HomeLive NewsBREAKING: EPFO ಸೊಸೈಟಿಯಲ್ಲಿ 70 ಕೋಟಿ ವಂಚನೆ ಪ್ರಕರಣ: ಅಕೌಂಟೆಂಟ್ ಮನೆ ಮೇಲೆ ಪೊಲೀಸರ ದಾಳಿ

BREAKING: EPFO ಸೊಸೈಟಿಯಲ್ಲಿ 70 ಕೋಟಿ ವಂಚನೆ ಪ್ರಕರಣ: ಅಕೌಂಟೆಂಟ್ ಮನೆ ಮೇಲೆ ಪೊಲೀಸರ ದಾಳಿ

ಬೆಂಗಳೂರು: ಇಪಿಎಫ್ ಒ ಸೊಸೈಟಿಯಲ್ಲಿ 70 ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರುವ ಬೆಂಗಳೂರಿನ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಸೊಸೈಟಿಯ ಅಕೌಂಟೆಂಟ್ ಜಗದೀಶ್ ಮನೆ ಮೇಲೆ ದಾಳಿ ನಡೆಸಿದ್ದಾರೆ.

ಇಪಿಎಫ್ ಒ ಸೊಸೈಟಿ ಅಕೌಂಟೆಂಟ್ ಆಗಿದ್ದ ಜಗದೀಶ್ ಅವರ ಬೆಂಗಳೂರಿನ ಅಂಜನಾಪುರದಲ್ಲಿರುವ ನಿವಾಸದ ಮೇಲೆ ದಾಳಿ ನಡೆಸಲಾಗಿದ್ದು, ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. 21 ಸಾವಿರ ಸಂಬಳ ಪಡೆಯುತ್ತಿದ್ದ ಅಕೌಂಟೆಂಟ್ ಜಗದೀಶ್, 5 ಕೋಟಿ ರೂ ಮನೆ ನಿರ್ಮಿಸಿದ್ದಾರೆ. ಅಲ್ಲದೇ ಬೆಂಗಳೂರಿನ ದಕ್ಷಿಣ ಜಿಲ್ಲೆಯ ಹಲವೆಡೆ ಆಸ್ತಿ ಖರೀದಿ ಮಾಡಿದ್ದಾರೆ ಎಂಬುದು ದಾಳಿ ವೇಳೆ ಪತ್ತೆಯಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular