HomeInternationalಉಕ್ರೇನ್​ ಸೈನಿಕ, ಗರ್ಭಿಣಿ ಪತ್ನಿಯ ಸಮ್ಮಿಲನ: ಭಾವುಕ ವಿಡಿಯೋ ವೈರಲ್​

ಉಕ್ರೇನ್​ ಸೈನಿಕ, ಗರ್ಭಿಣಿ ಪತ್ನಿಯ ಸಮ್ಮಿಲನ: ಭಾವುಕ ವಿಡಿಯೋ ವೈರಲ್​

ಉಕ್ರೇನ್‌ನಲ್ಲಿ ಯುದ್ಧ ನಡೆಯುತ್ತಿರುವಾಗ, ಸೈನಿಕನ ಗರ್ಭಿಣಿ ಪತ್ನಿ ಮತ್ತು ಸೈನಿಕನ ಭಾವನಾತ್ಮಕ ಪುನರ್ಮಿಲನದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ವಿಡಿಯೋ ನೋಡುಗರ ಹೃದಯವನ್ನು ಕಲಕುತ್ತದೆ.

ಆಂಟನ್ ಗೆರಾಶ್ಚೆಂಕೊ ಅವರು ಟ್ವಿಟರ್‌ನಲ್ಲಿ ಇದನ್ನು ಪೋಸ್ಟ್ ಮಾಡಿದ್ದಾರೆ. ಗರ್ಭಿಣಿ ಪತ್ನಿ ತನ್ನ ಪತಿಯನ್ನು ಭೇಟಿಯಾಗಲು ಸಾಗುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಆಕೆ ಪತಿಯನ್ನು ನೋಡಿದ ತಕ್ಷಣ ಓಡಿ ಹೋಗಿ ತಬ್ಬಿಕೊಳ್ಳುವ ಮನ ಮಿಡಿಯುವ ವಿಡಿಯೋ ಇದಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಿಡಿಯೋ ಜೊತೆಗೆ, “ಅವರು 30 ವಾರಗಳಿಂದ ಒಬ್ಬರನ್ನೊಬ್ಬರು ನೋಡಿಲ್ಲ” ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ. ಈ ವಿಡಿಯೋ ಟ್ವಿಟರ್‌ನಲ್ಲಿ 24 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಯುದ್ಧವು ತುಂಬಾ ಕ್ರೂರವಾಗಿದೆ ಎಂದು ಹಲವರು ಬರೆದುಕೊಂಡಿದ್ದಾರೆ.

 

For Latest News Updates, Join Our Whatsapp Community🚩
RELATED ARTICLES

Most Popular