ವಿಜಯ್ – ತ್ರಿಷಾ ಸಂಬಂಧದ ಕುರಿತಾದ ಸುದ್ದಿ ಕಳೆದ ಕೆಲವು ದಿನಗಳಿಂದ ತಮಿಳುನಾಡಿನಲ್ಲಿ ಸಖತ್ ವೈರಲ್ ಆಗುತ್ತಲೇ ಇದೆ. ವಿಜಯ್ ಅವರ ಮುಖ್ಯಮಂತ್ರಿ (ಸಿಎಂ) ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ತ್ರಿಷಾ ಆಗಮಿಸಿದ್ದರಿಂದ ಈ ವದಂತಿಗಳಿಗೆ ಮತ್ತಷ್ಟು ಬಲ ಬಂದಂತಾಗಿದೆ.
ಅಷ್ಟೇ ಅಲ್ಲದೆ, ವಿಜಯ್ ಅಭಿಮಾನಿಗಳು ತ್ರಿಷಾರನ್ನು ‘ಅತ್ತಿಗೆ’ ಎಂದೂ ಸಹ ಕರೆಯುತ್ತಿದ್ದಾರೆ. ಇತ್ತೀಚೆಗೆ ಅಭಿಮಾನಿಗಳು ತ್ರಿಷಾರನ್ನು ಮಾತನಾಡಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ಸೂರ್ಯ ಮತ್ತು ತ್ರಿಷಾ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ‘ಕರುಪ್ಪು’ ಸಿನಿಮಾ ಇಂದು ಬಿಡುಗಡೆಯಾಗಿದೆ. ತ್ರಿಷಾ ಈ ಸಿನಿಮಾವನ್ನು ವೀಕ್ಷಿಸಲು ಚೆನ್ನೈನ ಚಿತ್ರಮಂದಿರವೊಂದಕ್ಕೆ ಹೋಗಿದ್ದರು. ಸಿನಿಮಾ ಮುಗಿಸಿ ಅವರು ಹೊರಬರುತ್ತಿದ್ದಾಗ ಅಭಿಮಾನಿಗಳು ಅವರ ಕಾರನ್ನು ಸುತ್ತುವರಿದರು. ಈ ಸಂದರ್ಭದಲ್ಲಿ ವಿಜಯ್ ಅವರ ಅಭಿಮಾನಿಯೊಬ್ಬರು ಕಾರಿನ ಬಳಿ ಬಂದು, “ದಳಪತಿ ವಿಜಯ್ ಅವರಿಗೆ ನನ್ನ ಕಡೆಯಿಂದ ವಿಚಾರಿಸಿದೆ (ಕೇಳಿದೆ) ಎಂದು ಹೇಳಿ” ಎಂದರು. ಈ ಮಾತು ಕೇಳಿ ತ್ರಿಷಾ ಮುಗುಳ್ನಗುತ್ತಾ ಅಲ್ಲಿಂದ ಹೊರಟುಹೋದರು. ವಿಜಯ್ ಹೆಸರು ಪ್ರಸ್ತಾಪಿಸುತ್ತಿದ್ದಂತೆ ತ್ರಿಷಾ ನಾಚಿ ನಗುತ್ತಾ ಹೊರಟುಹೋದ ಕಾರಣ, ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿದೆ.

