HomeLatest Newsಜೇನು ನೊಣಗಳಿಗೆ ಬೆದರಿ ಬಸ್ ನಿಲ್ದಾಣಕ್ಕೆ ನುಗ್ಗಿದ ಆನೆ, ದಿಕ್ಕಾಪಾಲಾಗಿ ಓಡಿದ ಜನ

ಜೇನು ನೊಣಗಳಿಗೆ ಬೆದರಿ ಬಸ್ ನಿಲ್ದಾಣಕ್ಕೆ ನುಗ್ಗಿದ ಆನೆ, ದಿಕ್ಕಾಪಾಲಾಗಿ ಓಡಿದ ಜನ

ಚಾಮರಾಜನಗರ: ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆಯಲ್ಲಿ ಆನೆಯೊಂದು ಜೇನು ನೊಣಗಳಿಗೆ ಬೆದರಿ ಪಟ್ಟಣಕ್ಕೆ ನುಗ್ಗಿದೆ. ಇದರಿಂದಾಗಿ ಕೆಲ ಹೊತ್ತು ಆತಂಕ ಸೃಷ್ಟಿಯಾಗಿತ್ತು. ಪಟ್ಟಣದ ಪ್ರಮುಖ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಓಡಿದ ಆನೆ ನಂತರ ಗ್ರಾಮಗಳತ್ತ ಹೆಜ್ಜೆ ಹಾಕಿದೆ.

ಶುಕ್ರವಾರ ಸಂಜೆ 6 ಗಂಟೆ ಸುಮಾರಿಗೆ ಗುಂಡ್ಲುಪೇಟೆ ಪಟ್ಟಣಕ್ಕೆ ಆನೆ ಓಡಿ ಬರುವುದನ್ನು ಕಂಡ ಜನ ಆತಂಕದಿಂದ ದಿಕ್ಕಾಪಾಲಾಗಿ ಓಡಿದ್ದಾರೆ. ಕೆಎಸ್ಆರ್ಟಿಸಿ ಬಸ್ ನಿಲ್ದಾಣದೊಳಗೆ ಸುತ್ತಾಡಿದ ಆನೆ ಮಲ್ಲಯ್ಯನಪುರದ ಕಡೆಗೆ ತೆರಳಿದೆ.  ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಆನೆಯನ್ನು ನಿಯಂತ್ರಿಸಲು ಹರಸಾಹಸ ನಡೆಸಿದ್ದಾರೆ.

ಗುಂಡ್ಲುಪೇಟೆ ತಾಲೂಕಿನ ಕಲ್ಲಹಳ್ಳಿ ಗ್ರಾಮದ ಸಮೀಪ ಹುಲಿ ಸೆರೆ ಕೂಂಬಿಂಗ್ ಕಾರ್ಯಾಚರಣೆಗೆ ಬಂಡೀಪುರದ ರಾಂಪುರ ಶಿಬಿರದ ಪಾರ್ಥಸಾರಥಿ ಆನೆಯನ್ನು ಕರೆಯಲಾಗಿತ್ತು. ಕೆರೆಯಲ್ಲಿ ನೀರು ಕುಡಿಸುವ ವೇಳೆ ಮರದಲ್ಲಿದ್ದ ಗೂಡು ಕಟ್ಟಿದ್ದ ಜೇನು ಹುಳಗಳು ಕಚ್ಚಿದ ಪರಿಣಾಮ ಆನೆ ದಿಕ್ಕಾಪಾಲಾಗಿ ಓಡಿದೆ. ಮಾವುತ ಚೇತನ್ ಅವರ ಹಿಡಿತಕ್ಕೆ ಸಿಲುಕದ ಆನೆ ಪಟ್ಟಣಕ್ಕೆ ನುಗ್ಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು, ನೌಕರರು ಹಿಂಬಾಲಿಸಿಕೊಂಡು ಬಂದು ಕೊನೆಗೆ ಆನೆಯನ್ನು ನಿಯಂತ್ರಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular