HomeKarnatakaವಿದ್ಯುತ್ ತಂತಿ ತಗುಲಿ ಹಿಂಡಿನಲ್ಲಿದ್ದ ‘ಕಾಡಾನೆ’ ಸಾವು: ಸ್ಥಳದಲ್ಲೇ ಬೀಡು ಬಿಟ್ಟ ‘ಗಜಪಡೆ’: 11 ಗ್ರಾಮಗಳಲ್ಲಿ...

ವಿದ್ಯುತ್ ತಂತಿ ತಗುಲಿ ಹಿಂಡಿನಲ್ಲಿದ್ದ ‘ಕಾಡಾನೆ’ ಸಾವು: ಸ್ಥಳದಲ್ಲೇ ಬೀಡು ಬಿಟ್ಟ ‘ಗಜಪಡೆ’: 11 ಗ್ರಾಮಗಳಲ್ಲಿ ನಿಷೇಧಾಜ್ಞೆ ಜಾರಿ

ಚಿಕ್ಕಮಗಳೂರು: 24 ಕಾಡಾನೆಗಳ ಹಿಂಡಿದಲ್ಲಿದ್ದ ಸಲಗ ವಿದ್ಯುತ್ ತಂತಿ ತುಳಿದು ಮೃತಪಟ್ಟಿದ್ದು, ನಿನ್ನೆ ಮಧ್ಯಾಹ್ನದಿಂದಲೂ ಕಾಡಾನೆಗಳು ಸ್ಥಳದಲ್ಲೇ ಬಿಡು ಬಿಟ್ಟಿವೆ. ಮುಂಜಾಗ್ರತೆ ಕ್ರಮವಾಗಿ ಗ್ರಾಮದಲ್ಲಿ 11 ಗ್ರಾಮದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

ಚಿಕ್ಕಮಗಳೂರಿನಲ್ಲಿ ವಿದ್ಯುತ್ ಶಾಕ್ ನಿಂದ ಒಂಟಿ ಸಲಗ ಮೃತಪಟ್ಟಿದೆ. ಮೃತಪಟ್ಟ ವಿಕ್ರಾಂತ್ ಆನೆಯ ಬಳಿ 23 ಕಾಡಾನೆಗಳು ನಿಂತಿವೆ. ಚಿಕ್ಕಮಗಳೂರು ತಾಲೂಕಿನ ಆಲ್ದೂರುಪುರ ಗ್ರಾಮದಲ್ಲಿ ಘಟನೆ ನಡೆದಿದೆ.

ನಿನ್ನೆ ಮಧ್ಯಾಹ್ನದಿಂದಲೂ ಅದೇ ಸ್ಥಳದಲ್ಲಿ ಗಜಪಡೆ ಅಲ್ಲೇ ಉಳಿದಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಹೊಸಹಳ್ಳಿ, ತೋರಣಮಾವು, ಚಿತ್ತವಳ್ಳಿ ಸೇರಿದಂತೆ 11 ಗ್ರಾಮಗಳಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಾವನ್ನಪ್ಪಿದ ಒಂಟಿ ಸಲಗದ ಬಳಿಯೇ 23 ಆನೆಗಳಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ದಾಳಿಗೆ ಯತ್ನಿಸಿವೆ. ಕಾಡಾನೆಗಳು ತೆರಳುಗುವವರೆಗೆ ಸ್ಥಳಕ್ಕೆ ಹೋಗದಂತೆ ಸೂಚನೆ ನೀಡಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular