ಶವಾಗಾರದಲ್ಲಿ ಶಾಕಿಂಗ್ ಘಟನೆ: ಮಹಿಳೆ ಮೃತದೇಹ ಕಚ್ಚಿ ತಿಂದ ಇಲಿಗಳು

Rats

ಲಕ್ನೋ: ಉತ್ತರ ಪ್ರದೇಶದ ಆಸ್ಪತ್ರೆಯಲ್ಲಿ ಮೃತ ಮಹಿಳೆಯ ದೇಹವನ್ನು ಇಲಿ ತಿಂದಿವೆ ಎಂದು ಕುಟುಂಬದವರು ಆರೋಪಿಸಿದ್ದು, ತನಿಖೆಗೆ ಆದೇಶಿಸಲಾಗಿದೆ

ಶನಿವಾರ ನಿಗೂಢವಾಗಿ ಸಾವನ್ನಪ್ಪಿದ 24 ವರ್ಷದ ಮಹಿಳೆಯ ಕುಟುಂಬದವರು, ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಆಕೆಯ ದೇಹದ ಕೆಲವು ಭಾಗಗಳನ್ನು ಇಲಿಗಳು ಕಿತ್ತುಕೊಂಡಿವೆ ಎಂದು ಆರೋಪಿಸಿದ್ದಾರೆ. ಉತ್ತರ ಪ್ರದೇಶದ ಬುಂದೇಲ್ ಖಂಡ್ ಪ್ರದೇಶದ ಲಲಿತ್‌ಪುರ ಜಿಲ್ಲೆಯಲ್ಲಿ ಮರಣೋತ್ತರ ಪರೀಕ್ಷೆ ವೇಳೆ ಈ ಘಟನೆ ನಡೆದಿದೆ.

ಲಲಿತ್‌ಪುರ ಜಿಲ್ಲೆಯ ಮೈಲಾರ್ ಗ್ರಾಮದ ಅನುಭಾ ಯಾದವ್ ಎಂಬ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದು, ಆಕೆಯ ಶವವನ್ನು ಶನಿವಾರ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಮೃತದೇಹವನ್ನು ಪಡೆಯಲು ಸೋಮವಾರ ಆಸ್ಪತ್ರೆ ತಲುಪಿದಾಗ ಕುಟುಂಬದವರು ಪ್ರತಿಭಟಿಸಿದರು, ಮೃತರ ದೇಹವು ನೆಲದ ಮೇಲೆ ಬಿದ್ದಿರುವುದು ಮತ್ತು ಮುಖವನ್ನು ಇಲಿಗಳು ಭಾಗಶಃ ಕಿತ್ತು ತಿಂದಿರುವುದನ್ನು ಕಂಡು ಆಕ್ರೋಶಗೊಂಡರು. ಇದರಿಂದ ರೊಚ್ಚಿಗೆದ್ದ ಕುಟುಂಬಸ್ಥರು ನಿರ್ಲಕ್ಷ್ಯ ತೋರಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದರು.

ಏತನ್ಮಧ್ಯೆ, ಲಲಿತ್‌ಪುರದ ಮುಖ್ಯ ವೈದ್ಯಕೀಯ ಅಧಿಕಾರಿ (ಸಿಎಂಒ) ಡಾ ಇಮ್ತಿಯಾಜ್ ಅಹ್ಮದ್ ಅವರು ಈ ವಿಷಯದ ಬಗ್ಗೆ ತನಿಖೆ ನಡೆಸಲು ಮೂವರು ಸದಸ್ಯರ ಸಮಿತಿಯನ್ನು ರಚಿಸಿದರು. ಮರಣೋತ್ತರ ಪರೀಕ್ಷೆಯ ಮನೆಯಲ್ಲಿ ಶವವನ್ನು ಡೀಪ್ ಫ್ರೀಜರ್‌ನಲ್ಲಿ ಏಕೆ ಇಡಲಿಲ್ಲ ಎಂಬುದನ್ನೂ ಸಮಿತಿಯು ಪರಿಶೀಲಿಸುತ್ತದೆ ಎಂದು ಡಾ ಅಹ್ಮದ್ ಹೇಳಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read