ಸುಖ, ಸಂತೋಷ ಹಾಳು ಮಾಡುವ ಅತಿಯಾದ ʼಆಲೋಚನೆʼ ಆರೋಗ್ಯಕ್ಕೆ ಒಳ್ಳೆಯದಲ್ಲ

ಇತ್ತೀಚಿನ ದಿನಗಳಲ್ಲಿ ಒತ್ತಡಗಳು ಮಾಮೂಲಿ ಎನ್ನುವಂತಾಗಿದೆ. ಮನೆ, ಕೆಲಸ, ಮಕ್ಕಳ ಭವಿಷ್ಯ ಹೀಗೆ ಪ್ರತಿಯೊಬ್ಬರಿಗೂ ಒಂದಲ್ಲ ಎರಡಲ್ಲ ಅನೇಕ ಸಮಸ್ಯೆಗಳಿರುತ್ತವೆ. ಈ ಎಲ್ಲ ಸಮಸ್ಯೆಗಳ ಬಗ್ಗೆ ಮನಸ್ಸಿನಲ್ಲಿ ಆಲೋಚನೆಗಳು ಬರುವುದು ಸಹಜ. ಆದ್ರೆ ಆಲೋಚನೆಗಳು ಅತಿಯಾದ್ರೆ ಅಪಾಯಕ್ಕೆ ಆಹ್ವಾನ ನೀಡಿದಂತೆ.

ಕೆಲವೊಬ್ಬರು ಅವಶ್ಯಕತೆಗಿಂತ ಹೆಚ್ಚಿನದನ್ನು ಆಲೋಚನೆ ಮಾಡುತ್ತಾರೆ. ಇದಕ್ಕೆ ಅತಿಯಾದ ಆಲೋಚನೆ ಎಂದು ಕರೆಯಲಾಗುತ್ತದೆ. ಈ ಆಲೋಚನೆಗಳು ಸುಖ, ಸಂತೋಷವನ್ನು ಹಾಳು ಮಾಡುತ್ತವೆ. ಇದರಿಂದ ಕೀಳರಿಮೆ, ಖಿನ್ನತೆ ಕೂಡ ಆವರಿಸಬಹುದು, ಹಾಗಾಗಿ ಈ ಆಲೋಚನೆಗಳಿಂದ ಸುಲಭವಾಗಿ ಹೊರಬಂದು ಖುಷಿಯಾಗಿರುವುದು ಪ್ರತಿಯೊಬ್ಬನಿಗೂ ಮುಖ್ಯ.

ಅನಗತ್ಯವಾಗಿ ನಿಮ್ಮನ್ನು ಏಕಾಂತಕ್ಕೆ ಎಳೆದುಕೊಳ್ಳಬೇಡಿ. ಕುಟುಂಬದ ವಿಷಯಗಳನ್ನು ವೈಯಕ್ತಿಕ ಜೀವನದಲ್ಲಿ ಹಸ್ತಕ್ಷೇಪ ಎಂದು ಪರಿಗಣಿಸಬೇಡಿ. ಹೊರಹೋಗಿ, ಸ್ನೇಹಿತರ ಜೊತೆ ಮತನಾಡಿ. ಅವರ ಬಳಿ ನಿಮ್ಮ ನೋವನ್ನು ಹೇಳಿಕೊಂಡರೆ ಮನಸ್ಸು ಹಗುರವಾಗುತ್ತದೆ. ಅತಿ ಹೆಚ್ಚು ಆಲೋಚನೆ ಮಾಡುವುದ್ರಿಂದ ಸಮಸ್ಯೆ ಕಡಿಮೆಯಾಗುವುದಿಲ್ಲ.

ಯಾವುದೇ ಕಾರಣಕ್ಕಾಗಿ ನೀವು ವೈಫಲ್ಯವನ್ನು ಎದುರಿಸಿದರೆ, ನಿರುತ್ಸಾಹಗೊಳಿಸಬೇಡಿ. ಬದಲಿಗೆ ನೀವು ಮಾಡಿದ ಕಾರ್ಯಗಳಿಗಾಗಿ ನಿಮ್ಮನ್ನು ಪ್ರಶಂಸಿಸಿ ಮತ್ತು ನಿಮ್ಮ ವೈಫಲ್ಯವನ್ನು ಯಶಸ್ಸಿಗೆ ಪರಿವರ್ತಿಸುವ ಇಚ್ಛಾಶಕ್ತಿ ಹೊಂದಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read