HomeKarnatakaಕೃಷಿ ಪದವಿಗೆ ಪ್ರಾಯೋಗಿಕ ಪರೀಕ್ಷೆಯ ಅವಧಿ ವಿಸ್ತರಣೆ

ಕೃಷಿ ಪದವಿಗೆ ಪ್ರಾಯೋಗಿಕ ಪರೀಕ್ಷೆಯ ಅವಧಿ ವಿಸ್ತರಣೆ

ಶಿವಮೊಗ್ಗ : ರೈತರ ಮಕ್ಕಳಿಗಾಗಿ ಮೀಸಲಿರುವ ಕೃಷಿ ಪದವಿ ಸೀಟುಗಳಿಗಾಗಿ ಪ್ರವೇಶ ಪ್ರಾಯೋಗಿಕ ಪರೀಕ್ಷೆಯನ್ನು ಮೇ. 10 ರವರೆಗೆ ವಿಸ್ತರಿಸಲಾಗಿದ್ದು, ಕೃಷಿ ಮಹಾವಿದ್ಯಾಲಯ, ಶಿವಮೊಗ್ಗ ಮತ್ತು ತೋಟಗಾರಿಕೆ ಮಹಾವಿದ್ಯಾಲಯ, ಹಿರಿಯೂರು ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗುವುದು ಎಂದು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರಕಟಣೆ ತಿಳಿಸಿದೆ.

ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಹಾಗು ಸಿ.ಇ.ಟಿಯ ನೇತೃತ್ವದಲ್ಲಿ ನಡೆಸಲಾಗುವ ಈ ಪ್ರಾಯೋಗಿಕ ಪರೀಕ್ಷೆಯು ಎಲ್ಲಾ ಕೃಷಿ ವಿಜ್ಞಾನಗಳಿಗೆ ಹಾಗೂ ಪಶು ವೈದ್ಯಕೀಯ ವಿಜ್ಞಾನಗಳ ಕೋರ್ಸ್ಗಳ ಪ್ರವೇಶ ಪ್ರಕ್ರಿಯೆಗಾಗಿ ನಡೆಯಲಿದೆ. ಕೃಷಿಕರ ಕೋಟಾದಲ್ಲಿ ಈಗಾಗಲೇ ಸಿ.ಇ.ಟಿ. ಅರ್ಜಿಯಲ್ಲಿ ಸಲ್ಲಿಸಿ ಅನರ್ಹರಾಗಿರುವ ಅಭ್ಯರ್ಥಿಗಳು ಸೂಕ್ತ ದಾಖಲೆಗಳನ್ನು ಸಲ್ಲಿಸಲು ಮತ್ತು ಹೊಸದಾಗಿ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ಕೊನೆಯ ದಿನಾಂಕವನ್ನು ಮೇ.04 ರ ಮಧ್ಯಾಹ್ನ 12.00 ಗಂಟೆಯವರೆಗೆ ಮುಂದೂಡಲಾಗಿದೆ.

ಈ ವೇಳಪಟ್ಟಿ ಈ ಕೆಳಕಂಡಂತಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಭ್ಯರ್ಥಿಗಳು ಮೂಲ ದಾಖಲಾತಿಗಳನ್ನು ಆನ್ ಲೈನ್ ಮೂಲಕ ಅಪ್ ಲೋಡ್ ದಿನಾಂಕ: 04-05-2026ರ ಮಧ್ಯಾಹ್ನ 12.00 ಗಂಟೆಯವರೆಗೆ ಮಾಡುವುದು

ಆನ್ ಲೈನ್ನಲ್ಲಿ ದಾಖಲಾತಿಗಳ ಪರಿಶೀಲನೆ ಮತ್ತು ಕೃಷಿ ಕೋಟಾದಡಿ ಪ್ರಾಯೋಗಿಕ ಪರೀಕ್ಷೆಗೆ ಅರ್ಹ/ ಅರ್ಹರಲ್ಲದ ಅಭ್ಯರ್ಥಿಗಳ ಪಟ್ಟಿಯ ಸಿದ್ಧತೆ – ಆಯಾ ಕೇಂದ್ರಗಳಲ್ಲಿ ನಿಯೋಜಿಸಿದ ಸಮಿತಿ ಸದಸ್ಯರಿಂದ (ಆಯಾ ವಿಶ್ವವಿದ್ಯಾಲಯಗಳು ನಿಯೋಜಿಸಿದ) ದಿನಾಂಕ: 05-05-2026ರ ಸಂಜೆ 4.00 ಗಂಟೆವರೆಗೆ ಮಾಡುವುದು.

ಪ್ರಾಯೋಗಿಕ ಪರೀಕ್ಷೆಗೆ ಅರ್ಹ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ಜಾಲತಾಣದಲ್ಲಿ ದಿನಾಂಕ: 07-05-2026 ಪ್ರಕಟಿಸಲಾಗುವುದು.

ಅರ್ಹ ಅಭ್ಯರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ಜಾಲತಾಣದಲ್ಲಿ ಪ್ರವೇಶ ಪತ್ರವನ್ನು ಮೇ 08 ರಿಂದ ಮೇ 10 ರ ಬೆಳಗ್ಗೆ 7.00 ರವರೆಗೆ ಡೌನ್ಲೋಡ್ ಮಾಡಿಕೊಳ್ಳವುದು

ಪ್ರಾಯೋಗಿಕ ಪರೀಕ್ಷೆಯನ್ನು ರಾಜ್ಯದ ಕೃಷಿ ಮತ್ತು ಕೃಷಿ ಸಂಬಂಧಿತ ವಿಶ್ವವಿದ್ಯಾಲಯಗಳ 17 ಕೇಂದ್ರಗಳಲ್ಲಿ ಏಕಕಾಲಕ್ಕೆ ಮೇ 10 ರಂದು ಬೆಳಗ್ಗೆ 09.00 ರಿಂದ ಪ್ರಾರಂಭಿಸಲಾಗುವುದು. ಆದ್ದರಿಂದ ಅಭ್ಯರ್ಥಿಗಳು ಪ್ರಯೋಗಿಕ ಕೇಂದ್ರಗಳಲ್ಲಿ ಮೇ.10 ರಂದು ಬೆಳಗ್ಗೆ 08.00ಕ್ಕೆ ವರದಿ ಮಾಡಿಕೊಳ್ಳಲು ಸೂಚಿಸಲಾಗಿದೆ. ತಡವಾಗಿ ಬರುವ ಅಭ್ಯರ್ಥಿಗಳಿಗೆ ಪ್ರಾಯೋಗಿಕ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದಿಲ್ಲ. ರಾಜ್ಯದ ಎಲ್ಲಾ ಕೃಷಿ ಮತ್ತು ಕೃಷಿ ಸಂಬಂಧಿತ ವಿಶ್ವವಿದ್ಯಾಲಯಗಳಲ್ಲಿ ಮೇ. 14 ರಂದು ಬೆಳ್ಳಿಗೆ 11.00 ಗಂಟೆಯ ಒಳಗೆ ಪ್ರಾಯೋಗಿಕ ಪರೀಕ್ಷಾ ಫಲಿತಾಂಶವನ್ನು ಪ್ರಕಟಿಸಲಾಗುವುದು. ವಿದ್ಯಾರ್ಥಿಗಳು ಬದಲಾದ ದಿನಾಂಕಗಳ ಗಮನಕ್ಕಾಗಿ ಹಾಗೂ ಮಾಹಿತಿಗಾಗಿ ಈ ಕೆಳಗಿನ ಅಂತರಜಾಲ ತಾಣಗಳಿಗೂ ಭೇಟಿ ನೀಡಬಹುದಾಗಿದೆ. www.uasbangalore.edu.in, www.uasd.edu.in/www.uasd.edu, www.uhsbagalkot.edu.in/uhsbagalkot.karnataka.gov.in, www.uahs.edu.in, www.uasraichur.edu.in/raichur.karnataka.gov.in, www.kvafsu.edu.in, http//kea.kar.nic.in,http//pgadmission.kar.nic.in/ugcet/UG_Home.aspx ,www.kvafsu.edu.in,

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular