HomeBusinessಹಣ್ಣುಗಳ ರಾಜ ಮಾವಿನ ಹಣ್ಣು ಡಜನ್ ಗೆ 1300 ರೂ.: ಮಾಸಿಕ ಕಂತಿನಲ್ಲಿ ಮಾವು ಖರೀದಿಗೆ...

ಹಣ್ಣುಗಳ ರಾಜ ಮಾವಿನ ಹಣ್ಣು ಡಜನ್ ಗೆ 1300 ರೂ.: ಮಾಸಿಕ ಕಂತಿನಲ್ಲಿ ಮಾವು ಖರೀದಿಗೆ ಅವಕಾಶ

ಪುಣೆ: ಹಣ್ಣುಗಳ ರಾಜ ಎಂದೇ ಹೆಸರಾಗಿರುವ ಮಾವಿನ ಹಣ್ಣು ದರ ಗಗನಕ್ಕೇರಿದೆ. ಮಾವಿನಹಣ್ಣಿನ ದರ ಭಾರಿ ಹೆಚ್ಚಾಗಿದ್ದು, ಖರೀದಿಸಲು ಜನಸಾಮಾನ್ಯರು ಹಿಂದೆ ಮುಂದೆ ನೋಡುವಂತಾಗಿದೆ.

ದೇವಗಡ ಮತ್ತು ರತ್ನಗಿರಿಯ ಅಲ್ಫೊನ್ಸೊ ಮಾವು ಚಿಲ್ಲರೆ ಮಾರುಕಟ್ಟೆಯಲ್ಲಿ ಡಜನ್ ಗೆ 800 ರಿಂದ 1,300 ರೂ.ವರೆಗೆ ಮಾರಾಟವಾಗುತ್ತಿದೆ. ಗ್ರಾಹಕರನ್ನು ಸೆಳೆಯಲು ವಿವಿಧ ತಂತ್ರಗಳನ್ನು ಅನುಸರಿಸುವ ವ್ಯಾಪಾರಿಗಳು ಈಗ ಮಾಸಿಕ ಕಂತು ಮೂಲಕ ಮಾವು ಖರೀದಿಸಲು ಅವಕಾಶ ಕಲ್ಪಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪುಣೆಯ ಗುರುಕೃಪಾ ಟ್ರೇಡರ್ಸ್ ಅಂಡ್ ಫ್ರೂಟ್ ಪ್ರೊಡಕ್ಟ್ಸ್ ನವರು ಇಎಂಐನಲ್ಲಿ ಮಾವಿನ ಹಣ್ಣು ಮಾರಾಟ ಮಾಡುತ್ತಿದ್ದಾರೆ. 5,000 ರೂ.ವರೆಗೆ ಮಾವಿನ ಹಣ್ಣು ಖರೀದಿಸುವ ಗ್ರಾಹಕರಿಗೆ ಇಎಂಐ ಆಯ್ಕೆ ನೀಡಲಾಗಿದೆ. ಗ್ರಾಹಕರು ಕ್ರೆಡಿಟ್ ಕಾರ್ಡ್ ಬಳಸಿ ಮಾವಿನಹಣ್ಣು ಖರೀದಿಸಬೇಕಿದ್ದು, ಪಾವತಿ ಮೊತ್ತವನ್ನು ಮೂರು ತಿಂಗಳು, ಆರು ತಿಂಗಳು ಅಥವಾ 12 ತಿಂಗಳಾಗಿ ಪರಿವರ್ತಿಸಲಾಗುತ್ತದೆ. ಟಿವಿ, ಫ್ರಿಡ್ಜ್ ಮಾದರಿಯಲ್ಲಿ ಮಾಸಿಕ ಕಂತುಗಳಲ್ಲಿ ಮಾವಿನಹಣ್ಣು ಖರೀದಿಸಲು ಅವಕಾಶ ಕಲ್ಪಿಸಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular