HomeKarnatakaಕಾಡಾನೆ ದಾಳಿಗೆ ಮತ್ತೋರ್ವ ರೈತ ಸಾವು

ಕಾಡಾನೆ ದಾಳಿಗೆ ಮತ್ತೋರ್ವ ರೈತ ಸಾವು

ರಾಮನಗರ: ಕಾಡಾನೆ ದಾಳಿಗೆ ರೈತರಿಬ್ಬರು ಬಲಿಯಾಗಿರುವ ಘಟನೆ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಹೆಗ್ಗನೂರು ಗ್ರಾಮದಲ್ಲಿ ನಡೆದಿದೆ.

65 ವರ್ಷದ ಕರಿಯಪ್ಪ ಮೃತರು. ಜಮೀನಿನಲ್ಲಿ ಹಾಕಿದ್ದ ಮೆದೆ ನೋಡಲು ಬೆಳಿಗ್ಗೆ ಹೋಗಿದ್ದ ಕರಿಯಪ್ಪ ಮೇಲೆ ಕಾಡಾನೆ ದಾಳಿ ನಡೆಸಿದೆ. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಮಾರ್ಗ ಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ.

ಸಾತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular