ಕಂಪನಿಯ ಲಕ್ಕಿ ಡ್ರಾನಲ್ಲಿ ಉದ್ಯೋಗಿಗೆ ಬಂಪರ್; 365 ದಿನಗಳ ವೇತನ ಸಹಿತ ರಜೆ‌ ಜಾಕ್‌ ಪಾಟ್

ಸಾಮಾನ್ಯವಾಗಿ ತನ್ನ ಉದ್ಯೋಗಿಗಳಿಗೆ ರಜೆಗಳನ್ನು ಕೊಡುವ ವಿಚಾರದಲ್ಲಿ ಯಾವುದೇ ಕಂಪನಿ ಅಷ್ಟು ಧಾರಾಳಿಯಾಗಿರುವುದಿಲ್ಲ. ಆದರೆ ಚೀನಾದ ಈ ಉದ್ಯೊಗಿಯೊಬ್ಬರಿಗೆ ಭರ್ಜರಿ ರಜೆಯ ಜಾಕ್‌ಪಾಟ್ ಒಲಿದಿದೆ.

ಶೆಂಜ಼ೆನ್ ಪ್ರಾಂತ್ಯದ ಗುವಾಂಗ್‌ಡೊಂಗ್‌ನ ಕಂಪನಿಯೊಂದು ಏಪ್ರಿಲ್ 9ರಂದು ಆಯೋಜಿಸಿದ್ದ ವಾರ್ಷಿಕ ಡಿನ್ನರ್‌ ಕಾರ್ಯಕ್ರಮದಲ್ಲಿ ರಜೆಯ ಲಾಟರಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಸ್ಫರ್ಧೆಯಲ್ಲಿ ಬಂಪರ್‌ ಬಹುಮಾನ ಗೆದ್ದ ಉದ್ಯೋಗಿಯೊಬ್ಬರಿಗೆ ಒಂದು ವರ್ಷದ ಮಟ್ಟಿಗೆ ವೇತನ ಸಹಿತ ರಜೆಯ ಭಾರೀ ಬಹುಮಾನ ಒಲಿದಿದೆ!

ಈ ಲಕ್ಕಿ ಡ್ರಾನಲ್ಲಿ ಬಹುಮಾನ ಹಾಗೂ ದಂಡಗಳ ಸಾಧ್ಯತೆಗಳೂ ಸೇರಿದ್ದವು. ದಂಡದ ರೂಪದಲ್ಲಿ ಮನೆಯಲ್ಲಿ ಮಾಡಿದ ಪೇಯದ ಸೇವನೆ ಅಥವಾ ವೇಟರ್‌ ಆಗಿ ಕೆಲಸ ಮಾಡುವಂಥ ಟಾಸ್ಕ್‌ಗಳಿದ್ದರೆ, ಬಹುಮಾನವಾಗಿ ಹೆಚ್ಚುವರಿಯಾಗಿ ವೇತನ ಸಹಿತ ರಜೆಗಳಿದ್ದವು.

ಕೋವಿಡ್-19 ಸೋಂಕಿನ ಅವಾಂತರದ ಹಿನ್ನೆಲೆಯಲ್ಲಿ ಮೂರು ವರ್ಷಗಳ ಬಳಿಕ ಇಂಥದ್ದೊಂದು ಲಕ್ಕಿ ಡ್ರಾ ಇರುವ ವಾರ್ಷಿಕ ಡಿನ್ನರ್‌ ಆಯೋಜಿಸಲಾಗಿತ್ತು. 365 ದಿನಗಳ ಕಾಲ ವೇತನ ಸಹಿತ ರಜೆಯ ಸಾಧ್ಯತೆಯು ಈ ಲಕ್ಕಿ ಡ್ರಾನಲ್ಲಿ ಭಾರೀ ಕಡಿಮೆ ಎಂದು ಹೇಳಲಾಗುತ್ತದೆ.

ಅಂದ ಹಾಗೆ, ಈ ಬಂಪರ್‌ ಜಯಿಸಿದ ಉದ್ಯೋಗಿಯ ಹೆಸರೇನೆಂದು ತಿಳಿದು ಬಂದಿಲ್ಲ.

https://twitter.com/NewsBFM/status/1646839718565531648?ref_src=twsrc%5Etfw%7Ctwcamp%5Etweetembed%7Ctwterm%5E1646839718565531648%7Ctwgr%5E66295dd914d45872ee51b6d293aff190096902aa%7Ctwcon%5Es1_&ref_url=https%3A%2F%2Fwww.news18.com%2Fbuzz%2Femployee-wins-365-days-of-paid-leaves-in-companys-lucky-draw-boss-in-shock-7554199.html

https://twitter.com/mizzusomething/status/1646892610341208064?ref_src=twsrc%5Etfw%7Ctwcamp%5Etweetembed%7Ctwterm%5E1646892610341208064%7Ctwgr%5E66295dd914d45872ee51b6d293aff190096902aa%7Ctwcon%5Es1_&ref_url=https%3A%2F%2Fwww.news18.com%2Fbuzz%2Femployee-wins-365-days-of-paid-leaves-in-companys-lucky-draw-boss-in-shock-7554199.html

https://twitter.com/pearlywongwc/status/1646868999874187265?ref_src=twsrc%5Etfw%7Ctwcamp%5Etweetembed%7Ctwterm%5E1646868999874187265%7Ctwgr%5E66295dd914d45872ee51b6d293aff190096902aa%7Ctwcon%5Es1_&ref_url=https%3A%2F%2Fwww.news18.com%2Fbuzz%2Femployee-wins-365-days-of-paid-leaves-in-companys-lucky-draw-boss-in-shock-7554199.html

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read