HomeKarnatakaಗ್ರಾಮ ಪಂಚಾಯತಿಗಳಲ್ಲಿ 'ಸಹಾಯ ಮತ್ತು ಸೌಲಭ್ಯ ಕೇಂದ್ರ' ಸ್ಥಾಪನೆ: ಗ್ರಾಮೀಣ ಭಾಗದ ಜನರಿಗೆ ವಿವಿಧ ಸರ್ಕಾರಿ...

ಗ್ರಾಮ ಪಂಚಾಯತಿಗಳಲ್ಲಿ ‘ಸಹಾಯ ಮತ್ತು ಸೌಲಭ್ಯ ಕೇಂದ್ರ’ ಸ್ಥಾಪನೆ: ಗ್ರಾಮೀಣ ಭಾಗದ ಜನರಿಗೆ ವಿವಿಧ ಸರ್ಕಾರಿ ಸೇವೆಗಳು ಲಭ್ಯ

ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಜಿಲ್ಲಾ ಪಂಚಾಯತ್ ಕೊಪ್ಪಳ ಹಾಗೂ ತಾಲೂಕು ಪಂಚಾಯತ್ ಕೊಪ್ಪಳ ಇವುಗಳ ಸಹಯೋಗದೊಂದಿಗೆ ಕೊಪ್ಪಳ ತಾಲೂಕಿನ ಒಟ್ಟು 38 ಗ್ರಾಮ ಪಂಚಾಯತಿಗಳಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ‘ಸಹಾಯ ಮತ್ತು ಸೌಲಭ್ಯ ಕೇಂದ್ರ’ (ಹೆಲ್ಪ್ & ಫೆಸಿಲಿಟೆಷನ್ ಸೆಂಟರ್ – ಹೆಚ್.ಎಫ್.ಸಿ) ಗಳನ್ನು ಯಶಸ್ವಿಯಾಗಿ ಸ್ಥಾಪಿಸಲಾಗಿದೆ.

ಗ್ರಾಮೀಣ ಭಾಗದ ಜನರಿಗೆ ವಿವಿಧ ಸರ್ಕಾರಿ ಸೇವೆಗಳು, ಶಾಶ್ವತ ವಾಸಸ್ಥಳ ಪ್ರಮಾಣ ಪತ್ರ ಸೇರಿದಂತೆ ಹಲವು ಸೌಲಭ್ಯಗಳು ಮತ್ತು ಅರ್ಜಿ ಸಲ್ಲಿಕೆ ಪ್ರಕ್ರಿಯೆಗಳು ಸುಲಭವಾಗಿ ದೊರೆಯುವಂತೆ ಮಾಡಲು ಈ ಕೇಂದ್ರಗಳನ್ನು ಕಾರ್ಯಾರಂಭಗೊಳಿಸಲಾಗಿದೆ.

ಸಹಾಯವಾಣಿ ಸೌಲಭ್ಯ: ಸಾರ್ವಜನಿಕರ ಕುಂದುಕೊರತೆಗಳು ಹಾಗೂ ಮಾಹಿತಿಗಾಗಿ ಪಂಚಮಿತ್ರ ಸಹಾಯವಾಣಿ ಸಂಖ್ಯೆ: 8277506000 ಅನ್ನು ಪ್ರಕಟಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸೇವೆಗಳ ಲಭ್ಯತೆ: ಗ್ರಾಮೀಣ ನಾಗರಿಕರು ತಮಗೆ ಬೇಕಾದ ಸೌಲಭ್ಯಗಳಿಗೆ ಪಂಚಾಯತ್ ಮಟ್ಟದಲ್ಲೇ ನೇರವಾಗಿ ಅರ್ಜಿ ಸಲ್ಲಿಸಲು ವ್ಯವಸ್ಥೆ ಕಲ್ಪಿಸಲಾಗಿದೆ.

ಹೆಚ್.ಎಫ್.ಸಿ ಅಳವಡಿಸಲಾದ ಪ್ರಮುಖ ಗ್ರಾಮ ಪಂಚಾಯತಿಗಳು: ಅಗಳಕೇರಾ, ಅಳವಂಡಿ, ಬಹದ್ದೂರಬಂಡಿ, ಬಂಡಿಹರ್ಲಾಪುರ, ಬೆಟಗೇರಿ, ಬೇವಿನಹಳ್ಳಿ, ಬಿಸರಳ್ಳಿ, ಬೋಚನಹಳ್ಳಿ, ಬೂದಗುಂಪಾ, ಚಿಕ್ಕಬೊಮ್ಮನಾಳ, ಗಿಣಿಗೇರಾ, ಗೊಂಡಬಾಳ, ಗುಳದಳ್ಳಿ, ಹಲಗೇರಿ, ಹಾಲವರ್ತಿ, ಹಾಸಗಲ್, ಹಟ್ಟಿ, ಹಿರೇಬಗನಾಳ, ಹಿರೇಸಿಂಧೋಗಿ, ಹಿಟ್ನಾಳ, ಹೊಸಳ್ಳಿ, ಹುಲಿಗಿ, ಇಂದರಗಿ, ಇರಕಲ್ಲಗಡಾ, ಕಲಕೇರಾ, ಕಲ್ಲತಾವರಗೇರಾ, ಕಾತರಕಿ-ಗುಡ್ಲಾನೂರು, ಕವಲೂರು, ಕಿನ್ನಾಳ, ಕೋಳೂರು, ಕುಣಿಕೇರಿ, ಲೇಬಗೇರಿ, ಮಾದಿನೂರು, ಮತ್ತೂರು, ಮುನಿರಾಬಾದ್ ಡ್ಯಾಂ, ಓಜನಹಳ್ಳಿ, ಶಿವಪುರ ಮತ್ತು ವನಬಳ್ಳಾರಿ ಸೇರಿದಂತೆ ತಾಲೂಕಿನಾದ್ಯಂತ ಹೆಚ್.ಎಫ್.ಸಿ ಕೇಂದ್ರಗಳನ್ನು ತೆರೆಯಲಾಗಿದೆ.

ಸಹಾಯ ಮತ್ತು ಸೌಲಭ್ಯ ಕೇಂದ್ರಗಳ ಸ್ಥಾಪನೆಯಿಂದಾಗಿ ಗ್ರಾಮೀಣ ಜನರು ವಿವಿಧ ಪ್ರಮಾಣ ಪತ್ರಗಳು ಹಾಗೂ ಇತರೆ ಸೇವೆಗಳಿಗಾಗಿ ದೂರದ ತಾಲೂಕು ಕೇಂದ್ರಗಳಿಗೆ ಅಲೆಯುವುದು ತಪ್ಪಲಿದ್ದು, ಪಂಚಾಯತ್ ಮಟ್ಟದಲ್ಲೇ ತ್ವರಿತ ಸೇವೆ ಸಿಗಲಿದೆ ಎಂದು ಕೊಪ್ಪಳ ತಾಲ್ಲೂಕು ಪಂಚಾಯತ ಇಓ ದುಂಡಪ್ಪ‌ ತುರಾದಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular