HomeKarnatakaಪುನೀತ್ ಕೆರೆಹಳ್ಳಿಯನ್ನು ಭೇಟಿಯಾಗಿ ಧೈರ್ಯ ಹೇಳಿದ ಮಾಜಿ ಸಚಿವ ಸಿ.ಟಿ. ರವಿ

ಪುನೀತ್ ಕೆರೆಹಳ್ಳಿಯನ್ನು ಭೇಟಿಯಾಗಿ ಧೈರ್ಯ ಹೇಳಿದ ಮಾಜಿ ಸಚಿವ ಸಿ.ಟಿ. ರವಿ

ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿ ಈ ಹಿಂದೆ ಬಂಧಿಸಲಾಗಿದ್ದು, ಈ ಆರೋಪಗಳಿಗೆ ಪೂರಕ ದಾಖಲೆ ನೀಡುವಂತೆ ಪುನೀತ್ ಕೆರೆಹಳ್ಳಿ ಗಾಂಧಿ ಪ್ರತಿಮೆ ಬಳಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದು, ಮಂಗಳವಾರದಂದು ಅವರನ್ನು ವಶಕ್ಕೆ ಪಡೆದಿದ್ದ ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದರು.

ನಾನು ಆರೋಗ್ಯವಾಗಿದ್ದೇನೆ, ತಪಾಸಣೆ ಮಾಡಿಸಬೇಕೆಂದರೆ ವೈದ್ಯರನ್ನೇ ಇಲ್ಲಿಗೆ ಕರೆಯಿಸಿ ಎಂದು ಪುನೀತ್ ಕೆರೆಹಳ್ಳಿ ಪ್ರತಿಭಟಿಸಿದರೂ ಸಹ ಅವರನ್ನು ವ್ಯಾನಿನಲ್ಲಿ ಕರೆದೊಯ್ದಿದ್ದ ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆಸ್ಪತ್ರೆಗೆ ದಾಖಲಾಗಿರುವ ಪುನೀತ್ ಕೆರೆಹಳ್ಳಿ ಅವರನ್ನು ಇಂದು ಭೇಟಿಯಾಗಿರುವ ಮಾಜಿ ಸಚಿವ ಸಿಟಿ ರವಿ, ಧೈರ್ಯ ಹೇಳಿದ್ದಾರೆ. ಅಲ್ಲದೆ ಇದೇ ಸಂದರ್ಭದಲ್ಲಿ ಪೊಲೀಸರ ವಿರುದ್ಧವೂ ಸಿ.ಟಿ. ರವಿ ಕಿಡಿ ಕಾರಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular