HomeEntertainment'ಎಲ್ರ ಕಾಲೆಳಿಯತ್ತೆ ಕಾಲ' ಚಿತ್ರದ ‘ಟುಣ್ ಟುಣ್’ ಸಾಂಗ್ ರಿಲೀಸ್ : ಸಖತ್ ಟ್ರೆಂಡ್ ಸೃಷ್ಟಿಸುತ್ತಿದೆ...

‘ಎಲ್ರ ಕಾಲೆಳಿಯತ್ತೆ ಕಾಲ’ ಚಿತ್ರದ ‘ಟುಣ್ ಟುಣ್’ ಸಾಂಗ್ ರಿಲೀಸ್ : ಸಖತ್ ಟ್ರೆಂಡ್ ಸೃಷ್ಟಿಸುತ್ತಿದೆ ಚಂದನ್ ಶೆಟ್ಟಿ ಮ್ಯೂಸಿಕ್ ಮ್ಯಾಜಿಕ್!

ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ಮತ್ತು ಗಾಯಕ ಚಂದನ್ ಶೆಟ್ಟಿ ಅಭಿನಯದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ‘ಎಲ್ರ ಕಾಲೆಳಿಯತ್ತೆ ಕಾಲ’ ಕೂಡ ಒಂದು. ಸದ್ಯ ಈ ಸಿನಿಮಾದ ಬಹುನಿರೀಕ್ಷಿತ ‘ಟುಣ್ ಟುಣ್’ ಹೆಸರಿನ ರೋಮಾಂಚಕ ಹಾಡೊಂದು ಅಧಿಕೃತವಾಗಿ ಬಿಡುಗಡೆಯಾಗಿದ್ದು, ಕೇಳುಗರಿಂದ ಅತ್ಯುತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.

ಈ ವಿಶಿಷ್ಟವಾದ ಹಾಡಿಗೆ ಸ್ವತಃ ಚಂದನ್ ಶೆಟ್ಟಿ ಅವರೇ ಸಂಗೀತ ನಿರ್ದೇಶನ ಮಾಡಿ, ಸಾಹಿತ್ಯ ಬರೆದಿದ್ದಾರೆ. ಇನ್ನು ಈ ಹಾಡಿನ ಮತ್ತೊಂದು ದೊಡ್ಡ ಹೈಲೈಟ್ ಎಂದರೆ ಇದರ ಗಾಯನ. ಚಂದನ್ ಶೆಟ್ಟಿ ಅವರ ಜೊತೆಗೆ ದಕ್ಷಿಣ ಭಾರತದ ಖ್ಯಾತ ಗಾಯಕಿ, ಜಾನಪದ ಕೋಗಿಲೆ ಎಂದೇ ಹೆಸರಾಗಿರುವ ಮಂಗ್ಲಿ ಅವರು ಧ್ವನಿಗೂಡಿಸಿದ್ದಾರೆ. ಇವರಿಬ್ಬರ ಧ್ವನಿಯ ಜುಗಲ್‌ಬಂದಿ ಹಾಡಿನ ಜೋಶ್ ಅನ್ನು ಮತ್ತಷ್ಟು ಹೆಚ್ಚಿಸಿದೆ. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಈ ಸಾಂಗ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ರೀಲ್ಸ್ ಪ್ರೇಮಿಗಳ ಗಮನ ಸೆಳೆಯುತ್ತಿದೆ.

ಅದ್ದೂರಿ ತಾರಾಗಣ ರಾಜಗುರು ಹೊಸಕೋಟೆ ಅವರ ಕಥೆ ಹೊಂದಿರುವ ಈ ಚಿತ್ರವನ್ನು ಸುಜಯ್ ಶಾಸ್ತ್ರಿ ಅವರು ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಚಂದನ್ ಶೆಟ್ಟಿ ಅವರಿಗೆ ಜೋಡಿಯಾಗಿ ಅರ್ಚನಾ ಕೊಟ್ಟಿಗೆ ನಟಿಸಿದ್ದು, ಪ್ರಮುಖ ಪಾತ್ರಗಳಲ್ಲಿ ತಾರಾ ಅನುರಾಧಾ, ಮಂಡ್ಯ ರಮೇಶ್, ಮಂಜು ಪಾವಗಡ ಹಾಗೂ ಹಿರಿಯ ನಟ ದತ್ತಣ್ಣ ಅವರಂತಹ ಪ್ರತಿಭಾವಂತ ಕಲಾವಿದರ ದಂಡೇ ಇದೆ. ಗೋಕುಲ ಎಂಟರ್‌ಟೈನರ್ಸ್ ಬ್ಯಾನರ್ ಅಡಿಯಲ್ಲಿ ಉಷಾ ಗೋವಿಂದರಾಜು ಅವರು ಈ ಚಿತ್ರವನ್ನು ಅತ್ಯಂತ ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಚಿತ್ರದ ದೃಶ್ಯಗಳನ್ನು ವಿಶ್ವಜಿತ್ ರಾವ್ ಅವರು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದು, ಮೋಹನ್ ಎಲ್ ರಂಗಕಹಳೆ ಅವರ ಸಂಕಲನ ಈ ಚಿತ್ರಕ್ಕಿದೆ. ಗಿರೀಶ್ ಬಿಎಂ ಅವರ ಸೌಂಡ್ ಡಿಸೈನ್ ಚಿತ್ರದ ತಾಂತ್ರಿಕ ಗುಣಮಟ್ಟವನ್ನು ಹೆಚ್ಚಿಸಿದೆ. ಬಾಲೂ ಕುಮಟಾ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡಿದ್ದು, ವಸಂತ್ ನಾಗಣ್ಣ ಮತ್ತು ಗುರು ಎ ಉತ್ಪಾದನಾ ವಿಭಾಗವನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಅಭಿಷೇಕ್ ಅವರ ಪಬ್ಲಿಸಿಟಿ ಡಿಸೈನ್ ಈಗಾಗಲೇ ಸಿನಿಪ್ರೇಮಿಗಳ ಗಮನ ಸೆಳೆದಿದೆ.

ಸದ್ಯ ಬಿಡುಗಡೆಯಾಗಿರುವ ‘ಟುಣ್ ಟುಣ್’ ಹಾಡು ಸಿನಿಮಾದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದ್ದು, ಇಡೀ ಚಿತ್ರತಂಡ ಹೊಸ ಆಲ್ಬಂ ಯಶಸ್ಸಿನ ಖುಷಿಯಲ್ಲಿದೆ. ನೀವು ಇನ್ನು ಈ ಹಾಡನ್ನು ಕೇಳದಿದ್ದರೆ ತಕ್ಷಣವೇ ಯುಟ್ಯೂಬ್ ಸೇರಿದಂತೆ ಪ್ರಮುಖ ಆಡಿಯೋ ಪ್ಲಾಟ್‌ಫಾರ್ಮ್‌ಗಳಲ್ಲಿ ಆಲಿಸಬಹುದಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular