HomeKarnatakaಸ್ಟಾಕ್ ಮಾರ್ಕೆಟ್ ನಲ್ಲಿ ಹೆಚ್ಚಿನ ಲಾಭಾಂಶದ ಭರವಸೆ ನೀಡಿ ವಂಚನೆ: ನಕಲಿ ಕಾಲ್ ಸೆಂಟರ್ ಮೇಲೆ...

ಸ್ಟಾಕ್ ಮಾರ್ಕೆಟ್ ನಲ್ಲಿ ಹೆಚ್ಚಿನ ಲಾಭಾಂಶದ ಭರವಸೆ ನೀಡಿ ವಂಚನೆ: ನಕಲಿ ಕಾಲ್ ಸೆಂಟರ್ ಮೇಲೆ ಪೊಲೀಸರ ದಿಢೀರ್ ದಾಳಿ

ಬೆಂಗಳೂರು: ಸ್ಟಾಕ್ ಮಾರ್ಕೆಟ್‌ನಲ್ಲಿ ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಿ ಸಾರ್ವಜನಿಕರಿಗೆ ವಂಚಿಸುತ್ತಿದ್ದ ಹೈಟೆಕ್ ವಂಚಕರ ಜಾಲವನ್ನು ಸೈಬರ್ ಕಮಾಂಡ್ ಪತ್ತೆಹಚ್ಚುವಲ್ಲಿ ಯಶ್ವಿಯಾಗಿದ್ದು, ಬೆಂಗಳೂರಿನ ನಕಲಿ ಕಾಲ್ ಸೆಂಟರ್ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.

ಬೆಂಗಳೂರಿನ ಜಯನಗರದಲ್ಲಿ ಕಾಲ್ ಸೆಂಟರ್ ಹೆಸರಲ್ಲಿ ಕಾರ್ಯನಿರ್ವಹಿಸುತ್ತಿದ್ದ ವಂಚಕರ ಅಡ್ಡೆಯ ಮೇಲೆ ಪೊಲೀಸರು ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಜಯನಗರದ 9ನೇ ಬ್ಲಾಕ್‌ನ ಅಂಜನಾದ್ರಿ ಅವೆನ್ಯೂನಲ್ಲಿರುವ ‘ಮಲ್ಟಿವೇವ್ ಬಿಸಿನೆಸ್ ಸಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್’ ಎಂಬ ಕಚೇರಿಯ ಮೇಲೆ ಪೊಲೀಸರು ದಾಳಿ ನಡೆಸಿ ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ. ಗುಜರಾತ್‌ನ ಸೂರತ್ ಮೂಲದ ಕುಮಾವತ್ ಯೋಗೇಶ್ ಅಮರರಾಮ್ ಮತ್ತು ದೆಹಲಿಯ ಹಜರತ್ ನಿಜಾಮುದ್ದೀನ್ ಮೂಲದ ಇಮ್ರಾನ್ ಪ್ರಸ್ತುತ ಬಿಟಿಎಂ ಲೇಔಟ್ ನಿವಾಸಿ ಬಂಧಿತ ಆರೋಪಿಗಳು.

ಈ ಕಂಪನಿ ಹೊರ ರಾಜ್ಯದ 15 ಜನರನು ಎಕ್ಸಿಕ್ಯೂಟಿವ್‌ ಕೆಲಸಕ್ಕೆ ಇಟ್ಟುಕೊಂಡಿತ್ತು. ಇವರು ಅಮಾಯಕರಿಗೆ ಕರೆ ಮಾಡಿ, ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಅತಿ ಹೆಚ್ಚು ಲಾಭ ನೀಡುವುದಾಗಿ ಆಮಿಷವೊಡ್ಡುತ್ತಿದ್ದರು. ಗ್ರಾಹಕರು ಹೆಚ್ಚಿನ ಲಾಭದ ಆಸೆಗೆ ಹಣ ವರ್ಗಾವಣೆ ಮಾಡಿದ ತಕ್ಷಣ ಫೋನ್ ಸ್ವಿಚ್ ಆಫ್ ಮಾಡಿ ಎಸ್ಕೇಪ್ ಆಗುತ್ತಿದ್ದರು.

ಬಿಟಿಎಂ ಲೇಔಟ್‌ನಿಂದ ಬರುತ್ತಿದ್ದ ಕರೆಗಳನ್ನು ಡಿಜಿಟಲ್ ಫೋರೆನ್ಸಿಕ್ ಮೂಲಕ ಪತ್ತೆಹಚ್ಚಿದ ಪೊಲೀಸರು, ಐಎಂಇಐ ಸಂಖ್ಯೆ ಮತ್ತು ಗೂಗಲ್ ಇಮೇಲ್ ಐಡಿಗಳ ಮೂಲಕ ಆರೋಪಿ ಅಮರರಾಮ್‌ನನ್ನು ಟ್ರೇಸ್ ಮಾಡಿದ್ದಾರೆ. ದಾಳಿಯ ವೇಳೆ ಪೊಲೀಸರು 31 ಮೊಬೈಲ್ ಫೋನ್‌ಗಳು, 13 ಲ್ಯಾಪ್‌ಟಾಪ್‌ಗಳು, 16 ಸಿಮ್ ಕಾರ್ಡ್‌ಗಳು, ಕಂಪನಿಯ ಲೆಟರ್‌ಹೆಡ್‌ಗಳು ಮತ್ತು ಸಂತ್ರಸ್ತರ ವಿವರಗಳಿರುವ ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ.ಎಂದು ತಿಳಿದುಬಂದಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular