂಬರ್ 2026 ರಿಂದ ವಿವಿಧ ಪ್ರಮುಖ ನಗರಗಳಲ್ಲಿ ಆಡಿಷನ್ ಆರಂಭಿಸಲಿರುವ ‘ರೋಡೀಸ್ ಸೀಸನ್ 21’ ಗೆ ರಣ್‌ವಿಜಯ್ ಸಿಂಗ್ ನಿರೂಪಕರಾಗಿ ಕಂಬ್ಯಾಕ್ ಮಾಡುತ್ತಿದ್ದಾರೆ. ‘ರಿಬರ್ತ್’ ಥೀಮ್‌ನೊಂದಿಗೆ ಫೀನಿಕ್ಸ್ ಹಕ್ಕಿಯ ಕಲ್ಪನೆಯಲ್ಲಿ ಮೂಡಿಬರಲಿರುವ ಈ ಶೋನಲ್ಲಿ ಈ ಬಾರಿ ಗ್ಯಾಂಗ್ ಲೀಡರ್‌ಗಳಾಗಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎಂಬ ಕುತೂಹಲ ಪ್ರೇಕ್ಷಕರಲ್ಲಿ ಮನೆಮಾಡಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular