HomeLatest NewsBREAKING : ತೆಲಂಗಾಣ-ಛತ್ತೀಸ್‌'ಗಢ ಗಡಿಯಲ್ಲಿ ಭದ್ರತಾ ಪಡೆಗಳಿಂದ ಎನ್‌’ಕೌಂಟರ್ : ಐವರು ನಕ್ಸಲರ ಹತ್ಯೆ

BREAKING : ತೆಲಂಗಾಣ-ಛತ್ತೀಸ್‌’ಗಢ ಗಡಿಯಲ್ಲಿ ಭದ್ರತಾ ಪಡೆಗಳಿಂದ ಎನ್‌’ಕೌಂಟರ್ : ಐವರು ನಕ್ಸಲರ ಹತ್ಯೆ

ಹೈದರಾಬಾದ್: ತೆಲಂಗಾಣ ಮತ್ತು ಛತ್ತೀಸ್‌ಗಢ ಗಡಿಭಾಗದ ಕರ್ರೆಗುಟ್ಟ ಅರಣ್ಯ ಪ್ರದೇಶದಲ್ಲಿ  ಮತ್ತೊಮ್ಮೆ ಗುಂಡಿನ ಸದ್ದು ಕೇಳಿಬಂದಿದೆ  . ಭದ್ರತಾ ಪಡೆಗಳು ನಡೆಸಿದ ಬೃಹತ್ ಕಾರ್ಯಾಚರಣೆಯಲ್ಲಿ ಐವರು ಮಾವೋವಾದಿಗಳು ಹತರಾಗಿದ್ದಾರೆ.

ಮಾವೋವಾದಿಗಳ ಉನ್ನತ ನಾಯಕರನ್ನೇ ಗುರಿಯಾಗಿಸಿಕೊಂಡು ಸುಮಾರು 5,000 ಸಿಆರ್‌ಪಿಎಫ್ (CRPF), ಗ್ರೇಹೌಂಡ್ಸ್ ಮತ್ತು ಛತ್ತೀಸ್‌ಗಢ ಪೊಲೀಸ್ ಬಲಗಳು ಜಂಟಿಯಾಗಿ ಈ ಕೂಂಬಿಂಗ್ ಕಾರ್ಯಾಚರಣೆ ನಡೆಸಿದ್ದವು. ಈ ವೇಳೆ ಎದುರಾದ ಮಾವೋವಾದಿಗಳು ಗುಂಡಿನ ದಾಳಿ ನಡೆಸಿದಾಗ, ಭದ್ರತಾ ಪಡೆಗಳು ಪ್ರತಿ ದಾಳಿ ನಡೆಸಿದವು. ಈ ಭೀಕರ ಎನ್‌ಕೌಂಟರ್‌ನಲ್ಲಿ ಐವರು ಮಾವೋವಾದಿಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರ ಪೈಕಿ ಪ್ರಮುಖ ನಾಯಕರು ಇರುವ ಸಾಧ್ಯತೆ ದಟ್ಟವಾಗಿದೆ.

ಕೇಂದ್ರ ಸರ್ಕಾರವು ದೇಶವನ್ನು ಮಾವೋವಾದಿ ಮುಕ್ತಗೊಳಿಸುವ ಉದ್ದೇಶದಿಂದ ‘ಆಪರೇಷನ್ ಕಗಾರ್’ ಅನ್ನು ಆರಂಭಿಸಿದೆ. ಈ ಕಾರ್ಯಾಚರಣೆಯ ಭಾಗವಾಗಿ ದೇವ್‌ಜಿಯಂತಹ ಅಗ್ರ ನಾಯಕರನ್ನು ಮಟ್ಟಹಾಕಲು ಅರಣ್ಯದಲ್ಲಿ ಹದ್ದಿನ ಕಣ್ಣಿಡಲಾಗಿದೆ. ಈ ದಾಳಿಗಳ ಭೀತಿಯಿಂದಾಗಿ ಈಗಾಗಲೇ ಹಲವು ಮಾವೋವಾದಿಗಳು ಶರಣಾಗಲು ಮುಂದಾಗುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೇಂದ್ರ ಸರ್ಕಾರವು 2024ರ ಜನವರಿ 1 ರಿಂದ ಈ ವಿಶೇಷ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದು, ದೇಶಾದ್ಯಂತ ಮಾವೋವಾದಿಗಳ ಅಸ್ತಿತ್ವವನ್ನು ಸಂಪೂರ್ಣವಾಗಿ ಅಳಿಸಲು ಮಾರ್ಚ್ 31, 2026 ಅನ್ನು ಅಂತಿಮ ಗಡುವು (Deadline) ಎಂದು ನಿಗದಿಪಡಿಸಿದೆ.ಈ ಗುರಿ ತಲುಪಲು ಭದ್ರತಾ ಪಡೆಗಳಿಗೆ ಕೇವಲ 40 ದಿನಗಳು ಮಾತ್ರ ಬಾಕಿ ಇವೆ.ಈ ಅವಧಿಯೊಳಗೆ ಅಗ್ರ ನಾಯಕರನ್ನು ಸೆರೆಹಿಡಿಯುವುದು ಅಥವಾ ಅವರು ಶರಣಾಗುವಂತೆ ಮಾಡುವುದು ಸರ್ಕಾರದ ಉದ್ದೇಶವಾಗಿದೆ.ಈ ಹಿನ್ನೆಲೆಯಲ್ಲಿ ಗಡಿಭಾಗದ ಅರಣ್ಯಗಳಲ್ಲಿ ಹಿಂದೆಂದೂ ಕಾಣದ ರೀತಿಯಲ್ಲಿ ಬೃಹತ್ ಸಂಖ್ಯೆಯ ಭದ್ರತಾ ಪಡೆಗಳನ್ನು ನಿಯೋಜಿಸಿ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular