HomeEntertainmentಹುಟ್ಟು ಹಬ್ಬದ ಸಂಭ್ರಮದಲ್ಲಿ ಖ್ಯಾತ ಹಿರಿಯ ನಟಿ ಮಾಧುರಿ ದೀಕ್ಷಿತ್

ಹುಟ್ಟು ಹಬ್ಬದ ಸಂಭ್ರಮದಲ್ಲಿ ಖ್ಯಾತ ಹಿರಿಯ ನಟಿ ಮಾಧುರಿ ದೀಕ್ಷಿತ್

ಬಾಲಿವುಡ್ ಚಿತ್ರರಂಗದ ಜನಪ್ರಿಯ ನಟಿ ಮಾಧುರಿ ದೀಕ್ಷಿತ್ ಇಂದು ತಮ್ಮ 57ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. 1984ರಲ್ಲಿ ತೆರೆಕಂಡ  ‘ಅಬೋದ್​’  ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸುವ ಮೂಲಕ ತಮ್ಮ ಸಿನಿ ಪಯಣ ಆರಂಭಿಸಿದರು. ಬಳಿಕ 1985 ರಲ್ಲಿ ಆವಾರಾ ಬಾಪ್ ನಲ್ಲಿ ತೆರೆ ಹಂಚಿಕೊಂಡರು.

1988 ರಲ್ಲಿ ಅನಿಲ್ ಕಪೂರ್ ಜೊತೆ ನಟಿಸಿದ್ದ ತೇಜಾಬ್ ಚಿತ್ರದ ಇವರ ಅದ್ಭುತ ನಟನೆಗೆ ಫಿಲಂ ಫೇರ್ ಪ್ರಶಸ್ತಿ ದೊರೆಯಿತು. 40 ವರ್ಷವೇ ಕಳೆದರೂ ತೇಜಾಬ್ ನ ಏಕ್ ದೋ ತೀನ್ ಹಾಡು ಇಂದಿಗೂ ಎಲ್ಲರ ಬಾಯಲ್ಲಿ ನಲಿದಾಡುತ್ತಲೇ ಇದೆ. ನಂತರ ಮಾಧುರಿ ದೀಕ್ಷಿತ್ ಅವರಿಗೆ ಸಾಲು ಸಾಲು ಸಿನಿಮಾಗಳು ಕೈಬೀಸಿ ಕರೆದವು. ಮಾಧುರಿ ದೀಕ್ಷಿತ್ ಪೋಷಕ ಪಾತ್ರಗಳಲ್ಲೂ ಕಾಣಿಸಿಕೊಂಡಿದ್ದು, ಗಾಯಕಿಯಾಗಿಯೂ ಮಿಂಚಿದ್ದಾರೆ.  2022 ರಲ್ಲಿ ಮಜಾ ಮಿ ಚಿತ್ರದಲ್ಲಿ  ಕಾಣಿಸಿಕೊಂಡಿದ್ದ ಕಳೆದ ವರ್ಷ ಪಂಚಾಕ್ ಸಿನಿಮಾ ನಿರ್ಮಾಣ ಮಾಡಿದ್ದರು. ಇಂದು ಸೋಶಿಯಲ್ ಮೀಡಿಯಾದಲ್ಲಿ ಹಿರಿಯ ಕಲಾವಿದರು ಸೇರಿದಂತೆ ಯುವ ನಟ ನಟಿಯರು ಮಾಧುರಿ ದೀಕ್ಷಿತ್ ಅವರಿಗೆ ಹುಟ್ಟು ಹಬ್ಬದ ಶುಭಾಶಯ ತಿಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular