HomeLatest NewsBREAKING : 'ಟಾಲಿವುಡ್' ಖ್ಯಾತ ಹಾಸ್ಯನಟ 'ಫಿಶ್ ವೆಂಕಟ್' ನಿಧನ |Fish Venkat passes...

BREAKING : ‘ಟಾಲಿವುಡ್’ ಖ್ಯಾತ ಹಾಸ್ಯನಟ ‘ಫಿಶ್ ವೆಂಕಟ್’ ನಿಧನ |Fish Venkat passes away

ಟಾಲಿವುಡ್ ನ ಖ್ಯಾತ ಹಾಸ್ಯನಟ ಫಿಶ್ ವೆಂಕಟ್ ನಿಧನರಾಗಿದ್ದಾರೆ. ಜನಪ್ರಿಯ ನಟ ಫಿಶ್ ವೆಂಕಟ್, ಅವರ ನಿಜವಾದ ಹೆಸರು ವೆಂಕಟ್ ರಾಜ್, ಜುಲೈ 18, 2025 ರಂದು ನಿಧನರಾದರು. ಕೆಲವು ಸಮಯದಿಂದ ಮೂತ್ರಪಿಂಡ ಸಂಬಂಧಿತ ಖಾಯಿಲೆಯಿಂದ ಬಳಲುತ್ತಿದ್ದ ಅವರು ಶುಕ್ರವಾರ ರಾತ್ರಿ ಹೈದರಾಬಾದ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

ಪರಿಪೂರ್ಣ ಹಾಸ್ಯ ಸಮಯಪ್ರಜ್ಞೆಗೆ ಹೆಸರುವಾಸಿಯಾಗಿದ್ದ ನಟ, ಹಲವು ತಿಂಗಳುಗಳಿಂದ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು.. ಅವರು ಡಯಾಲಿಸಿಸ್ಗೆ ಒಳಗಾಗಿದ್ದರು ಹಾಗೂ ಇತ್ತೀಚೆಗೆ ಅವರು ವೆಂಟಿಲೇಟರ್ ಸಪೋರ್ಟ್ ನಲ್ಲಿದ್ದರು.

ವರದಿಯ ಪ್ರಕಾರ, ವೆಂಕಟ್ ತೀವ್ರ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿದ್ದರು..ಆದರೆ ಚಿಕಿತ್ಸೆ ಫಲಿಸದೇ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಜನಪ್ರಿಯ ನಟ ಫಿಶ್ ವೆಂಕಟ್ ನಿಧನಕ್ಕೆ ಅನೇಕ ಸಿನಿ ಗಣ್ಯರು ಸಂತಾಪ ಸೂಚಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular