HomeKarnatakaBIG NEWS : ಡಿ.ಇ.ಎಲ್.ಇ.ಡಿ./ಡಿ.ಪಿ.ಇಡಿ/ಡಿ.ಪಿ.ಎಸ್.ಇ ತರಗತಿಗಳಿಗೆ ಪ್ರವೇಶಾತಿ ದಿನಾಂಕ ವಿಸ್ತರಿಸಿ 'ಶಿಕ್ಷಣ ಇಲಾಖೆ' ಆದೇಶ

BIG NEWS : ಡಿ.ಇ.ಎಲ್.ಇ.ಡಿ./ಡಿ.ಪಿ.ಇಡಿ/ಡಿ.ಪಿ.ಎಸ್.ಇ ತರಗತಿಗಳಿಗೆ ಪ್ರವೇಶಾತಿ ದಿನಾಂಕ ವಿಸ್ತರಿಸಿ ‘ಶಿಕ್ಷಣ ಇಲಾಖೆ’ ಆದೇಶ

ಬೆಂಗಳೂರು: ಶಾಲಾ ಶಿಕ್ಷಣ ಇಲಾಖೆಯ ಕೇಂದ್ರೀಕೃತ ದಾಖಲಾತಿ ಘಟಕವು, 2026-27ನೇ ಸಾಲಿನ ಡಿ.ಇ.ಎಲ್.ಇಡಿ (D.El.Ed), ಡಿ.ಪಿ.ಇಡಿ (D.P.Ed) ಮತ್ತು ಡಿ.ಪಿ.ಎಸ್.ಇ (D.P.S.E) ತರಗತಿಗಳಿಗೆ ಸರ್ಕಾರಿ ಕೋಟಾದಡಿ ನಡೆಯುವ ಪ್ರವೇಶಾತಿ ಪ್ರಕ್ರಿಯೆಯ ದಿನಾಂಕವನ್ನು ವಿಸ್ತರಿಸಿ ಆದೇಶ ಹೊರಡಿಸಿದೆ.

ವಿದ್ಯಾರ್ಥಿಗಳ ಹಿತದೃಷ್ಟಿಯಿಂದ, ಈ ಕೋರ್ಸ್‌ಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ನಿಗದಿಪಡಿಸಿದ್ದ ಕೊನೆಯ ದಿನಾಂಕವನ್ನು 12-06-2026 ರ ಸಂಜೆ 04:00 ಗಂಟೆಯವರೆಗೆ ವಿಸ್ತರಿಸಲಾಗಿದೆ.

ಡಿ.ಎಸ್.ಇ.ಆರ್.ಟಿ (DSERT) ನಿರ್ದೇಶಕರ ನಿರ್ದೇಶನದ ಮೇರೆಗೆ, ಸಂಬಂಧಪಟ್ಟ ಎಲ್ಲಾ ಜಿಲ್ಲಾ ಡಯಟ್ (DIET) ಪ್ರಾಂಶುಪಾಲರಿಗೆ ಈ ಕುರಿತು ಮಾಹಿತಿ ರವಾನಿಸಲಾಗಿದೆ. ವಿದ್ಯಾರ್ಥಿಗಳು ನಿಗದಿತ ಆನ್‌ಲೈನ್ ಲಿಂಕ್ ಬಳಸಿ ತಮ್ಮ ವಿವರಗಳನ್ನು ಭರ್ತಿ ಮಾಡುವಂತೆ ಹಾಗೂ ಈ ಪ್ರಕ್ರಿಯೆಯನ್ನು ತುರ್ತಾಗಿ ಪೂರ್ಣಗೊಳಿಸಿ ಸಿ.ಎ.ಸಿ (CAC) ಕಚೇರಿಗೆ ಕಳುಹಿಸಿಕೊಡುವಂತೆ ಇಲಾಖೆ ಸೂಚಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular