ಬೆಂಗಳೂರು : 2026ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ಸಂಬಂಧಿಸಿದಂತೆ. NSQF ಪ್ರಾಯೋಗಿಕ ಪರೀಕ್ಷೆಯ ಅಂಕಗಳನ್ನು ನಮೂದು ಮಾಡುವ ಕುರಿತು ಪರೀಕ್ಷಾ ಮಂಡಳಿ ಸುತ್ತೋಲೆ ಹೊರಡಿಸಿದೆ.
2026ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ಸಂಬಂಧಿಸಿದಂತೆ, NSQF ಪ್ರಾಯೋಗಿಕ ಪರೀಕ್ಷೆಯ (Practical Exam) ಅಂಕಗಳನ್ನು Online ನಲ್ಲಿ Update ಮಾಡುವ ಕುರಿತು ಮತ್ತು ಅಂಕಗಳನ್ನು ಹಿಂದಿನ ವರ್ಷಗಳಂತಯೇ Mark List ಗಳಲ್ಲಿ ನಮೂದು ಮಾಡುವ ಸಂದರ್ಭದಲ್ಲಿ ಈ ಕೆಳಕಂಡ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ತಿಳಿಸಿದೆ. NSQF ಪ್ರಾಯೋಗಿಕ ಪರೀಕ್ಷಾ ಕೇಂದ್ರಗಳ (ಅನುಬಂಧ-01 ಮತ್ತು 02)ರ ಪಟ್ಟಿಯನ್ನು ಈ ಸುತ್ತೋಲೆಯೊಂದಿಗೆ ಲಗತ್ತಿಸಲಾಗಿದೆ.
NSQF ವಿಷಯಗಳ ಪ್ರಾಯೋಗಿಕ ಪರೀಕ್ಷೆಯ (Practical Exam) ಕುರಿತು
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯ ಜಾಲತಾಣದಲ್ಲಿ ដ (www.kseab.karnataka.gov.in) PU EXAM PORTAL LOGIN ಲಿಂಕ್ ಮುಖಾಂತರ ಪ್ರಾಯೋಗಿಕ ಪರೀಕ್ಷೆಯ Empty Mark List ಮತ್ತು Nominal Roll ಗಳನ್ನು ಡೌನ್ಲೋಡ್ ಮಾಡಿಕೊಳ್ಳುವುದು.
ಅನುಬಂಧ 01ರಲ್ಲಿ ನಮೂದಿಸಿರುವ ಒಟ್ಟು 134 ಪ್ರಾಯೋಗಿಕ ಪರೀಕ್ಷಾ ಕೇಂದ್ರಗಳ ಪಟ್ಟಿಯಲ್ಲಿರುವ ಕಾಲೇಜುಗಳಲ್ಲಿ ಮಾತ್ರ NSQF ಪ್ರಾಯೋಗಿಕ ಪರೀಕ್ಷೆಯ (Practical Exam) ಅಂಕಗಳನ್ನು Online ನಲ್ಲಿ ನಮೂದಿಸುವ ಅವಕಾಶವನ್ನು ಕಲ್ಪಿಸಲಾಗಿದೆ. ಅದೇ ಪ್ರಾಯೋಗಿಕ ಪರೀಕ್ಷಾ ಕೇಂದ್ರಗಳಲ್ಲಿಯೇ ವಿದ್ಯಾರ್ಥಿಗಳು ಪಡೆದ NSQF ಪ್ರಾಯೋಗಿಕ ಪರೀಕ್ಷೆಯ (Practical Exam) ವಿಷಯಗಳನ್ನೊಳಗೊಂಡ ಅಂಕಗಳನ್ನು, ಪ್ರಾಯೋಗಿಕ ಪರೀಕ್ಷಾ ಕೇಂದ್ರಗಳಿಗೆ ತಿಳಿಸಲಾಗುವ ಲಿಂಕ್ ಮುಖಾಂತರ ಪರೀಕ್ಷಾ ದಿನದಂದು ಕಡ್ಡಾಯವಾಗಿ Online ನಲ್ಲಿ ನಮೂದಿಸುವುದು.
ಪ್ರಾಯೋಗಿಕ ಪರೀಕ್ಷೆಯ ಅಂಕಗಳನ್ನು Empty Mark List Internal and External Examiner ಸಹಿ ಮಾಡುವುದು. ನಂತರ Mark List ಗಳನ್ನು ಸೀಲ್ ಮಾಡಿದ ಲಕೋಟೆಯಲ್ಲಿರಿಸಿ, ಲಕೋಟೆಯ ಮೇಲೆ ದಪ್ಪ ಅಕ್ಷರಗಳಲ್ಲಿ NSQF ಎಂದು ಮಾರ್ಕರ್ ಪೆನ್ನಿನಿಂದ ಬರೆದು ಜಂಟಿ ನಿರ್ದೇಶಕರು (ಪರೀಕ್ಷೆ), ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ, 6ನೇ ಅಡ್ಡ ರಸ್ತೆ, ಮಲ್ಲೇಶ್ವರಂ, ಬೆಂಗಳೂರು-03 ಇಲ್ಲಿಗೆ ನೋಂದಾಯಿತ ಅಂಚೆ ಮುಖಾಂತರ ಕಳುಹಿಸುವುದು.




